ಉಪ ಬೆಳೆಯಲ್ಲೂ ಲಕ್ಷಾಂತರ ಆದಾಯ ಗಳಿಕೆ ಸಾಧ್ಯ ಎಂದು ನಿರೂಪಿಸಿದ ಪುತ್ತೂರಿನ ಕೃಷಿಕ

ತಮ್ಮ ಕಾಳುಮೆಣಸಿನ ಗಿಡಗಳಿಗೆ ತಿಂಗಳಿಗೊಮ್ಮೆ ಗೊಬ್ಬರವನ್ನು ನೀಡುತ್ತಿರುವ ಇವರು ತಿಂಗಳಿಗೆ ಒಂದು ಬಳ್ಳಿಗೆ ಸರಿ ಸುಮಾರು 5 ರಿಂದ 6 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ವರ್ಷಕ್ಕೆ ಸುಮಾರು 100 ರಿಂದ 200 ರೂಪಾಯಿ ಖರ್ಚು ಮಾಡಿದರೂ, ಒಂದು ಗಿಡದಲ್ಲಿ 2 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದೇನೆ ಎನ್ನುತ್ತಾರೆ ರಾಧಾಕೃಷ್ಣ.

news18-kannada
Updated:September 18, 2020, 3:57 PM IST
ಉಪ ಬೆಳೆಯಲ್ಲೂ ಲಕ್ಷಾಂತರ ಆದಾಯ ಗಳಿಕೆ ಸಾಧ್ಯ ಎಂದು ನಿರೂಪಿಸಿದ ಪುತ್ತೂರಿನ ಕೃಷಿಕ
ಕಾಳು ಮೆಣಸು
  • Share this:
ದಕ್ಷಿಣ ಕನ್ನಡ(ಸೆ.18): ಉಪಬೆಳೆಯಾಗಿ ಬೆಳೆಯಲಾಗುತ್ತಿರುವ ಕಾಳುಮೆಣಸು ಕೃಷಿ ಇತ್ತೀಚಿನ ದಿನಗಳಲ್ಲಿ ಕೃಷಿಕನ ಪ್ರಮುಖ ಆದಾಯ ಮೂಲವಾಗಿ ಬೆಳೆದು ಬಂದಿದೆ. ತನ್ನ ಕೃಷಿತೋಟದಲ್ಲಿ ಬೆಳೆಯುವ ಅಡಿಕೆ, ತೆಂಗು,ಬಾಳೆ ಮೊದಲಾದ ಬೆಳೆಗಳು ಕೃಷಿಕನಿಗೆ ಕೆಲವು ಸಂದರ್ಭಗಳಲ್ಲಿ ಕೈಕೊಟ್ಟಾಗ, ಕೃಷಿಕನನ್ನು ಮೇಲೆತ್ತುವುದು ಇದೇ ಕಾಳುಮೆಣಸು ಕೃಷಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರೊಬ್ಬರು ಇದೇ ಕಾಳುಮೆಣಸು ಕೃಷಿಕರೊಬ್ಬರು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೂಡಿಯಾರು ರಾಧಾಕೃಷ್ಣರ ಕಾಳುಮೆಣಸಿನ ತೋಟ ನೋಡುವುದು ಒಂದು ತರಹದ ಖುಷಿ.  ಹಚ್ಚ ಹಸಿರಾಗಿ ಬೆಳೆದು ನಿಂತಿರುವ ಈ ತೋಟ ರಾಧಾಕೃಷ್ಣರಿಗೆ ಬರಪೂರ ಆದಾಯವನ್ನೂ ತಂದುಕೊಡುತ್ತಿದೆ. ರಾಧಾಕೃಷ್ಣರು ತನ್ನ ತೋಟದಲ್ಲಿ ರಬ್ಬರ್, ಅಡಿಕೆ, ತೆಂಗು, ಬಾಳೆ ಹೀಗೆ ವಿವಿಧ ಕೃಷಿಯನ್ನು ಮಾಡುತ್ತಿದ್ದರೂ, ಅವರಿಗೆ ಹೆಚ್ಚಿನ ಭರವಸೆಯ ಕೃಷಿ ಇದೇ ಕಾಳುಮೆಣಸಿನ ಬಳ್ಳಿಗಳಾಗಿವೆ.ಹೌದು ರಾಧಾಕೃಷ್ಣರು ತಮ್ಮ ತೋಟದಲ್ಲಿ ಐದು ವರ್ಷಗಳ ಹಿಂದೆ ಸುಮಾರು 5 ಸಾವಿರ ಕಾಳುಮೆಣಸಿನ ಬಳ್ಳಿಯನ್ನು ನೆಟ್ಟಿದ್ದಾರೆ. ಅಡಿಕೆ ಮರಗಳಿಗೆ ಬಿಟ್ಟಿರುವ ಈ ಗಿಡಗಳು ಮೊದಲ ವರ್ಷದಲ್ಲಿ ಎರಡೂವರೆ ಕ್ವಿಂಟಾಲ್ ಕಾಳುಮೆಣಸನ್ನು ನೀಡಿದೆ. ಎರಡನೇ ವರ್ಷದಲ್ಲಿ ಹನ್ನೆರಡರಿಂದ ಹದಿಮೂರು ಕ್ವಿಂಟಾಲ್ ಪಡೆದಿದ್ದಾರೆ.  ಸದ್ಯದ  ಕಟಾವಿಗೆ 30 ರಿಂದ 40 ಕ್ವಿಂಟಾಲ್ ಕಾಳುಮೆಣಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕಾಳುಮೆಣಸಿನ ಗಿಡಗಳಿಗೆ ತಿಂಗಳಿಗೊಮ್ಮೆ ಗೊಬ್ಬರವನ್ನು ನೀಡುತ್ತಿರುವ ಇವರು ತಿಂಗಳಿಗೆ ಒಂದು ಬಳ್ಳಿಗೆ ಸರಿ ಸುಮಾರು 5 ರಿಂದ 6 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ವರ್ಷಕ್ಕೆ ಸುಮಾರು 100 ರಿಂದ 200 ರೂಪಾಯಿ ಖರ್ಚು ಮಾಡಿದರೂ, ಒಂದು ಗಿಡದಲ್ಲಿ 2 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದೇನೆ ಎನ್ನುತ್ತಾರೆ ರಾಧಾಕೃಷ್ಣ.ಕೊರೋನಾ ಸಮಯದಲ್ಲಿ ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ

ಮುಂದಿನ  ವರ್ಷಕ್ಕೆ 100 ಕ್ವಿಂಟಾಲ್ ಕಾಳುಮೆಣಸನ್ನು ಇದೇ ಬಳ್ಳಿಗಳ ಮೂಲಕ ಪಡೆಯುವ ವಿಶ್ವಾಸದಲ್ಲಿದ್ದಾರೆ. ತನ್ನ ತೋಟದಲ್ಲಿರುವ ಯಾವುದೇ ಕೃಷಿ ಕೈಕೊಟ್ಟರೂ, ಕಾಳುಮೆಣಸಿನಲ್ಲಿ ಬರುವ ಆದಾಯದಲ್ಲಿ ಆದ ನಷ್ಟವನ್ನು ಸರಿದೂಗಿಸುತ್ತಿದ್ದಾರೆ.
ರಾಧಾಕೃಷ್ಣ ರೈಗಳ ಕಾಳುಮೆಣಸಿನ ತೋಟ ನೋಡಲೆಂದೇ ದೂರದೂರುಗಳಿಂದ ಜನ ಇವರ ತೋಟಕ್ಕೆ ಭೇಟಿ ನೀಡುತ್ತಾರೆ.

ಅತ್ಯಂತ  ಯೋಜನಾಬದ್ಧವಾಗಿ ರೂಪುಗೊಂಡಿರುವ ಈ ತೋಟದ ಬಗ್ಗೆ ಮಾಹಿತಿಯನ್ನೂ ಕೃಷಿಕರು ಪಡೆಯುತ್ತಿದ್ದಾರೆ. ಕಾಳುಮೆಣಸಿನ ಬಳ್ಳಿಗಳು ನಾನಾ ಕಾರಣಗಳಿಗಾಗಿ ಸಾಯುತ್ತಿರುವ ಹಾಗೂ ಅತೀ ಕಡಿಮೆ ಬೆಳೆಯನ್ನು ನೀಡುತ್ತಿರುವ ಈ ದಿನಗಳಲ್ಲಿ ರಾಧಾಕೃಷ್ಣ ರೈಗಳ ತೋಟ ಎಲ್ಲರಿಗೂ ಮಾದರಿಯಾಗಿದೆ. ಅಲ್ಲದೆ ಕಾಳುಮೆಣಸನ್ನು ಅತ್ಯಂತ ಯಶಸ್ವಿಯಾಗಿ ಬೆಳೆಯುವ ಮೂಲಕ ರಾಧಾಕೃಷ್ಣ ರೈಗಳು ಇತರ ಬೆಳೆಗಾರರಿಗೆ ಮಾರ್ಗದರ್ಶಕರಾಗಿಯೂ ಹೊರಹೊಮ್ಮಿದ್ದಾರೆ.ಕೇವಲ ಒಂದು ಬೆಳೆಗೇ ಅಂಟಿಕೊಳ್ಳುವ ಬದಲು ತಮ್ಮಂತೆ ವಿವಿಧ ರೀತಿಯ ಕೃಷಿಯಲ್ಲಿ ತೊಡಗಿಕೊಂಡರೆ ಮಾತ್ರ ಕೃಷಿಕ ಸಮಾಜದಲ್ಲಿ ಸ್ವಾವಲಂಭಿಯಾಗಿ ಬದುಕಲು ಸಾಧ್ಯ ಎನ್ನುವ ರಾಧಾಕೃಷ್ಣರು, ತಮ್ಮ ಬಳಿಗೆ ಬಂದ ಇತರ ಕೃಷಿಕರಿಗೂ ತಮ್ಮ ಕೃಷಿಯ ಅನುಭವಗಳನ್ನು ಹಂಚುತ್ತಾರೆ.
Published by: Latha CG
First published: September 18, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading