ರಾಜ್ಯೋತ್ಸವದಿನದಂದು ಎಂಇಎಸ್​ ಕಪ್ಪು ಪಟ್ಟಿ ಪ್ರತಿಭಟನೆ; ಕನ್ನಡ ಸಂಘಗಳಿಂದ ವಿರೋಧ

ಕರಾಳ ದಿನದಂದು ಮಹಾರಾಷ್ಟ್ರದ ಎಲ್ಲ ಸಚಿವರು ಕಪ್ಪು ಬಟ್ಟವನ್ನು ಧರಿಸಿ ಕೆಲಸ ನಿರ್ವಹಿಸಬೇಕು ಎಂದು ಗಡಿ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ.

news18-kannada
Updated:October 30, 2020, 8:56 PM IST
ರಾಜ್ಯೋತ್ಸವದಿನದಂದು ಎಂಇಎಸ್​ ಕಪ್ಪು ಪಟ್ಟಿ ಪ್ರತಿಭಟನೆ; ಕನ್ನಡ ಸಂಘಗಳಿಂದ ವಿರೋಧ
ಫೈಲ್​ ಫೋಟೋ
  • Share this:
ಬೆಳಗಾವಿ(ಅ.30): ನವೆಂಬರ್ 1ರಂದು ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ನಾಡಿನ ಪ್ರತಿಯೊಬ್ಬರು ಕನ್ನಡ  ಉತ್ಸವ ಆಚರಣೆಗೆ  ಮಾಡುತ್ತಿರುವ  ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಂಇಎಸ್​ ಕರಾಳ ದಿನ ಆಚರಿಸುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಈ ವರ್ಷ ಈ ಕರಾಳದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಕರಾಳ ದಿನ ಆಚರಣೆಗೆ ಅನುಮತಿ ಪಡೆಯಲು ಈಗಾಗಲೇ ಎಂಇಎಸ್ ಸಂಘಟನೆ ಹರಸಾಹಸ ಮಾಡುತ್ತಿದೆ. ಈ ನಡುವೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಹೊಸ ಖ್ಯಾತೆಯನ್ನು ಆರಂಭಿಸಿದ್ದಾರೆ. ನವೆಂಬರ್ 1ರಂದು ಮಹರಾಷ್ಟ್ರ ಎಲ್ಲ ಸಚಿವರು ಕಪ್ಪು ಬಟ್ಟಿಯನ್ನು ಧರಿಸುವ ಮೂಲಕ ಕರ್ನಾಟಕ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಸಚಿವ ಏಕನಾಥ್ ಶಿಂಧೆ ರಾಜ್ಯದ ಎಲ್ಲ ಸಚಿವರಿಗೆ ಈ ಬಗ್ಗೆ ಪತ್ರ ಬರೆದು ಮನವಿಯನ್ನು ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರ ಅನ್ಯಾಯವನನ್ನು ಮಾಡುತ್ತಿದೆ. ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಕರಾಳ ದಿನ ಆಚರಣೆ ನಡೆದುಕೊಂಡು ಬಂದಿದೆ. ಇದೀಗ ಇದಕ್ಕೆ ಅನುಮತಿಯನ್ನು ಕರ್ನಾಟಕ ಸರ್ಕಾರ ನೀಡಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದು ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ.

ಕರಾಳ ದಿನದಂದು ಮಹಾರಾಷ್ಟ್ರದ ಎಲ್ಲ ಸಚಿವರು ಕಪ್ಪು ಬಟ್ಟವನ್ನು ಧರಿಸಿ ಕೆಲಸ ನಿರ್ವಹಿಸಬೇಕು ಎಂದು ನಾವು ಮನವಿ ಮಾಡಿದ್ದೇವೆ. ಮರಾಠಿ ಭಾಷಿಕರಿಗೆ ನ್ಯಾಯ ಸಿಗೋ ವರೆಗೆ ನಾವು ಅವರ ಜತೆಗೆ ಇದ್ದೇವೆ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ.

ಇದನ್ನು ಓದಿ: ಶಿಕಾರಿಪುರದ ರೀತಿ ಶಿರಾ ಕ್ಷೇತ್ರದ ಅಭಿವೃದ್ಧಿ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭರವಸೆ

ಮಹಾರಾಷ್ಟ್ರದಲ್ಲಿ ಶಿವಸೇವೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ. ಶಿವಸೇನೆ, ಎನ್ ಸಿ ಪಿ ಕರ್ನಾಟಕದ ವಿರುದ್ಧ ನಿರಂತವಾಗಿ ಇಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ನಿಲುವು ಈ ವಿಚಾರದಲ್ಲಿ ಏನು ಎಂಬುದು ಇದೀಗ ದೊಡ್ಡ ಪ್ರಶ್ನೆ ಉದ್ಭವಿಸಿದೆ.

ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಹೇಳಿಕೆಗೆ ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ತನ್ನ ಹೇಳೆಯ ನಿಚ ಬುದ್ದಿಯನ್ನು ಪ್ರದರ್ಶನ ಮಾಡಿದೆ. ಇಲ್ಲಿನ ಜನಪ್ರತಿನಿಧಿಗಳು ಮಹಾರಾಷ್ಟ್ರ ಸರ್ಕಾರ ಜತೆಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಕನ್ನಡಿಗರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ.  ಮಹಾನಗರ ಪಾಲಿಕೆ, ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ,  ಜಿಲ್ಲಾ ಉಸ್ತುವಾರಿ ಸಚಿವರು ಮಹಾರಾಷ್ಟ್ರ ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
Published by: Seema R
First published: October 30, 2020, 8:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading