ರಾಯಚೂರಿನಲ್ಲಿ ಅಧಿಕ ಮಳೆಗೆ ಕೊಳೆತ ಈರುಳ್ಳಿ; ದರವೂ ಇಲ್ಲ, ಬೆಳೆಯೂ ಇಲ್ಲ

ಈರುಳ್ಳಿ ಅಕ್ರಮ ಸಂಗ್ರಹ ಮಾಡಲಾಗುತ್ತಿದೆ ಎನ್ನಲಾಗಿದೆ, ಈ ಬಗ್ಗೆ ಜಿಲ್ಲಾಡಳಿತವು ಅಕ್ರಮ ದಾಸ್ತಾನು ಬಗ್ಗೆ ನಿಗಾವಹಿಸಬೇಕು, ರೈತ ಹಾಗು ಗ್ರಾಹಕನಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

news18-kannada
Updated:October 24, 2020, 3:48 PM IST
ರಾಯಚೂರಿನಲ್ಲಿ ಅಧಿಕ ಮಳೆಗೆ ಕೊಳೆತ ಈರುಳ್ಳಿ; ದರವೂ ಇಲ್ಲ, ಬೆಳೆಯೂ ಇಲ್ಲ
ಕೊಳೆತು ಹೋಗಿರುವ ಈರುಳ್ಳಿ
  • Share this:
ರಾಯಚೂರು(ಅ.24): ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಅತ್ಯಧಿಕ ಮಳೆ, ವಾಡಿಕೆಗಿಂತ ಶೇ.40 ರಷ್ಟು ಮಳೆ ಅಧಿಕವಾಗಿದೆ. ಇದರಿಂದಾಗಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.  ರಾಯಚೂರು ಜಿಲ್ಲೆಯಲ್ಲಿ 1271 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು ಇಲ್ಲಿಯವರೆಗೂ ಅಂದಾಜು 447 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಹಾಳಾಗಿದೆ. ಹಾನಿಯ ಸಮೀಕ್ಷೆ ಇನ್ನೂ ನಡೆದಿದೆ. ನಿರಂತರ ಮಳೆಯಿಂದಾಗಿ ಈರುಳ್ಳಿಯು ಭೂಮಿಯಲ್ಲಿಯೇ ಕೊಳೆತು ಹೋಗಿದೆ. 20-30 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಈರುಳ್ಳಿಯು ಮಳೆಗೆ ಹಾಳಾಗಿದೆ. ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ. ಮಾಡಿರುವ ಖರ್ಚು ಸಹ ಬಾರದೆ ರೈತ ಸಂಕಷ್ಟ ಅನುಭವಿಸುವಂತಾಗಿದ್ದು, ಸರಕಾರ ಈರುಳ್ಳಿ ಬೆಳೆಗೆ ಬೇಗನೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.  ರಾಯಚೂರು ಮಾರುಕಟ್ಟೆಗೆ ರಾಯಚೂರು, ತೆಲಂಗಾಣ ಹಾಗೂ ಆಂಧ್ರದಿಂದಲೂ ಈರುಳ್ಳಿ ಬರುತ್ತಿದೆ.

ಕಳೆದ ವರ್ಷ ರಾಯಚೂರು ಮಾರುಕಟ್ಟೆಗೆ ಒಟ್ಟು 173919 ಕ್ವಿಂಟಾಲ್ ಈರುಳ್ಳಿ ಬಂದಿದ್ದು ಕಳೆದ ವರ್ಷ 1050 ರಿಂದ 15000  ರೂಪಾಯಿಯವರೆಗೂ ಆಗಿತ್ತು.  ದುಬಾರಿ ದರ ಹಿನ್ನಲೆಯಲ್ಲಿ ಈರುಳ್ಳಿಯನ್ನು ಅಧಿಕವಾಗಿ ಬೆಳೆದಿದ್ದು, ಎರಡೇ ತಿಂಗಳಲ್ಲಿ ಮಾರುಕಟ್ಟೆಗೆ 41837 ಕ್ವಿಂಟಾಲ್ ಈರುಳ್ಳಿ ಬಂದಿದೆ. ಈಗ ಮಾರುಕಟ್ಟೆಯಲ್ಲಿ 300 ರಿಂದ 6000 ರೂಪಾಯಿಯವರೆಗೂ ಇದೆ.

ಡಿಕೆಶಿ ಮುಂದಿನ ಸಿಎಂ ಅಭ್ಯರ್ಥಿ?; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಕೆಪಿಸಿಸಿ ಅಧ್ಯಕ್ಷ

ಬೇರೆ ಬೇರೆ ಕಡೆಯಿಂದ ಈರುಳ್ಳಿ ಬರುತ್ತಿರುವುದರಿಂದ ರಾಯಚೂರಿನಲ್ಲಿ ಮಾರುಕಟ್ಟೆಯಲ್ಲಿ ರೈತರಿಗೆ ದರ ಸಿಗುತ್ತಿಲ್ಲ, ಆದರೆ ತರಕಾರಿ ಮಾರಾಟ ಮಾಡುವ ಮಾರುಕಟ್ಟೆಯಲ್ಲಿ 40-100 ರೂಪಾಯಿಯವರೆಗೂ ಇದೆ, ಇಲ್ಲಿ ರೈತ ಹಾಗೂ ಗ್ರಾಹಕರಿಗಿಂತ ಮದ್ಯವರ್ತಿಗಳಿಗೆ ಲಾಭವಾಗುತ್ತಿದೆ ಎನ್ನಲಾಗಿದೆ.

ಈರುಳ್ಳಿ ಅಕ್ರಮ ಸಂಗ್ರಹ ಮಾಡಲಾಗುತ್ತಿದೆ ಎನ್ನಲಾಗಿದೆ, ಈ ಬಗ್ಗೆ ಜಿಲ್ಲಾಡಳಿತವು ಅಕ್ರಮ ದಾಸ್ತಾನು ಬಗ್ಗೆ ನಿಗಾವಹಿಸಬೇಕು, ರೈತ ಹಾಗು ಗ್ರಾಹಕನಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

ಈರುಳ್ಳಿ ಬೆಳೆದ ರೈತರು ಈಗ ಸಂಕಷ್ಟದಲ್ಲಿದ್ದಾರೆ, ರೈತರ ನೆರವಿಗೆ ಬಂದು ಸಾವಿರಾರು ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿದೆ. ಇದರೊಂದಿಗೆ ಈ ವರ್ಷದ ಮುಂದಿನ‌ ದಿನಗಳ ಆದಾಯವನ್ನು ಕಸಿದುಕೊಂಡಿದೆ. ಬೆಳೆಯಲು ಸಾಕಷ್ಟು ಸಾಲ ಮಾಡಿಕೊಂಡಿರುವ ರೈತ ಈಗ ಬೆಳೆ ಇಲ್ಲದೆ ಕಂಗಾಲಾಗಿದ್ದಾನೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಇದೆ ಆದರೆ ಇದೇ ಸಂದರ್ಭದಲ್ಲಿ ಬೆಳೆಯ ಇಲ್ಲದೆ ಕೈ ಕೈ ಹಿಚುಕಿಕೊಳ್ಳುವಂತಾಗಿದೆ.
Published by: Latha CG
First published: October 24, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading