ಸಿಎಂ ಸ್ಥಾನದಿಂದ ಬಿಎಸ್​ವೈ ಕೆಳಗಿಳಿದರೆ, 15 ಶಾಸಕರು ಬೀದಿನಾಯಿಗಳಿಗಿಂತ ಕಡೆ ಆಗ್ತಾರೆ; ಸಿದ್ದರಾಮಯ್ಯ

ಜೆಡಿಎಸ್ ನವರು ಸ್ವಂತ ಶಕ್ತಿಯಿಂದ ಅಧಿಕಾರ ಮಾಡುವವರಲ್ಲ. 20-25 ಸ್ಥಾನಗೆದ್ದು ಇನ್ನೊಬ್ಬರ ಹೆಗಲ ಮೇಲೆ ಕೂಳಿತುಕೊಳ್ಳುವವರು. ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇರೋವಾಗ ಅವರ ಬೆಳೆ ಕಾಳು ಬೇಯುವುದು

news18-kannada
Updated:October 30, 2020, 8:11 PM IST
ಸಿಎಂ ಸ್ಥಾನದಿಂದ ಬಿಎಸ್​ವೈ ಕೆಳಗಿಳಿದರೆ, 15 ಶಾಸಕರು ಬೀದಿನಾಯಿಗಳಿಗಿಂತ ಕಡೆ ಆಗ್ತಾರೆ; ಸಿದ್ದರಾಮಯ್ಯ
ಪ್ರಚಾರದ ವೇಳೆ ಸಿದ್ದರಾಮಯ್ಯ
  • Share this:
ಬೆಂಗಳೂರು (ಅ.30): ಬಿಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೇಂದ್ರದಲ್ಲಿ ಬಹಳ ಚರ್ಚೆಯಾಗುತ್ತಿದೆ.  ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೆ, ಪಕ್ಷ ತೊರೆದು ಹೋಗಿರುವ 15 ಶಾಸಕರು ಬೀದಿನಾಯಿಗಳಿಗಿಂತ ಕಡೆ ಆಗುತ್ತಾರೆ. ಅದಕ್ಕಿಂತ ಮುಂಚೆ ಮತದಾರರು ಮುನಿರತ್ನರನ್ನು ಸೋಲಿಸಬೇಕು  ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಲಗ್ಗೆರೆಯಲ್ಲಿ ಆರ್​ಆರ್​ನಗರ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಪ್ರಚಾರ ನಡೆಸಿದ ಅವರು, ಪಕ್ಷ ಬಿಟ್ಟು ಹೋಗಿದ್ದಾರಲ್ಲಾ 15 ಶಾಸಕರಿಗೆ ಹೇಳೋರಿರಲ್ಲ, ಕೇಳೋರಿರಲ್ಲ. ಮುನಿರತ್ನಗೂ ಕೆಟ್ಟ ಕಾಲ ಕಾದಿದೆ ಎಂದು ಭವಿಷ್ಯ ನುಡಿದರು. 

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಮುಂದಿನ ಸಲ ಕಾಂಗ್ರೆಸ್​ 160 ಸ್ಥಾನಗಳಲ್ಲಿ ಜಯಿಸಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. 5 ವರ್ಷಕ್ಕೊಮ್ಮೆ ಬದಲಾಗಬೇಕು, ಜನರ ತೀರ್ಪು ಪಡೆದು ಮತ್ತೆ ಬರಬೇಕು ಎಂದರು

ಹೆದರಿಸಿ, ಬೆದರಿಸಿ ಮತ್ತೆ ಶಾಸಕನಾಗುತ್ತೇನೆ' ಎಂದು ಮುನಿರತ್ನ ಭಾವಿಸಿದ್ದರೆ ಅದು ಅವರ ಭ್ರಮೆ, ಅವರಂತಹ ಮೂರ್ಖ ಇನ್ನೊಬ್ಬರಿಲ್ಲ. 2 ಬಾರಿ ಕಾಂಗ್ರೆಸ್ ಶಾಸಕನಾಗಿದ್ದರು. ಇಲ್ಲಿ ಏನು ಕಡಿಮೆ ಆಗಿತ್ತು ಎಂದು ಪಕ್ಷ ತೊರೆದರು ಗೊತ್ತಿಲ್ಲ. ಆದರೆ, ಮುನಿರತ್ನಗೆ ನೆನಪಿರಲಿ ಅವರಿಗೆ ಜನರು ಮತ ನೀಡಿದ್ದು, ಕಾಂಗ್ರೆಸ್​ ಪಕ್ಷವನ್ನು ನೋಡಿಕೊಂಡು ಹೊರತು ವ್ಯಕ್ತಗತವಾಗಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಶಿಕಾರಿಪುರದ ರೀತಿ ಶಿರಾ ಕ್ಷೇತ್ರದ ಅಭಿವೃದ್ಧಿ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭರವಸೆನಮ್ಮ ಉದ್ದೇಶ ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು ಎಂಬುದು. ಅನ್ನಕೋಸ್ಕರ ಯಾರು ಕವಳ ತಾಯಿ ಅಂತ ಭಿಕ್ಷೆ ಬೇಡಬಾರದು. ಈಗ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿ ನಮಗೆ ಸಾಕಾಗುತ್ತಿಲ್ಲ. ಕೂಲಿ ಮಾಡಿದ ಹಣದಲ್ಲೇ ಮತ್ತೆ ಅಕ್ಕಿ ಖರೀದಿಸಬೇಕು ಎಂಬಂತ ಸ್ಥಿತಿ ಜನರಲ್ಲಿ ಮೂಡಿದೆ. ಇದೆಲ್ಲಾ ಕೊನೆಯಾಗಬೇಕು ಎಂದರೆ ಕಾಂಗ್ರೆಸ್​ಗೆ ಮತ ಹಾಕಬೇಕು ಎಂದರು.

ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು ಎಂದರೆ ಬಿಜೆಪಿ ಸೋಲಬೇಕು, ಜೆಡಿಎಸ್ ಸೋಲಬೇಕು. ಜೆಡಿಎಸ್ ನವರು ಸ್ವಂತ ಶಕ್ತಿಯಿಂದ ಅಧಿಕಾರ ಮಾಡುವವರಲ್ಲ. 20-25 ಸ್ಥಾನಗೆದ್ದು ಇನ್ನೊಬ್ಬರ ಹೆಗಲ ಮೇಲೆ ಕೂಳಿತುಕೊಳ್ಳುವವರು. ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇರೋವಾಗ ಅವರ ಬೆಳೆ ಕಾಳು ಬೇಯುವುದು ಎಂದು ಜೆಡಿಎಸ್​ ನಾಯಕರನ್ನು ಕುಟುಕಿದರು.
Published by: Seema R
First published: October 30, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading