ಮಳೆ ನೀರಿನಲ್ಲಿ ಕೊಚ್ಚಿ ಹೋದ ಮಗಳಿಗಾಗಿ ಹಗಲು ರಾತ್ರಿಯೆನ್ನದೇ ಹುಡುಕಾಟ ನಡೆಸುತ್ತಿರುವ ಪೋಷಕರು

ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಅಂತ್ಯಗೊಳಿಸಿದರೂ ಪೋಷಕರು ಮಾತ್ರ ಮಗಳ ಹುಡುಕಾಟ ನಿಲ್ಲಿಸಿರಲಿಲ್ಲ. ಬಾಲಕಿ ತಂದೆ ನಿತ್ಯಾನಂದ ಕೋಲಿ ತಾಯಿ ಬೋನಿ ಕೋಲಿ ಮಗು ಕಾಲುವೆಗೆ ಬಿದ್ದ ಸ್ಥಳದಿಂದ ವರ್ತೂರು ಕೆರೆಯವರೆಗೆ ಹುಡುಕಾಡಿದ್ದಾರೆ. ಎಷ್ಟೇ ಹುಡುಕಾಡಿದ್ರು ಮಗಳ ಸಣ್ಣ ಕುರುಹು ಸಹ ಪತ್ತೆಯಾಗದ್ದಕ್ಕೆ ನಂತರ ಕೈಚೆಲ್ಲಿ ಸುಮ್ಮನಾಗಿದ್ದಾರೆ.

news18-kannada
Updated:August 2, 2020, 2:43 PM IST
ಮಳೆ ನೀರಿನಲ್ಲಿ ಕೊಚ್ಚಿ ಹೋದ ಮಗಳಿಗಾಗಿ ಹಗಲು ರಾತ್ರಿಯೆನ್ನದೇ ಹುಡುಕಾಟ ನಡೆಸುತ್ತಿರುವ ಪೋಷಕರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಆ.02): ಮಳೆ ನೀರಿನಲ್ಲಿ ಕೊಚ್ಚಿ ಹೋದ ಪುಟ್ಟ ಕಂದನಿಗಾಗಿ ಮರುಗಿತು ಹೆತ್ತವರ ಕರುಳು. ಪ್ರತಿದಿನ ಮಗಳ ನೆನಪಲ್ಲಿ ರಾಜಕಾಲುವೆಯಲ್ಲಿ ಶೋಧ ನಡೆಸಿದ ಪೋಷಕರು ಕೊನೆಗೆ ಮಗಳು ಸಿಗಲಾರಳೆಂದು ಕೈ ಚೆಲ್ಲಿದ್ದಾರೆ. ನಗರದ ಬೆಳ್ಳಂದೂರು ಬಳಿ ಮಳೆ ನೀರಿನಲ್ಲಿ ಕೊಚ್ಚಿ ಹೋದ 6 ವರ್ಷದ ಬಾಲಕಿ ಭೂಮಿಕಾಗಾಗಿ ಪೋಷಕರ ನಿರಂತರವಾಗಿ ಹುಡುಕಾಟ ನಡೆಸುತ್ತಲೇ ಇದ್ದಾರೆ.

ಜುಲೈ 10ರಂದು ಸ್ನೇಹಿತರ ಜೊತೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ, ಮನೆ ಪಕ್ಕದ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಬಾಲಕಿ ನಾಪತ್ತೆಯಾಗಿ 22 ದಿನ ಕಳೆದರು ಪೋಷಕರು ಮಗಳಿಗಾಗಿ ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ. ಪ್ರತಿದಿನ ಬೆಳ್ಳಂದೂರು ಕಡೆಯಿಂದ ವರ್ತೂರು ಕೆರೆಯವರೆಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಕಾಲುವೆ ಅಕ್ಕಪಕ್ಕ ಶೋಧ ನಡೆಸಿದ್ದಾರೆ. ಬಾಲಕಿ ಅಪ್ಪ ನಿತ್ಯಾನಂದ ಕೋಲಿ ತಾಯಿ ಬೋನಿ ಕೋಲಿ ಮತ್ತು ಅವರ ಸ್ನೇಹಿತ  ಪ್ರತಿದಿನ ಎರಡು ಕಿಮೀನಂತೆ ಒಟ್ಟು 15 ಕಿಮೀ ನಷ್ಟು ದೂರ ಕ್ರಮಿಸಿ ಕಾಲುವೆ ಅಂಚಿನಲ್ಲಿ ಹುಡುಕಾಡಿದ್ದರಂತೆ.

ಇನ್ನೂ ಬಾಲಕಿ ಇದೇ ತಿಂಗಳ 10 ರಂದು ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಳು. ಬಾಲಕಿ ನಾಪತ್ತೆಯಾದ ಬಳಿಕ ಅಗ್ನಿಶಾಮಕ ಸಿಬ್ಬಂದಿ, SDRF ಮತ್ತು ಬಿಬಿಎಂಪಿಯವರು ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ನಾಲ್ಕೈದು ದಿನ ಹುಡುಕಾಟ ನಡೆಸಿದ ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ.ಕೊನೆಗೆ ಬಾಲಕಿ ಪತ್ತೆಯಾಗದಕ್ಕೆ ಶೋಧ ಅಂತ್ಯಗೊಳಿಸಿದ್ದರು.

ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಅಂತ್ಯಗೊಳಿಸಿದರೂ ಪೋಷಕರು ಮಾತ್ರ ಮಗಳ ಹುಡುಕಾಟ ನಿಲ್ಲಿಸಿರಲಿಲ್ಲ. ಬಾಲಕಿ ತಂದೆ ನಿತ್ಯಾನಂದ ಕೋಲಿ ತಾಯಿ ಬೋನಿ ಕೋಲಿ ಮಗು ಕಾಲುವೆಗೆ ಬಿದ್ದ ಸ್ಥಳದಿಂದ ವರ್ತೂರು ಕೆರೆಯವರೆಗೆ ಹುಡುಕಾಡಿದ್ದಾರೆ. ಎಷ್ಟೇ ಹುಡುಕಾಡಿದ್ರು ಮಗಳ ಸಣ್ಣ ಕುರುಹು ಸಹ ಪತ್ತೆಯಾಗದ್ದಕ್ಕೆ ನಂತರ ಕೈಚೆಲ್ಲಿ ಸುಮ್ಮನಾಗಿದ್ದಾರೆ.

ಬಾಲಕಿ ಭೂಮಿಕಾ ಮನೆಯಲ್ಲಿ ಲವಲವಿಕೆಯಿಂದ ಆಟವಾಡುತ್ತಾ ಪೋಷಕರ ಮುದ್ದಿನ ಮಗಳಾಗಿದ್ದಳಂತೆ. ಆದ್ರೆ ಮಗಳು ಕಣ್ಮರೆಯಾಗಿ 22 ದಿನ ಕಳೆದು ಹೋಗಿದೆ. ಮುದ್ದಿನ ಮಗಳು ಸಿಗದಿದ್ದಕ್ಕೆ ಕಣ್ಣೀರಾ ಮಡುವಿನಲ್ಲಿ ಜೀವನ ನಡೆಸುತ್ತಿದ್ದಾರೆ ದಂಪತಿ. ಅಸ್ಸಾಂ ರಾಜ್ಯದ ದೇಮಾಜಿ ಜಿಲ್ಲೆಯ ನಿತ್ಯಾನಂದ ಮತ್ತು ಬೋನಿ ದಂಪತಿಗಳ ಹಿರಿ ಮಗಳು ಭೂಮಿಕ.

ಇದನ್ನೂ ಓದಿ: CoronaVirus: ದೇಶದಲ್ಲಿ 17 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಬಾಲಕಿ ತಂದೆ ನಿತ್ಯಾನಂದ ಕೋಲಿ ನಗರದ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಘಟನೆ ನಡೆದ ನಾಲ್ಕು ದಿನ ಬಾಲಕಿಗೆ ಶೋಧ ನಡೆಸಿದ ಆಧಿಕಾರಿಗಳು ಬಳಿಕ ಸುಮ್ಮನಾಗಿದ್ದಾರೆ. ಇತ್ತ ಬಿಬಿಎಂಪಿ ಬಾಲಕಿಯನ್ನು ಪತ್ತೆ ಮಾಡಲಿಲ್ಲ, ಪೋಷಕರಿಗೆ ನೆರವು ನೀಡದೇ ಸುಮ್ಮನಾಗಿದ್ದು ಬಾಲಕಿ ಪೋಷಕರು ದಿಕ್ಕು ತೊಚದಂತಾಗಿದ್ದಾರೆ.
Published by: Ganesh Nachikethu
First published: August 2, 2020, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading