Sandalwood Drug Case: ಸ್ಯಾಂಡಲ್​ವುಡ್ ಡ್ರಗ್ ಕೇಸ್; ಸಿಸಿಬಿ ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ

Sandalwood Drug Scandal: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಸುಬ್ರಮಣಿಯನ್ ಬಂಧಿತ ನಟಿಯೊಬ್ಬರೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ನಟಿ ಮೂರ್ನಾಲ್ಕು ಬಾರಿ ಸುಬ್ರಮಣಿಯನ್ ವಾಸವಿದ್ದ ಫ್ಲಾಟ್ ಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

news18-kannada
Updated:September 20, 2020, 4:17 PM IST
Sandalwood Drug Case: ಸ್ಯಾಂಡಲ್​ವುಡ್ ಡ್ರಗ್ ಕೇಸ್; ಸಿಸಿಬಿ ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ
ಬಂಧಿತ ಸಂತೋಷ್ ಜೊತೆ ಆರೋಪಿ ಶ್ರೀನಿವಾಸ್ ಸುಬ್ರಮಣಿಯನ್
  • Share this:
ಬೆಂಗಳೂರು (ಸೆ. 20): ಸ್ಯಾಂಡಲ್​ವುಡ್ ಡ್ರಗ್ಸ್ ಡೀಲ್ ಪ್ರಕರಣ ತನಿಖೆ ವೇಗ ಪಡೆದುಕೊಳ್ಳುತ್ತಿದ್ದಂತೆ ಮತ್ತಷ್ಟು ಮಂದಿ ಖಾಕಿ ಬಲೆಗೆ ಸಿಲುಕಿ ಕೊಳ್ಳುತ್ತಿದ್ದಾರೆ. ಡ್ರಗ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ಮತ್ತೊರ್ವನನ್ನು ಬಂಧಿಸಿದ್ದಾರೆ. ನಗರದ ಸಹಕಾರನಗರ ನಿವಾಸಿ ಅಲಿಯಾಸ್ ಶ್ರೀನಿವಾಸ್ ಸುಬ್ರಮಣಿಯನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ಸುಬ್ರಮಣಿಯನ್ ಬಂಧಿತ ನಟಿಯೊಬ್ಬರೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ನಟಿ ಮೂರ್ನಾಲ್ಕು ಬಾರಿ ಸುಬ್ರಮಣಿಯನ್ ವಾಸವಿದ್ದ ಫ್ಲಾಟ್ ಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡ್ರಗ್ಸ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಸುಬ್ರಮಣಿಯನ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ನಿನ್ನೆ ಸುಬ್ರಮಣಿಯನ್ ಫ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿ ಫ್ಲಾಟ್ ನಲ್ಲಿ 13 ಎಕ್ಸಾಟಸಿ ಮಾತ್ರೆಗಳು, 100 ಗ್ರಾಂ ಗಾಂಜಾ, 101 ಗ್ರಾಂ MDMA, 0.5 ಗ್ರಾಂ ಹ್ಯಾಶಿಶ್ ಪತ್ತೆಯಾಗಿದ್ದು ಎಲ್ಲವನ್ನೂ ಜಪ್ತಿ ಮಾಡಿ ಸುಬ್ರಮಣಿಯನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Siddaramaiah: ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ; ಕುಮಾರಸ್ವಾಮಿ ಬೆನ್ನಲ್ಲೇ ಸಾ.ರಾ. ಮಹೇಶ್ ಟೀಕೆ

ಆರೋಪಿ ವಿಚಾರಣೆ ವೇಳೆ ನಟಿಯೊಬ್ಬರ ಜೊತೆಗಿನ ನಂಟು ಹಾಗೂ ಮತ್ತೊಬ್ಬ ಆರೋಪಿ ವೈಭವ್ ಜೈನ್ ಜೊತೆ ಸಂಪರ್ಕ ಇದ್ದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅಲ್ಲದೆ, ನಟ ಸಂತೋಷ್ ಕುಮಾರ್ ಜೊತೆಯೂ ನಂಟು ಹೊಂದಿದ ಸುಬ್ರಮಣಿಯನ್ ಇಬ್ಬರ ಜೊತೆ ಹಲವು ಕಡೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿ ಸುಬ್ರಮಣಿಯನ್ ಜೊತೆ ಸಂತೋಷ್ ಹಾಗೂ ವೈಭವ್ ಪೋಟೊಗಳು ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಆರೋಪಿ ಸುಬ್ರಮಣಿಯನ್ ಐಷಾರಾಮಿ ಜೀವನ ನಡೆಸುತ್ತಿದ್ದು, ನಗರದ ಹಲವೆಡೆ ಪ್ರಾಪರ್ಟಿ ಲೀಸ್ ಪಡೆದು ಬ್ಯುಸಿನೆಸ್ ನಡೆಸುತ್ತಿದ್ದ ಎನ್ನಲಾಗಿದೆ.

ಸದ್ಯ ಸಿಸಿಬಿ ಪೊಲೀಸರು ಡ್ರಗ್ ಡೀಲ್ ಸಂಬಂಧ ಟೆಕ್ನಿಕಲ್ ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಬಂಧಿಸಲ್ಪಟ್ಟಿರುವ ಆರೋಪಿ ವೈಭವ್ ಜೈನ್​ನಿಂದ ಮತ್ತಷ್ಟು ಮಾಹಿತಿ ಬೆಳಕಿಗೆ ಬಂದಿದೆ. ಡ್ರಗ್ ಪ್ರಕರಣದ ಮಾಸ್ಟರ್ ಮೈಂಡ್ ವೈಭವ್ ಜೈನ್ ಹಲವು ಸೆಲೆಬ್ರಿಟಿಗಳ ಜೊತೆ ಸಂಪರ್ಕ ಹೊಂದಿದ್ದ. ಹಲವಾರು ಮಂದಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದ. ಐಷಾರಾಮಿ ಕಾರುಗಳನ್ನ ಅಡ ಇಟ್ಟುಕೊಂಡು ಸಾಲ ನೀಡುತ್ತಿದ್ದ. ಸಂಜನಾ ಆಪ್ತ ಆರೋಪಿ ರಾಹುಲ್​ಗೂ 11 ಲಕ್ಷ ರೂ. ಸಾಲ ನೀಡಿದ್ದ. ದುಬಾರಿ ಬೆಲೆಯ ಕಾರು, ವಾಚ್, ಬೈಕ್, ಚಿನ್ನಾಭರಣವನ್ನು ಅಡವಾಗಿ ಇಟ್ಕೊಳ್ತಿದ್ದ.
Published by: Sushma Chakre
First published: September 20, 2020, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading