ನನಗೆ ಒಂದು ಆಹ್ವಾನವನ್ನೂ ನೀಡಿಲ್ಲವಲ್ಲ; ಕರ್ನಾಟಕ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಗರಂ

ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಬಿಎಸ್​ವೈ ನೆರವೇರಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಆಗಮಿಸಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.

news18-kannada
Updated:September 18, 2020, 9:07 AM IST
ನನಗೆ ಒಂದು ಆಹ್ವಾನವನ್ನೂ ನೀಡಿಲ್ಲವಲ್ಲ; ಕರ್ನಾಟಕ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಗರಂ
ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಬಿಎಸ್​ವೈ ನೆರವೇರಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಆಗಮಿಸಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.
  • Share this:
ನವದೆಹಲಿ (ಸೆಪ್ಟೆಂಬರ್ 18): ದೆಹಲಿಯ ಚಾಣಕ್ಯ ಪುರಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, 'ನನಗೆ ಯಾವೊಬ್ಬ ಅಧಿಕಾರಿಯೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ' ಎಂದು ಬಿಎಸ್​ವೈ ಎದುರೇ ಆಕ್ರೋಶ ಹೊರ ಹಾಕಿದ್ದಾರೆ. ಇದು ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳಿಗೆ ಕೊಂಚ ಮುಜುಗರ ಉಂಟುಮಾಡಿದೆ.

ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಬಿಎಸ್​ವೈ ನೆರವೇರಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಆಗಮಿಸಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಅವರು ಕಿಡಿಕಾರಿದ್ದಾರೆ. "ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ಕೊನೆಗೆ ಕಾರ್ಯಕ್ರಮಕ್ಕೆ ಬಂದರೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ, ಹಾಗೆಯೇ ತೆರಳುತ್ತೇನೆ," ಎಂದು ಪ್ರಹ್ಲಾದ್ ಜೋಶಿ ಸಿಟ್ಟಾದರು.

ಕೊನೆಗೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಪ್ರಹ್ಲಾದ್ ಜೋಶಿ ಮನವೊಲಿಸಲು ಮುಂದಾದರು. ಕ್ಷಮೆ ಕೇಳಿ ಕಾರ್ಯಕ್ರಮಕ್ಕೆ ಅವರನ್ನು ವಿಜಯಭಾಸ್ಕರ್ ಆಹ್ವಾನಿಸಿದರು. ನಂತರ ಮನಸ್ಸನ್ನು ಬದಲಾಯಿಸಿ ಕಾರ್ಯಕ್ರಮಕ್ಕೆ ತೆರಳಿದರು. ಕಟ್ಟಡದ ಹಿಂದಿನ ಅಂದಾಜು ವೆಚ್ಚ 82 ಕೋಟಿ ರೂಪಾಯಿ . ಬಿಜೆಪಿ ಸರ್ಕಾರ ಹೊಸ ವಿನ್ಯಾಸದೊಂದಿಗೆ 120 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಮೋದಿಗೆ ಬಿಎಸ್​ವೈ ಶುಭಕೋರಲಿದ್ದಾರೆ. ರಾಜ್ಯ ರಾಜಕೀಯ, ನೆರೆ, ಅತಿವೃಷ್ಟಿ ಪರಿಹಾರ ಹಂಚಿಕೆ , ಅನುದಾನದ ಕುರಿತು ಚರ್ಚೆ ನಡೆಸಲಿದ್ದು, ಅಗತ್ಯ ನೆರವು ಕೋರಲಿದ್ದಾರೆ.  ಇದೇ ವೇಳೇ ರಾಜ್ಯದ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ಕೂಡ ನಡೆಸಲಿದ್ದಾರೆ ಎನ್ನಲಾಗಿದೆ.
Published by: Rajesh Duggumane
First published: September 18, 2020, 9:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading