ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ; ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಆನಂದ್ ಪ್ರಸಾದ್ ಬಂಧನ

ಟ್ವಿಟ್ಟರ್​ನಲ್ಲಿ ಅಮಿತ್ ಶಾ ಬಗ್ಗೆ ಯಾರೋ ಬರೆದಿದ್ದ ಪೋಸ್ಟ್​ಗೆ ಪ್ರತಿಕ್ರಿಯಿಸುವಾಗ ಆನಂದ್ ಪ್ರಸಾದ್ ಅವರು ಅಮಿತ್ ಶಾ ಬಗ್ಗೆ ನಿಂದನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

news18-kannada
Updated:August 3, 2020, 1:04 PM IST
ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ; ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಆನಂದ್ ಪ್ರಸಾದ್ ಬಂಧನ
ಆನಂದ್ ಪ್ರಸಾದ್
  • Share this:
ಬೆಂಗಳೂರು(ಆ. 03): ಕೊರೋನಾ ವೈರಸ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹವಾಗಿ ಬರೆದ ಕಾರಣಕ್ಕೆ ಕೆಪಿಸಿಸಿಯ ಸೋಷಿಯಲ್ ಮೀಡಿಯಾದ ಕಾರ್ಯದರ್ಶಿ ಆನಂದ್ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಕೆಆರ್ ಪುರಂನಲ್ಲಿರುವ ಅವರ ನಿವಾಸದಲ್ಲಿ ಆನಂದ್ ಪ್ರಸಾದ್ ಅವರನ್ನು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಆರ್.ಜೆ. ನವೀದ್ ಎಂಬುವರು ಅಮಿತ್ ಷಾಗೆ ಕೊರೋನಾ ಪಾಸಿಟಿವ್ ಬಂದಿರುವ ಕುರಿತು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೆಪಿಸಿಸಿ ಸೋಷಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್ ಅವರು ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹವಾಗಿ ಕಮೆಂಟ್ ಹಾಕಿದ್ದರು. ಈ ಸಂಬಂಧ ಆನಂದ್ ಪ್ರಸಾದ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಸಿಸಿ ಸೆಕ್ಷನ್ 505 (1)(b), 505(1) (C),153 ಅಡಿ ಎಫ್​ಐಆರ್ ದಾಖಲಾಗಿತ್ತು.

Anand Prasad comment on Amith Sah
ಆನಂದ್ ಪ್ರಸಾದ್ ಮಾಡಿದ ಕಮೆಂಟ್


ಇದನ್ನೂ ಓದಿ: ಸಿಎಂ ಗೃಹ ಕಚೇರಿಯಲ್ಲಿ 6 ಸಿಬ್ಬಂದಿ, ಕಾವೇರಿ ನಿವಾಸದಲ್ಲಿ ಅಡುಗೆಭಟ್ಟ, ಕಾರ್ ಡ್ರೈವರ್​ಗೂ ಕೊರೋನಾ ಪಾಸಿಟಿವ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ನಿನ್ನೆ ದೃಢಪಟ್ಟಿದೆ. ಅವರನ್ನು ದೆಹಲಿಯ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.
Published by: Vijayasarthy SN
First published: August 3, 2020, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading