ಸಿದ್ದರಾಮಯ್ಯನವರೇ ವಿದೂಷಕನಂತೆ ವರ್ತಿಸಬೇಡಿ; ಕಾಡು ಮನುಷ್ಯ ಪದ ಬಳಕೆಗೆ ಹೆಚ್​. ವಿಶ್ವನಾಥ್ ಆಕ್ರೋಶ

ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕರಂತೆ ವರ್ತಿಸಬೇಡಿ, ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿ. ನಳಿನ್ ಕುಮಾರ್ ಅವರನ್ನು ತೆಗಳುವ ಭರದಲ್ಲಿ ಕಾಡಿನ ಜನರನ್ನು ಹೀಯಾಳಿಸಿದ್ದೀರಿ ಎಂದು ಹೆಚ್​. ವಿಶ್ವನಾಥ್ ಟೀಕಿಸಿದ್ದಾರೆ.

news18-kannada
Updated:October 23, 2020, 10:06 AM IST
ಸಿದ್ದರಾಮಯ್ಯನವರೇ ವಿದೂಷಕನಂತೆ ವರ್ತಿಸಬೇಡಿ; ಕಾಡು ಮನುಷ್ಯ ಪದ ಬಳಕೆಗೆ ಹೆಚ್​. ವಿಶ್ವನಾಥ್ ಆಕ್ರೋಶ
ಹೆಚ್. ವಿಶ್ವನಾಥ್
  • Share this:
ಮೈಸೂರು (ಅ. 23): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಡು ಮನುಷ್ಯ ಎಂದು ಕರೆದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕರಂತೆ ವರ್ತಿಸಬೇಡಿ, ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿ. ನೀವು ಬಳಸಿರುವ ಭಾಷೆಯನ್ನು ಯಾರೂ ಒಪ್ಪುವುದಿಲ್ಲ. ನಳಿನ್ ಕುಮಾರ್ ಅವರನ್ನು ತೆಗಳುವ ಭರದಲ್ಲಿ ಕಾಡಿನ ಜನರನ್ನು ಹೀಯಾಳಿಸಿದ್ದೀರಿ ಎಂದು ಹೆಚ್​. ವಿಶ್ವನಾಥ್ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರೇ ನೀವೂ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಿಮ್ಮ ಮಾತನ್ನು ವಾಪಾಸ್ ಪಡೆಯಿರಿ. ನೀವು ಆಸ್ಥಾನದ ವಿದೂಷಕರ ರೀತಿ ವರ್ತಿಸದಿರಿ. ನೀವು ಬಳಸಿರುವ ಭಾಷೆಯನ್ನು ಯಾರೂ ಒಪ್ಪುವುದಿಲ್ಲ. ಇದು ಕಾಡಿನ ಜನರಿಗೆ ಮಾಡಿರುವ ಅವಮಾನ. ನೀವು ಕಾಡಿನ ಜನರನ್ನ ಹೀಯಾಳಿಸಿದ್ದೀರಿ ಎಂದು ಮೈಸೂರಿನಲ್ಲಿ ವಾಗ್ದಾಳಿ ನಡೆಸಿರುವ ಹೆಚ್​. ವಿಶ್ವನಾಥ್, ಸಿದ್ದರಾಮಯ್ಯ ಅವರಿಗೆ ಏಕವಚನ, ಬಹುವಚನಕ್ಕೆ ವ್ಯತ್ಯಾಸ ಗೊತ್ತಿಲ್ಲ. ಸುಮ್ಮನೆ ಬೇರೆಯವರಿಗೆ ಸಂಧಿ ಪಾಠ ಮಾಡುತ್ತಾರೆ. ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ. ಜನ ನಿಮ್ಮ ತಲೆ ಖಾಲಿಯಾಗಿದೆ, ವಿವೇಚನೆ ಇಲ್ಲ ಅಂದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಭಾರತ ಕೊಳಕು, ಗಲೀಜು ದೇಶ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಡೊನಾಲ್ಡ್​ ಟ್ರಂಪ್ ಟೀಕೆ

ಕಾಡು ಮನುಷ್ಯ ಎನ್ನುವುದು ಅರಣ್ಯ ಸಂರಕ್ಷಕರಿಗೆ ಮಾಡುವ ಅವಮಾನ. ಈಗ ಎಷ್ಟೋ ಜನ‌‌ ನಾವು ಕಾಡು ಜನ ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ಪಕ್ಷದ ರಾಜ್ಯಧ್ಯಕ್ಷರನ್ನು ಕಾಡುಮನುಷ್ಯ ಅನ್ನೋದು ಸರಿಯೇ? ಸಿದ್ದರಾಮಯ್ಯ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯನವರಿಗೆ ಎಂಎಲ್‌ಸಿ ಹೆಚ್. ವಿಶ್ವನಾಥ್ ಎಚ್ಚರಿಸಿದ್ದಾರೆ.

ಹುಲಿಯನ್ನು ಕಾಡಿಗೆ ಓಡಿಸುತ್ತೇನೆ, ಬಂಡೆಯನ್ನು ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ಕಾಡು ಮನುಷ್ಯ. ನಾಡಿನಲ್ಲಿ ಇರಲು ನಾಲಾಯಕ್ ಆಗಿರುವ ಆತನನ್ನು ಬಿಜೆಪಿಯವರು ತಕ್ಷಣ ಕಾಡಿಗೆ ಬಿಡಬೇಕು ಎಂದು ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
Published by: Sushma Chakre
First published: October 23, 2020, 10:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading