HOME » NEWS » State » NEWS LIVE KARNATAKA IPS OFFICER ABHINAV KHARE APPOINTED AS CBI SP AND 3 OTHER POLICE OFFICERS TRANSFERRED SCT

ಚಿಕ್ಕಬಳ್ಳಾಪುರ ಎಸ್​ಪಿ ಅಭಿನವ್ ಖರೆ ಸಿಬಿಐಗೆ ನೇಮಕ; ರಾಜ್ಯದ ಮೂವರು ಎಸ್​ಪಿಗಳ ವರ್ಗಾವಣೆ

ರಾಜ್ಯಪಾಲರ ಆದೇಶದಂತೆ ಮೂವರು ಎಸ್​ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳ ನಿರೀಕ್ಷೆಯಲ್ಲಿದ್ದರು. ಇದೀಗ ಮೂವರನ್ನೂ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

news18-kannada
Updated:March 11, 2020, 9:55 AM IST
ಚಿಕ್ಕಬಳ್ಳಾಪುರ ಎಸ್​ಪಿ ಅಭಿನವ್ ಖರೆ ಸಿಬಿಐಗೆ ನೇಮಕ; ರಾಜ್ಯದ ಮೂವರು ಎಸ್​ಪಿಗಳ ವರ್ಗಾವಣೆ
ಐಪಿಎಸ್ ಅಧಿಕಾರಿ ಅಭಿನವ್ ಖರೆ
  • Share this:
ಬೆಂಗಳೂರು (ಮಾ. 11): ಚಿಕ್ಕಬಳ್ಳಾಪುರ ಎಸ್​ಪಿಯಾಗಿರುವ ಅಭಿನವ್ ಖರೆ ಅವರನ್ನು ಸಿಬಿಐ ಎಸ್​ಪಿಯಾಗಿ ನಿಯೋಜನೆ ಮಾಡಲಾಗಿದೆ. ಇದರ ಬೆನ್ನಲ್ಲೇ  ರಾಜ್ಯದ ಮೂವರು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು (ಸೂಪರಿಂಟೆಂಡೆಂಟ್ ಆಫ್​ ಪೊಲೀಸ್)​ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರದ ಎಸ್​ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿನವ್ ಖರೆ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ. ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆಗೊಳಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ಸದ್ಯದಲ್ಲೇ ಅವರು ಸಿಬಿಐ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Sanjay Sahay IPS: ಕರ್ನಾಟಕದ ಮತ್ತೋರ್ವ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ

ಇದರ ಜೊತೆಗೆ ರಾಜ್ಯ ಸರ್ಕಾರದ ಮೂವರು ಎಸ್​ಪಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಸಚಿನ್ ಘೋರ್ಪಡೆ ಅವರನ್ನು ಪೊಲೀಸ್ ಗುಪ್ತವಾರ್ತೆ ಎಸ್​ಪಿ, ಎಂ. ಮುತ್ತುರಾಜ್ ಅವರನ್ನು ಮೈಸೂರು ಗುಪ್ತವಾರ್ತೆ ಎಸ್​ಪಿ ಹಾಗೂ ಮಧುರವೀಣಾ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್​ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ರಾಜ್ಯಪಾಲ ವಜುಭಾಯಿ ವಾಲಾ ಅವರ ಆದೇಶದಂತೆ ಈ ಮೂವರು ಎಸ್​ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳ ನಿರೀಕ್ಷೆಯಲ್ಲಿದ್ದರು. ಇದೀಗ ಮೂವರನ್ನೂ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
First published: March 11, 2020, 9:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories