ಮುಂಗಾರು ಅಧಿವೇಶನ: ಸದನಕ್ಕೆ ಹಾಜರಾಗಲು ಶಾಸಕರು, ಅಧಿಕಾರಿಗಳಿಗೆ ಕೋವಿಡ್​ ನೆಗಟಿವ್​ ವರದಿ ಕಡ್ಡಾಯ

ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿದ್ದರು. ಅವರು ಸೋಮವಾರದಿಂದ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.  ಅಧಿವೇಶನದಲ್ಲಿ ವೈದ್ಯರ ಪ್ರಮಾಣಪತ್ರ ಕಡ್ಡಾಯವಾಗಿರುವ ಹಿನ್ನಲೆ  ಅವರು ಮತ್ತೊಮ್ಮೆ ಇಂದು ವಿಧಾನಸೌಧದಲ್ಲಿ ಕೊರೋನಾ ತಪಾಸಣೆಗೆ ಒಳಗಾಗಿದ್ದಾರೆ. 

news18-kannada
Updated:September 19, 2020, 7:00 PM IST
ಮುಂಗಾರು ಅಧಿವೇಶನ: ಸದನಕ್ಕೆ ಹಾಜರಾಗಲು ಶಾಸಕರು, ಅಧಿಕಾರಿಗಳಿಗೆ ಕೋವಿಡ್​ ನೆಗಟಿವ್​ ವರದಿ ಕಡ್ಡಾಯ
ಕೊರೋನಾ ಪರೀಕ್ಷೆಗೆ ಒಳಪಟ್ಟ ಸಿದ್ದರಾಮಯ್ಯ
  • Share this:
ಬೆಂಗಳೂರು (ಸೆ.19): ಸೋಮವಾರದಿಂದ ಹತ್ತು ದಿನಗಳ ಕಾಲ  ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ. ಕೊರೋನಾ ಸಂಕಷ್ಟ ಸಮಯದಲ್ಲಿ ಅಧಿವೇಶನ ಆರಂಭ ಮಾಡುತ್ತಿರುವ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸೆಷನ್​, ಮಾಸ್ಕ್​ ಕಡ್ಡಾಯದಂತ ಹಲವು ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗಿದೆ. ಅಲ್ಲದೇ ಅಧಿವೇಶನಕ್ಕೆ ಹಾಜರಾಗುವ ಸಮಯದಲ್ಲಿ ಶಾಸಕರು, ಅಧಿಕಾರಿಗಳು ಕೊರೋನಾ ಸೋಂಕು ಇಲ್ಲದಿರುವ ಬಗ್ಗೆ ವೈದ್ಯರ ದೃಢೀಕರಣ ಪತ್ರವನ್ನು ತರುವುದು ಕಡ್ಡಾಯ. ಈ ನಡುವೆ ವಿಧಾನಸೌಧದಲ್ಲಿಯೂ ಶಾಸಕರು, ಅಧಿಕಾರಿಗಳಿಗೆ ಕೊರೋನಾ ಪರೀಕ್ಷೆ ಮಾಡಿ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಅಸಾಧ್ಯರಾದ ಶಾಸಕರು, ಅಧಿಕಾರಿಗಳು ಬೇರೆ ವೈದ್ಯರಿಂದ ವರದಿ ತರುವುದು ಕಡ್ಡಾಯವಾಗಿದೆ.

ಕೊರೋನಾ ಸೋಂಕು ಶೀಘ್ರವಾಗಿ ಹರಡುವ ಹಿನ್ನೆಲೆ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು,  ವಿಧಾನಸೌಧ,ವಿಕಾಸಸೌಧದ ಅನೇಕ ಕಡೆ ಪ್ರವೇಶ ನಿರ್ಬಂಧಿಸಿ ಪ್ರಕಟಣೆ ಹೊರಡಿಸಲಾಗಿದೆ.

siddaramaiah undergone corona test in vidanasoudha
ಕೊರೋನಾ ಪರೀಕ್ಷೆಗೆ ಒಳಪಟ್ಟ ಸಿದ್ದರಾಮಯ್ಯ


ಇತ್ತೀಚಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿದ್ದರು. ಅವರು ಸೋಮವಾರದಿಂದ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.  ಅಧಿವೇಶನದಲ್ಲಿ ವೈದ್ಯರ ಪ್ರಮಾಣಪತ್ರ ಕಡ್ಡಾಯವಾಗಿರುವ ಹಿನ್ನಲೆ  ಅವರು ಮತ್ತೊಮ್ಮೆ ಇಂದು ವಿಧಾನಸೌಧದಲ್ಲಿ ಕೊರೋನಾ ತಪಾಸಣೆಗೆ ಒಳಗಾಗಿದ್ದಾರೆ.

ಕೋವಿಡ್ ಹಿನ್ನಲೆ ಕಟ್ಟುನಿಟ್ಟಿನ ಕ್ರಮವಹಿಸಿರುವ  ಸರ್ಕಾರ

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸಚಿವರು, ಶಾಸಕರ ಜೊತೆಗೆ‌ ಮೂವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಪ್ತ‌ಸಹಾಯಕರಿಗೆ ಪೂರ್ವ ದ್ವಾರದ ಸೆಂಟ್ರಲ್ ಹಾಲ್ ನಲ್ಲಿ ಕೂರಲು ಅವಕಾಶ ನೀಡಲಾಗಿದೆ. ಸಚಿವರ ಗನ್ ಮ್ಯಾನ್ ಗಳಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.  ವಿಧಾನಸೌಧದ ಉತ್ತರ ದ್ವಾರದ ಮೂಲಕ ಅಧಿಕಾರಿಗಳು, ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಶ್ಚಿಮ ದ್ವಾರದ ಮೊದಲ‌ ಮಹಡಿಯಲ್ಲಿ  ಯಾರಿಗೂ ಕೂರಲು ಅವಕಾಶವಿಲ್ಲ.

ಇನ್ನು ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ಸಂಪೂರ್ಣವಾಗಿ ಪ್ರವೇಶ ನಿರ್ಬಂಧಿಸಲಾಗಿದೆ. ಅಧಿವೇಶನಕ್ಕೆ ಹಾಜರಾಗುವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಮಾಸ್ಕ್​ ಧರಿಸಲೇಬೇಕಾಗಿದೆ.ಅಧಿವೇಶನ ಪ್ರಾರಂಭ ಆಗುತ್ತಿರುವ ಹಿನ್ನೆಲೆ ವಿಧಾನಸೌಧದಲ್ಲಿ ಪರಿಶೀಲನೆ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,  ಈ ಬಾರಿ ವಿಶಿಷ್ಠವಾದ ರೀತಿಯಲ್ಲಿ ಅಧಿವೇಶನ ನಡೆಸುವ ವ್ಯವಸ್ಥೆ ನಿರ್ಮಾಣವಾಗಿದೆ.  ಕೊರೋನಾ ಸೋಂಕಿನ ದುಷ್ಪಾರಿಣಾಮದ ಬಗ್ಗೆ  ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನಲೆ ಎಚ್ಚರಿಕೆವಹಿಸಲಾಗಿದ್ದು, ಸದನಕ್ಕೆ ಹಾಜರಾಗುವವರು  ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕು. ಅಧಿವೇಶನ ಮುಗಿಯುವ ವರೆಗೂ ವಿಧಾನಸೌಧದಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತೇವೆ ಎಂದರು.

ಕೊರೋನಾ ಸಮಯದಲ್ಲಿ ಹೇಗೆ ಕಲಾಪ ನಡೆಯಬೇಕು ಎಂಬ ಬಗ್ಗೆ  ಕಾನೂನು ಸಂಸದೀಯ ಸಚಿವರ ಜೊತೆಗೆ ಚರ್ಚೆ ಮಾಡಿದ್ದೇವೆ ಹಾಗೆ ಸಿಎಂ ಜೊತೆಗೆ ಕೂಡ ಸಮಾಲೋಚನೆ ಮಾಡಲಾಗಿದೆ.

ಇದನ್ನು ಓದಿ: ಡಿಸಿಎಂ ಅಶ್ವತ್ಥ ನಾರಾಯಣಗೆ ಕೊರೋನಾ ಪಾಸಿಟಿವ್; ಅಧಿವೇಶನಕ್ಕೆ ಗೈರು

ಸಭಾಂಗಣದ ಒಳಗೆ ಹೋಗುವಾಗ ನೆಗೆಟಿವ್ ರಿಪೋರ್ಟ್ ತೋರಿಸಬೇಕು. ಎರಡನೇ ಮಹಡಿ, ಮೊದಲೇ ಮಹಡಿ ನಲ್ಲಿ ತೋರಿಸಬೇಕು. ಅಧಿಕಾರಿಗಳು, ಶಾಸಕರು, ಸಚಿವರು, ಮೀಡಿಯಾ ಮಿತ್ರರು ಎಲ್ಲಾ ರಿಪೋರ್ಟ್ ತರುವುದು ಕಡ್ಡಾಯವಾಗಿದ್ದು, ಯಾರು ನಿರ್ಲಕ್ಷ್ಯ ಮಾಡುವಂತಿಲ್ಲ.  ಇಲ್ಲದಿದ್ದರೆ ಇಲ್ಲೆ ಮಾಡಿಸಿ ರಿಪೋರ್ಟ್ ತೋರಿಸಿ ಒಳಗೆ ಬರಬೇಕು ಎಂದರು.

ಗೃಹಸಚಿವ ಬಸವರಾಜ್  ಬೊಮ್ಮಾಯಿ,ಡಿಸಿಎಂ ಅಶ್ವತ್ಥ್ ​ನಾರಾಯಣ, ಆಹಾರ ಸಚಿವ ಕೆ.ಗೋಪಾಲಯ್ಯ, ಸಚಿವ ಭೈರತಿ ಬಸವರಾಜ್​ ಅವರಿಗೂ  ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಇವರು ಕೂಡ ಸೋಮವಾರದಿಂದ ಆರಂಭವಾಗಲಿರುವ ಅಧಿವೇಶದಲ್ಲಿ ಭಾಗಿಯಾಗುವುದಿಲ್ಲ.
Published by: Seema R
First published: September 19, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading