ಮುನಿರತ್ನ ಕಣ್ಣೀರಿಗೂ, ಕುಸುಮಾ ಕಂಬನಿಗೂ ವ್ಯತ್ಯಾಸವಿದೆ; ಡಿಕೆ ಶಿವಕುಮಾರ್

ಆರ್ ಆರ್ ನಗರದಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುನಿರತ್ನ ಅವರು ಯಾಕೆ ಅಳಬೇಕು, ಇವಾಗ ಅಳುವಂತದ್ದು ಏನು ತೊಂದರೆ ಆಗಿದೆ? ಕುಸುಮಾ ತಮ್ಮ ಜೀವನವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ ಎಂದಿದ್ದಾರೆ.

news18-kannada
Updated:October 29, 2020, 2:54 PM IST
ಮುನಿರತ್ನ ಕಣ್ಣೀರಿಗೂ, ಕುಸುಮಾ ಕಂಬನಿಗೂ ವ್ಯತ್ಯಾಸವಿದೆ; ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಅ. 29): ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಗೂ, ಮುನಿರತ್ನ ಅವರ ಕಣ್ಣೀರಿಗೂ ವ್ಯತ್ಯಾಸ ಇದೆ. ಕುಸುಮಾ ತಮ್ಮ ಜೀವನವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ನನ್ನ ಉಸಿರು, ರಕ್ತ ಅಂತ ಮುನಿರತ್ನ ಹೇಳಿದ್ದರು. ಆದರೆ, ಈಗ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆನಲ್ಲ ಎಂದು ಮುನಿರತ್ನ ಕಣ್ಣೀರು ಹಾಕಿರಬಹುದು. ಜನರಿಗೆ ಉತ್ತರ ಕೋಡೋಕೆ ಆಗುತ್ತಿಲ್ಲ ಅಂತ ನೊಂದುಕೊಂಡಿರಬಹುದು ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.

ಆರ್ ಆರ್ ನಗರದಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುನಿರತ್ನ ಅವರು ಯಾಕೆ ಅಳಬೇಕು, ಇವಾಗ ಅಳುವಂತದ್ದು ಏನು ತೊಂದರೆ ಆಗಿದೆ? ಅವರು ವೋಟರ್ ಐಡಿ ಪ್ರಿಂಟ್ ಮಾಡಿ ಹಣ ಹಂಚುತ್ತಿರುವುದು ನಿಜ. ನಕಲಿ ವೋಟರ್ ಐಡಿ ಬಗ್ಗೆ ಇದೇ ಮುನಿರತ್ನ ಬಗ್ಗೆ ಮೋದಿ, ಯಡಿಯೂರಪ್ಪ ಮಾತಾಡಿದ್ದಾರೆ. ಈಗ ಅವರನ್ನು ಸಮರ್ಥನೆ ಮಾಡಿಕೊಳ್ಳಲಿ ಎಂದು ಮುನಿರತ್ನ ಹಾಗೂ ಸಂಪುಟ ಸಚಿವರಿಗೆ ಡಿಕೆಶಿ ತಿರುಗೇಟು ‌ನೀಡಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿರುವ ರಾಜ್ಯದ ಜನರ ಪರವಾಗಿ ಪ್ರಧಾನಿ ಮುಂದೆ ಕಟುವಾಗಿ ಧ್ವನಿಯೆತ್ತಿ; ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ

ಉಪ ಚುನಾವಣೆ ಫಲಿತಾಂಶ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮಾಹಿತಿ ಇರಬಹುದು. ಅದಕ್ಕಾಗಿ ಅವರು ಹೇಳಿರಬಹುದು. ಆದರೆ ಪಾರ್ಟಿ ಬಿಟ್ಟು ಹೋಗಿರೋರು ಏನೇನು ಮಾತಾಡಿದ್ದಾರೋ ಗೊತ್ತಿಲ್ಲ. ಬಹಳ ಮಂದಿ ಶಾಸಕರು, ಮಂತ್ರಿಗಳು ಏನೇನೋ ಮಾತನಾಡುತ್ತಿದ್ದಾರೆ. ಈಗ ಆ ಬಗ್ಗೆ ನಾನು ವ್ಯಾಖ್ಯಾನ ಮಾಡೋದಿಲ್ಲ. ಈಗ ಆರ್​ಆರ್​ ನಗರದಲ್ಲಿ ಕುಸುಮಾ ವರ್ಸಸ್ ಮುನಿರತ್ನ ಮಧ್ಯೆ ಚುನಾವಣೆ ನಡೆಯುತ್ತಿದೆ. ನನ್ನ ರಕ್ತವೇ ಕಾಂಗ್ರೆಸ್, ನನ್ನ ಉಸಿರೇ ಕಾಂಗ್ರೆಸ್ ಅಂತ ಮುನಿರತ್ನ ಹೇಳಿರಲಿಲ್ಲವೇ? ಈಗ ಅವರ ರಕ್ತ ಏನಾಯ್ತು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಾರೆ, ಡಿಕೆ ಶಿವಕುಮಾರ್ ಹಿಂದೆ ಯಾರೂ ಇಲ್ಲ ಅಂತಾರೆ. ಹೌದು, ನನ್ನ ಹಿಂದೆ ಯಾರೂ ಇಲ್ಲ. ನಾನು ಇರೋದು ಒಬ್ಬನೇ., ಹುಟ್ಟುವಾಗಲೂ ನಾನೊಬ್ಬನೇ ಬಂದಿದ್ದು, ಸಾಯುವಾಗಲೂ ನಾನೊಬ್ಬನೇ ಹೋಗೋದು. ಮುನಿರತ್ನ ಇದಕ್ಕೂ ಮೊದಲು ಸಿನಿಮಾ ನಿರ್ದೇಶಕ, ನಿರ್ಮಾಪಕರಾಗಿದ್ದರು. ಈಗ ನಿಜ ಜೀವನದಲ್ಲಿ ನಟರೂ ಆಗಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ. ರಾಜ್ಯದ ಮುಖ್ಯಮಂತ್ರಿಗಳೇ ಉಪಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಅಂದರೆ ಅವರಿಗೆ ಯಾವ ರೀತಿ ಆತಂಕ ಇದೆ ಎಂಬುದನ್ನು ನೋಡಿ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
Published by: Sushma Chakre
First published: October 29, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading