ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹಿನ್ನೆಲೆ; ಬೆಂಗಳೂರು ಸೇರಿ ದೇಶದ 10 ಕಡೆ ಎನ್​ಐಎ ದಾಳಿ

ಬೆಂಗಳೂರಿನ ಸ್ವಾತಿ ಶೇಷಾದ್ರಿ ಸಹ ಕುರಂ ಪರ್ವೇಜ್​ನ ಶಿಷ್ಯೆ ಎನ್ನಲಾಗಿದೆ. ಅವರ ಮನೆಯಲ್ಲಿ ನಿನ್ನೆ ಇಡೀ ದಿನ ಸರ್ಚ್ ಮಾಡಿರುವ ಎನ್​ಐಎ ತಂಡ ಸದ್ಯ ಮನೆಯಲ್ಲಿ ಅಕ್ರಮ ಹಣ ಬಂದಿರುವ ದಾಖಲೆಗಳ ಸೀಜ್ ಮಾಡಿದೆ.

news18-kannada
Updated:October 29, 2020, 11:03 AM IST
ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹಿನ್ನೆಲೆ; ಬೆಂಗಳೂರು ಸೇರಿ ದೇಶದ 10 ಕಡೆ ಎನ್​ಐಎ ದಾಳಿ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಅ. 29): ದೇಶದಲ್ಲಿ‌ ಐಸಿಸ್ ಉಗ್ರ ಸಂಘಟನೆಯ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಮೇಲೆ ಬೆಂಗಳೂರು ಸೇರಿ ದೇಶದಾದ್ಯಂತ ನಿನ್ನೆ 10 ಕಡೆ ಎನ್ಐಎ ದಾಳಿ ನಡೆಸಲಾಗಿದೆ. ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಬಂಡಿಪೋರ ಹಾಗೂ ಬೆಂಗಳೂರಲ್ಲಿ ಎನ್​ಐಎ ದಾಳಿ ಮಾಡಿತ್ತು. ಉಗ್ರ ಸಂಘಟನೆಗೆ ಭಾರತ ಮತ್ತು ವಿದೇಶಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಎನ್​ಜಿಓ ಹೆಸರಿನಲ್ಲಿ ಉಗ್ರ ಸಂಘಟನೆಗೆ ಹಣ ಸಂಗ್ರಹಿಸಿದ ಬಗ್ಗೆ ಎನ್​ಐಎ ತಂಡ ದೂರು ದಾಖಲಿಸಿತ್ತು. ತನಿಖೆ ವೇಳೆ ಹಣ ಸಂಗ್ರಹದ ದಾಖಲೆಗಳು ಪತ್ತೆಯಾಗಿತ್ತು. ಆ ಹಣ ಸಂಗ್ರಹ ಮಾಡಿದ್ದವರ ಮನೆಗಳ ಮೇಲೆ ಎನ್​ಐಎ ದಾಳಿ ನಡೆಸಿತ್ತು.

ಜೆಕೆಸಿಸಿಎಸ್ (ಜಮ್ಮು ಕಾಶ್ಮೀರ್ ಕೋಯಿಲೇಷನ್ ಫಾರ್ ಸಿವಿಲ್ ಸೊಸೈಟಿ) ಕಚೇರಿ ಹಾಗೂ ಸದಸ್ಯರ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಜ್ ಶಿಷ್ಯರ ಮನೆ ಮೇಲೆ ದಾಳಿ ನಡೆಸಲಾಗಿದೆ. ಜಮ್ಮು ಕಾಶ್ಮೀರದಲ್ಲಿರುವ ಕುರಂ ಪರ್ವೇಜ್ ನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಜೆಕೆಸಿಸಿಎಸ್​ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದಲ್ಲಿ ಬೆಂಗಳೂರಿನ ಆರ್ ಟಿ ನಗರದ ಸ್ವಾತಿ ಶೇಷಾದ್ರಿ ಅವರ ಮನೆ ಮೇಲೆ ನಿನ್ನೆ ದಾಳಿ ನಡೆಸಲಾಗಿತ್ತು.


ಬೆಂಗಳೂರಿನ ಸ್ವಾತಿ ಶೇಷಾದ್ರಿ ಸಹ ಕುರಂ ಪರ್ವೇಜ್​ನ ಶಿಷ್ಯೆ ಎನ್ನಲಾಗಿದೆ. ಅವರ ಮನೆಯಲ್ಲಿ ನಿನ್ನೆ ಇಡೀ ದಿನ ಸರ್ಚ್ ಮಾಡಿರುವ ಎನ್​ಐಎ ತಂಡ ಸದ್ಯ ಮನೆಯಲ್ಲಿ ಅಕ್ರಮ ಹಣ ಬಂದಿರುವ ದಾಖಲೆಗಳ ಸೀಜ್ ಮಾಡಿದೆ. ಜೊತೆ ಕೆಲ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಡಿಜಿಟಲ್ ಸಾಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.
Published by: Sushma Chakre
First published: October 29, 2020, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading