ಜಾತಿಗಳ ಮಧ್ಯೆ ಜಗಳ ತಂದಿಡುವವರು ಸಿಎಂ ಆಗಲು ಅಸಾಧ್ಯ; ಡಿಕೆ ಶಿವಕುಮಾರ್​ಗೆ ಮುನಿರತ್ನ ತಿರುಗೇಟು

ಜಾತಿಯನ್ನು ಮುಂದಿಟ್ಟುಕೊಂಡು ಹೋದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ಸಾಧ್ಯವೇ ಇಲ್ಲ. ಡಿಕೆಶಿ ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿಕೊಂಡು ರಾಜಕಾರಣ ಮಾಡಲಿ. ಜಾತಿಗಳ ನಡುವೆ ಜಗಳ ತಂದಿಡೋರು ಮುಖ್ಯಮಂತ್ರಿ ಆಗಲ್ಲ ಎಂದು ಮುನಿರತ್ನ ಹೇಳಿದ್ದಾರೆ.

news18-kannada
Updated:October 24, 2020, 12:04 PM IST
ಜಾತಿಗಳ ಮಧ್ಯೆ ಜಗಳ ತಂದಿಡುವವರು ಸಿಎಂ ಆಗಲು ಅಸಾಧ್ಯ; ಡಿಕೆ ಶಿವಕುಮಾರ್​ಗೆ ಮುನಿರತ್ನ ತಿರುಗೇಟು
ಮುನಿರತ್ನ
  • Share this:
ಬೆಂಗಳೂರು (ಅ. 24): ಮುನಿರತ್ನ ಒಕ್ಕಲಿಗ ಮುಖಂಡರನ್ನು ಬೆಳೆಸಿಲ್ಲ ಎಂಬ ಕಾಂಗ್ರೆಸಿಗರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಆರ್​ಆರ್​ ನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ, ಎಲ್ಲ ಜಾತಿಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವವರು ಮುಖ್ಯಮಂತ್ರಿ ಆಗುತ್ತಾರೆ. ಡಿಕೆ ಶಿವಕುಮಾರ್ ಇಂತಹ ಸಣ್ಣತನಗಳನ್ನೆಲ್ಲ ಬಿಡುವುದು ಉತ್ತಮ. ಕಳೆದ ಹತ್ತು ವರ್ಷಗಳಿಂದ ನಾನು ಕಾಂಗ್ರೆಸ್​ನಲ್ಲಿದ್ದಾಗ ಈ ಮಾತುಗಳು ಬರಲಿಲ್ಲ. ಇದೇ ಡಿಕೆ ಶಿವಕುಮಾರ್ ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ದಿನ ನನ್ನನ್ನು ಹಾಡಿ ಹೊಗಳಿದ್ದರು. ಆ ದಿನ ಜಾತಿ ಬಗ್ಗೆ ಮಾತಾಡದಿರೋರು ಇವತ್ತು ಜಾತಿ ಬಗ್ಗೆ ಮಾತಾಡಿ ಸ್ವಾರ್ಥ ತೋರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಡಿಕೆಶಿ ಜಾತಿ ಬಗ್ಗೆ ಮಾತಾಡಿ ಸಣ್ಣತನ ತೋರಿದ್ದಾರೆ. ಡಿಕೆಶಿ ಜಾತಿಗಳ ಬಗ್ಗೆ ಮಾತಾಡೋದು ಶೋಭೆ ತರುವುದಿಲ್ಲ. ಎಲ್ಲ ಜಾತಿ, ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗೋರು ಸಿಎಂ ಆಗುತ್ತಾರೆ. ನಾನು ಅವರ ಜೊತೆಯಲ್ಲಿದ್ದಾಗ ಏನೂ ಆರೋಪ ಮಾಡಲಿಲ್ಲ. ಮುನಿರತ್ನ ಜೊತೆಯಲ್ಲಿ ಇಲ್ಲ ಅಂತ ಇಲ್ಲಸಲ್ಲದ ಆರೋಪ ಮಾಡೋದು ಸರಿಯಲ್ಲ. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳು ನನಗೆ ನೋವು ತಂದಿವೆ. ನಾನು ವೋಟರ್ ಐಡಿಯಲ್ಲಿ ಗೌಡ ಅಂತ ಇರೋದನ್ನು ಡಿಲೀಟ್ ಮಾಡಿಸುವಷ್ಟು ನೀಚ ಕೆಲಸ ಮಾಡುವುದಿಲ್ಲ. ಅಂಥ ನೀಚ ಕೃತ್ಯಕ್ಕೆ ಕೈ ಹಾಕುವ ಸಂಸ್ಕೃತಿ‌ ನನ್ನದಲ್ಲ ಎಂದು ಮುನಿರತ್ನ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿಎಂ ಸೂಚನೆ ಬಳಿಕ ಎಚ್ಚೆತ್ತ ಅಧಿಕಾರಿಗಳು; ಕೊನೆಗೂ ಮಳೆಪೀಡಿತ ಪ್ರದೇಶಗಳಿಗೆ ಬಿಬಿಎಂಪಿ ಕಮಿಷನರ್ ಭೇಟಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ದೂರದೃಷ್ಟಿ‌ ಇಲ್ಲ. ಜಾತಿ ಜಾತಿ ಅಂತ ಹೋದರೆ ಅವರು ಮುಖ್ಯಮಂತ್ರಿ ಆಗೋಕೆ ಆಗುತ್ತಾ? ಹೀಗೆ ಜಾತಿಯನ್ನು ಮುಂದಿಟ್ಟುಕೊಂಡು ಹೋದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ಸಾಧ್ಯವೇ ಇಲ್ಲ. ಡಿಕೆಶಿ ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿಕೊಂಡು ರಾಜಕಾರಣ ಮಾಡಲಿ. ಜಾತಿಗಳ ನಡುವೆ ಜಗಳ ತಂದಿಡೋರು ಮುಖ್ಯಮಂತ್ರಿ ಆಗಲ್ಲ. ಲಿಂಗಾಯತರನ್ನು ಒಡೆದಾಳಲು ಹೋಗಿ ಕಾಂಗ್ರೆಸ್​ನವರು ಸರ್ಕಾರವನ್ನೇ ಕಳೆದುಕೊಂಡರು ಎಂದು ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಆರ್​ಆರ್​ ನಗರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ ವಿರುದ್ಧ ಕೂಡ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಮುನಿರಾಜು ಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದರೆ ತೊಂದರೆ ಇರುತ್ತಿರಲಿಲ್ಲ ಎಂಬ ಹನುಮಂತರಾಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿರುವ ಮುನಿರತ್ನ, ಮುನಿರಾಜು ಗೌಡರನ್ನು ಸೋಲಿಸಲು ರಾಮಚಂದ್ರಪ್ಪ ಪರ ಹನುಮಂತರಾಯಪ್ಪ ಹಗಲೂ ರಾತ್ರಿ ಕೆಲಸ ಮಾಡಿದ್ದರು. ಇವತ್ತು ಮುನಿರಾಜು ಗೌಡರ ಮೇಲೆ ಅವರಿಗೆ ಯಾಕೆ ಇಷ್ಟೊಂದು ಅಭಿಮಾನ ಅಂತ ಅರ್ಥ ಆಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ರಾಮಚಂದ್ರಪ್ಪನವರನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದು ಇದೇ ಹನುಮಂತರಾಯಪ್ಪ. ಒಕ್ಕಲಿಗ ಮುಖಂಡರಾದ ರಾಮಚಂದ್ರಪ್ಪ, ಎಂ. ಶ್ರೀನಿವಾಸ್ ಅವರನ್ನು ಮೂರನೇ ಸ್ಥಾನಕ್ಕೆ ಕಳಿಸಿದ್ದು ಹನುಮಂತರಾಯಪ್ಪ. ಮುನಿರಾಜುಗೌಡರನ್ನು ಸೋಲಿಸಿದ್ದು ಹನುಮಂತರಾಯಪ್ಪ. ಹನುಮಂತರಾಯಪ್ಪನವರ ಹಿನ್ನೆಲೆಯನ್ನು ಒಮ್ಮೆ ತೆಗೆದು ನೋಡಿ. ಅವರು ಬಿಜೆಪಿಗೂ ರೆಡಿ , ಕಾಂಗ್ರೆಸ್​ಗೂ ರೆಡಿ, ಜೆಡಿಎಸ್​ಗೂ ರೆಡಿ. ಎಲ್ಲ ಪಕ್ಷಕ್ಕೂ ಕೆಲಸ ಮಾಡಲು ಹನುಮಂತರಾಯಪ್ಪ ರೆಡಿಯಾಗಿರುತ್ತಾರೆ. ಇಂಥ ಸ್ವಾರ್ಥ ರಾಜಕಾರಣಿಗಳಿಂದಲೇ‌ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿರೋದು ಎಂದು ಮುನಿರತ್ನ ಕಿಡಿಕಾರಿದ್ದಾರೆ.
Published by: Sushma Chakre
First published: October 24, 2020, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading