Kodagu Rain: ಕೊಡಗಿನಲ್ಲಿ ಇನ್ನೆರಡು ದಿನ ಭಾರೀ ಮಳೆ; ರೆಡ್​ ಅಲರ್ಟ್​ ಘೋಷಣೆ

Kodagu Weather Updates: ಮಳೆ ಜಾಸ್ತಿಯಾದಲ್ಲಿ ಗ್ರಾಮಗಳಿಗೂ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಇನ್ನು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

news18-kannada
Updated:September 21, 2020, 9:16 AM IST
Kodagu Rain: ಕೊಡಗಿನಲ್ಲಿ ಇನ್ನೆರಡು ದಿನ ಭಾರೀ ಮಳೆ; ರೆಡ್​ ಅಲರ್ಟ್​ ಘೋಷಣೆ
ಕೊಡಗಿನಲ್ಲಿ ಮಳೆ
  • Share this:
ಕೊಡಗು(ಸೆ.21): ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು ಮಳೆಗೆ  ಸಂಪೂರ್ಣ ನಲುಗಿ ಹೋಗಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು,  ಇನ್ನೂ ಎರಡು ದಿನ ರೆಡ್​ ಅಲರ್ಟ್​​ ಘೋಷಿಸಲಾಗಿದೆ.  ಕಳೆದ ಎರಡು ದಿನಗಳಿಂದ ಮಳೆ ಮುಂದುವರೆದಿದ್ದು, ಇಂದು ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಸಂಜೆಯಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ಇಂದು ತನ್ನ ಆರ್ಭಟ ಮುಂದುವರೆಸಿದೆ. ಬೆಳಗ್ಗೆಯಿಂದ ಜಿಲ್ಲೆಯ ಹಲವೆಡೆ ಮಳೆ ಸುರಿಯುತ್ತಿದೆ. ಮಡಿಕೇರಿ, ಭಾಗಮಂಡಲ, ಚೇರಂಬಾಣೆ ತಲಕಾವೇರಿ ಸುತ್ತಮುತ್ತಲೂ ಮಳೆಯಾಗುತ್ತಿದೆ. ನಿನ್ನೆ ಸಂಜೆವರೆಗೆ ಸುರಿದ ಮಳೆಗೆ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತಗ್ಗಿನ ಹೊಲ-ಗದ್ದೆಗಳಿಗೆ ನುಗ್ಗಿರುವ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Assembly Session - ಇಂದಿನಿಂದ 8 ದಿನಗಳ ಕಾಲ ಕರ್ನಾಟಕ ವಿಧಾನಮಂಡಲ ಅಧಿವೇಶನ

ಕೊಡಗಿನ ರೈತರು ಎರಡನೇ ಬಾರಿಗೆ ಗದ್ದೆ ನಾಟಿ ಮಾಡಿದ್ದರು. ಆದರೆ ಈಗ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಆಗಸ್ಟ್​ ತಿಂಗಳಲ್ಲೂ ಕೂಡ ಪ್ರವಾಹದಿಂದ ಗದ್ದೆಗಳು ಕೊಚ್ಚಿ ಹೋಗಿದ್ದವು. ಈಗ ಎರಡನೇ ಬಾರಿ ಗದ್ದೆ ನಾಟಿ ಮಾಡಿದ್ದರೂ ಸಹ ಮಳೆಗೆ ಮತ್ತೆ ಕೊಚ್ಚಿ ಹೋಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆ ಜಾಸ್ತಿಯಾದಲ್ಲಿ ಗ್ರಾಮಗಳಿಗೂ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಇನ್ನು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೆಆರ್​​ಎಸ್​​ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಇನ್ನು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಮಂಡ್ಯದ ಕೆಆರ್​​ಎಸ್​ ಡ್ಯಾಂಗೆ ಹೆಚ್ಚಿನ ನೀರು ಬಿಡಲಾಗಿದೆ. ಜಲಾಶಯಯದಿಂದ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂ ಕೆಳಭಾಗದ ನದಿಪಾತ್ರದ ಜನರಿಗೆ ಕಾ.ನೀ.ನಿ ದಿಂದ ಪ್ರವಾಹದ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ನದಿ ಪಾತ್ರ ಗ್ರಾಮದಲ್ಲಿ ವಾಹನದ ಮೂಲಕ ಪ್ರವಾಹ ಪ್ರಕಟಣೆ ಹೊರಡಿಸಲಾಗಿದೆ.  ಮಧ್ಯಾಹ್ನದ ವೇಳೆಗೆ ಡ್ಯಾಂನಿಂದ ಮತ್ತಷ್ಟು ಹೆಚ್ಚು ನೀರು ಬಿಡುಗಡೆ‌ ಸಾಧ್ಯತೆ ಇದೆ. ಹೀಗಾಗಿ ಕಾವೇರಿ ನದಿ ಪಾತ್ರದ ಜನರಲ್ಲಿ  ಪ್ರವಾಹ ಭೀತಿ ಹೆಚ್ಚಾಗಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದೆ. ಮೂಡಿಗೆರೆ, ಕೊಪ್ಪ, ಎನ್​ಆರ್ ಪುರ, ಶೃಂಗೇರಿ, ಕಳಸ, ಕುದುರೆಮುಖ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಪರಿಯುತ್ತಿವೆ. ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
Published by: Latha CG
First published: September 21, 2020, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading