ಚಾಮರಾಜನಗರ: ನಾಳೆ ರಾಜ್ಯದ ಮೊದಲ ಸಹಕಾರಿ ವ್ಯವಸ್ಥೆಯ ತೆಂಗು ಸಂಸ್ಕರಣ ಘಟಕ ಲೋಕಾರ್ಪಣೆ

ಐದು ಎಕರೆ ಪ್ರದೇಶದಲ್ಲಿ ಸಂಘದ ಷೇರು ಬಂಡವಾಳ ಹಾಗು ಸರ್ಕಾರದ ನೀಡಿರುವ 7.5 ಕೋಟಿ ರೂಪಾಯಿ ನೆರವಿನಿಂದ ನೂತನ ತಂತ್ರಜ್ಷಾನದೊಂದಿಗೆ ನಿರ್ಮಾಣಗೊಂಡಿರುವ ಈ ಘಟಕದಲ್ಲಿ ತೆಂಗಿನಕಾಯಿ ಸಂಸ್ಕರಿಸಿ ಪೌಡರ್ ಮಾಡಿ ಮಾರಾಟ ಮಾಡಲು ಯೋಜಿಸಲಾಗಿದೆ. ಈ ಘಟಕ ದಿನವೊಂದಕ್ಕೆ 50 ಸಾವಿರ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ಪುಡಿ ಮಾಡುವ ಸಾಮರ್ಥ್ಯ ಹೊಂದಿದೆ.

news18-kannada
Updated:September 17, 2020, 5:45 PM IST
ಚಾಮರಾಜನಗರ: ನಾಳೆ ರಾಜ್ಯದ ಮೊದಲ ಸಹಕಾರಿ ವ್ಯವಸ್ಥೆಯ ತೆಂಗು ಸಂಸ್ಕರಣ ಘಟಕ ಲೋಕಾರ್ಪಣೆ
ತೆಂಗು ಸಂಸ್ಕರಣ ಘಟಕ
  • Share this:
ಚಾಮರಾಜನಗರ(ಸೆ.17): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಾಜ್ಯದಲ್ಲೇ ಸಹಕಾರಿ ವ್ಯವಸ್ಥೆಯ ಮೊದಲ ತೆಂಗು ಸಂಸ್ಕರಣ ಘಟಕ ತಲೆ ಎತ್ತಿದ್ದು, ನಾಳೆ ಲೋಕಾರ್ಪಣೆ ಆಗಲಿದೆ. ನುಸಿ ರೋಗ, ಇಳುವರಿ ಕುಂಠಿತ ಹಾಗು ಬೆಲೆ ಕುಸಿತದಿಂದ ಕಂಗಾಲಾಗಿರುವ ಗಡಿ ಜಿಲ್ಲೆಯ ತೆಂಗುಬೆಳೆಗಾರರಿಗೆ ಈ ತೆಂಗು ಸಂಸ್ಕರಣ ಘಟಕ ಆಶಾಕಿರಣವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ 11500 ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಅಂತರ್ಜಲ ಕುಸಿತ, ಹಾಗು ನುಸಿರೋಗದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ತೆಂಗುಬೆಳೆ ಹಾನಿಗೊಳಗಾಗಿದೆ. ವೈಜ್ಷಾನಿಕ ಬೆಲೆಯೂ ಇಲ್ಲದೆ ತೆಂಗನ್ನೆ ನಂಬಿಕೊಂಡಿದ್ದ ರೈತರ ಪಾಡು ಹೇಳತೀರದಾಗಿದೆ. ಈ ಹಿನ್ನಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಸೇರಿ ತೆಂಗು ಬೆಳೆ ಪುನಶ್ಚೇತನ ಜೊತೆಗೆ ತೆಂಗಿನ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘ ಸ್ಥಾಪಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ  ಈ ಸಹಕಾರ ಸಂಘ ಚಾಮರಾಜನಗರ ತಾಲೋಕಿನ ಮುಣಚನಹಳ್ಳಿ ಬಳಿ ತೆಂಗು ಸಂಸ್ಕರಣ ಘಟಕ ಸ್ಥಾಪಿಸಿದೆ. ಅದರೆ ನಾನಾ ಕಾರಣಗಳಿಂದ ಅಧಿಕೃತವಾಗಿ ಉದ್ಘಾಟನೆಗೊಂಡಿರಲಿಲ್ಲ.

ಐದು ಎಕರೆ ಪ್ರದೇಶದಲ್ಲಿ ಸಂಘದ ಷೇರು ಬಂಡವಾಳ ಹಾಗು ಸರ್ಕಾರದ ನೀಡಿರುವ 7.5 ಕೋಟಿ  ರೂಪಾಯಿ ನೆರವಿನಿಂದ ನೂತನ ತಂತ್ರಜ್ಷಾನದೊಂದಿಗೆ  ನಿರ್ಮಾಣಗೊಂಡಿರುವ ಈ ಘಟಕದಲ್ಲಿ ತೆಂಗಿನಕಾಯಿ ಸಂಸ್ಕರಿಸಿ ಪೌಡರ್ ಮಾಡಿ ಮಾರಾಟ ಮಾಡಲು ಯೋಜಿಸಲಾಗಿದೆ. ಈ ಘಟಕ ದಿನವೊಂದಕ್ಕೆ 50 ಸಾವಿರ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ಪುಡಿ ಮಾಡುವ ಸಾಮರ್ಥ್ಯ ಹೊಂದಿದೆ.

ತೆಂಗು ಬೆಳೆಗಾರರಿಂದ ವೈಜ್ಷಾನಿಕ ಬೆಲೆ ನೀಡಿ ತೆಂಗು ಖರೀದಿಸಲಾಗುವುದು. ಖರೀದಿ ಮಾಡಿದ ನಂತರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಮಾರುಕಟ್ಟೆಯಲ್ಲಿ ದರಕುಸಿತಗೊಂಡರೂ ರೈತರು ಆತಂಕಪಡಬೇಕಿಲ್ಲ. ಒಂದೆಡೆ ಉತ್ತಮ ಬೆಲೆ ಸಿಗುವುದಲ್ಲದೆ ಈ ಘಟಕದ ಲಾಭಾಂಶ ಸಂಘದ ಸದಸ್ಯರಾಗಿರುವ ತೆಂಗು ಬೆಳೆಗಾರರಿಗೆ ದೊರೆಯಲಿದೆ.

ಮುಂಬರುವ ದಿನಗಳಲ್ಲಿ ನೀರಾ ಸಂಸ್ಕರಣ ಘಟಕ, ತೆಂಗುಬೆಳೆಗಾರರಿಗೆ ಸಾಲ ಸೌಲಭ್ಯ, ತೆಂಗಿನ ಸಸಿ ವಿತರಣೆ , ಔಷಧಿ ಗೊಬ್ಬರ ಮತ್ತಿತರ ಪರಿಕರಗಳ ವಿತರಣೆ  ಸೇರಿದಂತೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು  ತೆಂಗುಬೆಳೆಗಾರರ ಸಂಸ್ಕರಣ  ಮತ್ತು ಮಾರಾಟ ಸಹಾಕಾರ ಸಂಘದ ಅಧ್ಯಕ್ಷ ಮಹೇಶ್ ಪ್ರಭು ನ್ಯೂಸ್-18ಗೆ ತಿಳಿಸಿದರು.

ಇದನ್ನೂ ಓದಿ: Ashok Gasti: ಕೊರೋನಾ ಸೋಂಕಿನಿಂದ ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ನಿಧನ

ಸದ್ಯಕ್ಕೆ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ  ಕಾರ್ಯನಿರ್ವಹಿಸುತ್ತಿರು ಈ ಸಹಕಾರ ಸಂಘವು ಜಿಲ್ಲೆಯಾಧ್ಯಂತ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸುವ ಉದ್ದೇಶ ಹೊಂದಿದೆ. ಸಂಘದ ಪದಾಧಿಕಾರಿಗಳ ಅವಿರತ ಶ್ರಮದ ಫಲವಾಗಿ ಸಹಕಾರಿ ವ್ಯವಸ್ಥೆಯಲ್ಲಿ ರಾಜ್ಯದಲ್ಲೇ ಮೊದಲ ತೆಂಗುಸಂಸ್ಕರಣ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ನಾಳೆ ಚಾಲನೆ ನೀಡಲಿದ್ದಾರೆ.
Published by: Ganesh Nachikethu
First published: September 17, 2020, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading