ಲಾಕ್​​ಡೌನ್​ ಮಧ್ಯೆಯೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಲಕ್ಷ ಮೌಲ್ಯದ ಗಂಧದ ಮರ ಕದ್ದೊಯ್ದ ಕಳ್ಳರು

Male Mahadeshwara Hills: ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಗಳು ಲಾಕ್​​ಡೌನ್​ನಿಂದ ಖಾಲಿ ಖಾಲಿಯಾಗಿವೆ. ಹೀಗಾಗಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಕಡಿದು ಕದ್ದೊಯ್ಯಲಾಗಿದೆ.

news18-kannada
Updated:April 28, 2020, 10:20 AM IST
ಲಾಕ್​​ಡೌನ್​ ಮಧ್ಯೆಯೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಲಕ್ಷ ಮೌಲ್ಯದ ಗಂಧದ ಮರ ಕದ್ದೊಯ್ದ ಕಳ್ಳರು
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಏ.26): ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ದೇಶಕ್ಕೆ ದೇಶವನ್ನೇ ಸೀಲ್​ಡೌನ್​ ಮಾಡಲಾಗಿದೆ. ಹೀಗಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ವಿರಳವಾಗಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಕಳ್ಳರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಂಧದ ಮರಗಳ ಕದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.

ಚಾಮರಾಜನಗರದಲ್ಲಿ ಈವರೆಗೆ ಒಂದೇ ಒಂದು ಕೊರೋನಾ ವೈರಸ್​ ಪ್ರಕರಣ ಪತ್ತೆ ಆಗಿಲ್ಲ. ಆದಾಗ್ಯೂ ಕೆಲ ಸಡಿಲಿಕೆಗಳನ್ನು ಹೊರತುಪಡಿಸಿದರೆ ಲಾಕ್​ಡೌನ್​ ಮುಂದುವರಿದೇ ಇದೆ. ಜನರ ಓಡಾಟ ಕೂಡ ವಿರಳವಾಗಿದೆ. ಈ ವೇಳೆ ಕೆಲವರು ಲಕ್ಷಾಂತರ ಮೌಲ್ಯದ ಗಂಧದ ಮರಗಳಿಗೆ ಕೊಡಲಿ ಏಟು ಹಾಕಿದ್ದಾರೆ.

ಇದನ್ನೂ ಓದಿ: ಮಲೆ ಮಹದೇಶ್ವರ ದೇವಾಲಯದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಗಳು ಲಾಕ್​​ಡೌನ್​ನಿಂದ ಖಾಲಿ ಖಾಲಿಯಾಗಿವೆ. ಹೀಗಾಗಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಕಡಿದು ಕದ್ದೊಯ್ಯಲಾಗಿದೆ. ಉಳಿದ ದಿನಗಳಲ್ಲಾಗಿದ್ದರೆ ಈ ಭಾಗದಲ್ಲಿ ವಾಹನ ಸಂಚಾರ ಇರುತ್ತಿತ್ತು. ಹೀಗಾಗಿ ಕಳ್ಳತನ ಸಾಧ್ಯವಾಗುತ್ತಿರಲಿಲ್ಲ.

ಸದ್ಯ ಮಹದೇಶ್ವರ ವನ್ಯಧಾಮದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ, ಕಳ್ಳರು ಎಂಟಕ್ಕೂ ಹೆಚ್ಚು ಗಂಧದ ಮರಗಳನ್ನು ಕಡಿದು ಕದ್ದೊಯ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

(ವರದಿ: ಎಸ್​ಎಂ ನಂದೀಶ್)
First published: April 28, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading