HOME » NEWS » State » MINISTER K SUDHAKAR AND SHASHIKALA JOLLE HITS OUT AT UDDHAV THACKERAY ABOUT BELAGAVI BORDER LG

ಉದ್ದವ್​ ಠಾಕ್ರೆ ಹಗಲುಗನಸು ಕಾಣುವುದನ್ನ ಬಿಡಬೇಕು; ಮಹಾ ಸಿಎಂಗೆ ಸಚಿವರ ತಿರುಗೇಟು

ಉದ್ದವ ಠಾಕ್ರೆ ಹೇಳಿಕೆಗೆ ಗಡಿಯ ನಿಪ್ಪಾಣಿಯಲ್ಲಿ ಆರೋಗ್ಯ ಇಲಾಖೆ ಸಚಿವ ಕೆ. ಸುಧಾಕರ ತಿರುಗೇಟು ನೀಡಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದೆ ಅನ್ನೋದೆ ಮುರ್ಖತನದ ಹೇಳಿಕೆ ಓರ್ವ ಮುಖ್ಯಮಂತ್ರಿ ಇತಿಹಾಸವನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಹೇಳಬಹುದು. ಯಾವಾಗ ಏಕೀಕರಣ ಆಗಿದೆ ಎನ್ನುವ ಇತಿಹಾಸವನ್ನು ಮೊದಲು ಉದ್ದವ ಠಾಕ್ರೆ ತಿಳಿದುಕೊಳ್ಳಲಿ. ಸುಖಾ ಸುಮ್ಮನೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ಸ್ಥಳೀಯರನ್ನ ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ನಮ್ಮ ರಾಜ್ಯದ ಜನ ಆತಂಕ ಪಡುವ ಅಗತ್ಯ ಇಲ್ಲ. ಬೆಳಗಾವಿ ನಮ್ಮ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಉತ್ತರಿಸಿದ್ದಾರೆ.

news18-kannada
Updated:January 18, 2021, 7:51 PM IST
ಉದ್ದವ್​ ಠಾಕ್ರೆ ಹಗಲುಗನಸು ಕಾಣುವುದನ್ನ ಬಿಡಬೇಕು; ಮಹಾ ಸಿಎಂಗೆ ಸಚಿವರ ತಿರುಗೇಟು
ಸುಧಾಕರ್-ಶಶಿಕಲಾ ಜೊಲ್ಲೆ
  • Share this:
ಚಿಕ್ಕೋಡಿ(ಜ.18): ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಬೆಳಗಾವಿಯನ್ನು ಪಡೆದೇ ಪಡೆಯುತ್ತೇವೆ. ಬೆಳಗಾವಿ ಮಹಾರಾಷ್ಟ್ರದ ಆಕ್ರಮಿತ ಪ್ರದೇಶ ಎಂದೆಲ್ಲಾ ಸಿಎಂ ಉದ್ಧವ್​ ಠಾಕ್ರೆ ಬಾಯಿ ಹರಿಬಿಟ್ಟ ಹಿನ್ನೆಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಹಲವು ಕನ್ನಡ ಪರ ಸಂಘಟನೆಗಳು ಉದ್ದವ್​​ ಠಾಕ್ರೆ ವಿರುದ್ದ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇನ್ನು ನಾಲಿಗೆ ಹರಿಬಿಟ್ಟ ಠಾಕ್ರೆ ವಿರುದ್ದ ಗಡಿಯಲ್ಲೆ ನಿಂತು ಸಚಿವ ಸುಧಾಕರ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು ನೀಡಿದ್ದು, ಹಗಲುಗನಸು ಕಾಣುವುದನ್ನ ಠಾಕ್ರೆ ಬಿಡಬೇಕು ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

ಹೌದು, ನಿನ್ನೆ ಬೆಳಗಾವಿಗೆ ಅಮಿತ್ ಶಾ ಆಗಮಿಸಿದ್ದರು. ಇದೆ ವೇಳೆ ಪುಂಡ ಶಿವಸೇನೆ ತನ್ನ ಉದ್ದಟತನ ತೋರಲು ಮುಂದಾಗಿತ್ತು. ಬೆಳಗಾವಿ ನಗರದಲ್ಲಿ ಉದ್ದಟತನ ತೋರಲು ಮುಂದಾಗಿದ್ದ ಶಿವಸೇನೆ  ಎಂ.ಈ.ಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆ ನಡೆಸಲು ಮುಂದಾಗಿತ್ತು. ಇದೇ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಯಡ್ರಾಂವಕರ್ ಕೂಡಾ ಭಾಗಿಯಾಗಲು ಆಗಮಿಸಿದ್ದರು. ಆದರೆ ಕರ್ನಾಟಕ ಗಡಿಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಟೋಲ್ ಬಳಿಯೇ ಅವರನ್ನು ತಡೆಯಲಾಗಿತ್ತು. ಇಷ್ಟಕ್ಕೆ ಕೆರಳಿದ ಪುಂಡ ಶಿವಸೇನೆ ಗಡಿಯಲ್ಲಿ ನಿಂತು ರಾಜ್ಯದ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು.

ಎಷ್ಟೇ ಪುಂಡಾಟ ಪ್ರದರ್ಶನ ಮಾಡಿದ್ದರೂ ಸಹ ಪೊಲೀಸರು ಸೊಪ್ಪು ಹಾಕದಿದ್ದಾಗ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿ ಕರ್ನಾಟಕ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸಚಿವರನ್ನ ಬೆಳಗಾವಿಗೆ ಬಿಟ್ಟಿಲ್ಲ ಎಂದೆಲ್ಲಾ ಸುಳ್ಳು ಹೇಳುತ್ತಲೇ ತನ್ನ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಶಿವಸೇನೆ ಮುಂದಾಗಿತ್ತು. ಇದಕ್ಕೆ ಸ್ವತಃ ಮುಖ್ಯಮಂತ್ರಿ ಉದ್ದವ ಠಾಕ್ರೆ ಕೂಡ ದನಿಗೂಡಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿ ನೀಡಿದ್ದರು.

11 ಜನರ ಬಲಿ ಪಡೆದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ

ಇನ್ನು ಉದ್ದವ ಠಾಕ್ರೆ ಹೇಳಿಕೆಗೆ ಗಡಿಯ ನಿಪ್ಪಾಣಿಯಲ್ಲಿ ಆರೋಗ್ಯ ಇಲಾಖೆ ಸಚಿವ ಕೆ. ಸುಧಾಕರ ತಿರುಗೇಟು ನೀಡಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದೆ ಅನ್ನೋದೆ ಮುರ್ಖತನದ ಹೇಳಿಕೆ ಓರ್ವ ಮುಖ್ಯಮಂತ್ರಿ ಇತಿಹಾಸವನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಹೇಳಬಹುದು. ಯಾವಾಗ ಏಕೀಕರಣ ಆಗಿದೆ ಎನ್ನುವ ಇತಿಹಾಸವನ್ನು ಮೊದಲು ಉದ್ದವ ಠಾಕ್ರೆ ತಿಳಿದುಕೊಳ್ಳಲಿ. ಸುಖಾ ಸುಮ್ಮನೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ಸ್ಥಳೀಯರನ್ನ ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ನಮ್ಮ ರಾಜ್ಯದ ಜನ ಆತಂಕ ಪಡುವ ಅಗತ್ಯ ಇಲ್ಲ. ಬೆಳಗಾವಿ ನಮ್ಮ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಉತ್ತರಿಸಿದ್ದಾರೆ.

ಇನ್ನು ಇದೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಕೂಡ ಠಾಕ್ರೆ ಹೇಳಿಕೆಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ. ಉದ್ದವ ಠಾಕ್ರೆ ಹಗಲು ಕನಸು ಕಾಣುತ್ತಿದ್ದಾರೆ. ಮಹಾರಾಷ್ಟ್ರ ಕರ್ನಾಟಕದ ಎರಡು ಭಾಷೆಯ ಜನ ಅನ್ಯೋನ್ಯತೆಯಿಂದ ಇದ್ದಾರೆ. ಉದ್ದವ್​​ ಠಾಕ್ರೆ ಎರಡು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ರೀತಿಯಲ್ಲಿ ಮಾತನಾಡುವುದು ಮುರ್ಖತನದ ಮಾತು.  ಇದನ್ನ ನಾವು ಖಂಡಿಸುತ್ತೇವೆ. ಹಗಲುಗನಸು ಕಾಣುತ್ತಿರುವ ಪರಿಣಾಮವಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ. ಹಾಗಾದ್ರೆ ಸೊಲ್ಲಾಪುರ, ಮುಂಬೈ ನಮ್ಮ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಬಹುದು. ಭಾಷಾವಾರು ಪ್ರಾಂತ್ಯಗಳ ಮೂಲಕ ವಿಭಜನೆ ಆಗದೆ, ರಾಜಕೀಯ ಲಾಭಕ್ಕಾಗಿ ಈ ರೀತಿಯ ಹೇಳಿಕೆಗಳನ್ನ ಠಾಕ್ರೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೆಳಗಾವಿಯನ್ನ ಬಿಟ್ಟು ಕೊಡುವುದಿಲ್ಲ ಎಂದು ಸಚಿವೆ ಶಶಿಕಲಾ ಜೋಲ್ಲೆ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಪದೇ ಪದೇ  ಕರ್ನಾಟಕ ಹಾಗೂ ಗಡಿಯ ವಿಚಾರದಲ್ಲಿ ಶಿವಸೇನೆ ಸದಾ ಒಂದಿಲ್ಲೊಂದು ಕಿರಿಕ್​​ ಮಾಡುತ್ತಲೇ ಬಂದಿದೆ. ಆದರೆ ಈ ಬಾರಿ ಗಡಿಯ ಒಳಗೆ ಬಂದು ಕಿರಿಕ್​​ ಮಾಡಲು ಯತ್ನಿಸಿದ್ದ ಪುಂಡರಿಗೆ ಪೊಲೀಸರು ಅವಕಾಶ ನೀಡಿಲ್ಲ. ಇದೇ ಕಾರಣಕ್ಕಾಗಿ ಈಗ ದೂರದಿಂದಲೆ ನಮ್ಮ ವಿರುದ್ದ ನಾಲಿಗೆ ಹರಿ ಬಿಡುತ್ತಿದೆ ಶಿವಸೇನೆ.
Published by: Latha CG
First published: January 18, 2021, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories