ಜೋಯಿಡಾದ ಜಗಲಬೇಟದಲ್ಲಿ ಫಾರ್ಮ್ಹೌಸ್ನಲ್ಲಿ ನೀರವ ಮೌನ; ರವಿ ನೆನೆದು ಕಣ್ಣೀರು
Ravi Belagere: ನನ್ನ ಜೋಯಿಡಾ ಇದು ಅಂತಾ ಮಾತು ಮಾತಿಗೂ ತಮ್ಮ ತುಂಬು ಬಾಯಿಂದ ಹೇಳುತ್ತಿದ್ದ ರವಿ ಬೆಳಗೆರೆ ಹಿಂದುಳಿದ ತಾಲೂಕನ್ನ ಪ್ರವರ್ದಮಾನಕ್ಕೆ ತರಲು ಸದಾ ಹಂಬಲಿಸುತ್ತಿದ್ದರು
news18-kannada Updated:November 13, 2020, 2:41 PM IST

ರವಿ ಬೆಳಗೆರೆ ಅವರ ಫಾರ್ಮ್ ಹೌಸ್
- News18 Kannada
- Last Updated: November 13, 2020, 2:41 PM IST
ಕಾರವಾರ (ನ.13): ರವಿ ಬೆಳೆಗೆರೆ ಹುಟ್ಟಿ ಬೆಳೆದಿದ್ದು ಬಳ್ಳಾರಿ, ಬೆಂಗಳೂರು ಆದರೂ ಉತ್ತರ ಕನ್ನಡ ಜಿಲ್ಲೆಯ ಜೊತೆ ಅವರಿಗೆ ಅವಿನಾಭಾವ ಸಂಬಂಧ. ಇಲ್ಲಿನ ವೈವಿಧ್ಯತೆಯ ಜೀವನ ಶೈಲಿಯನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ಜಿಲ್ಲೆಯ ಹಚ್ಚಹಸುರಿನ ಪ್ರಕೃತಿ ಸೌಂದರ್ಯದ ಮಧ್ಯೆ ಜೋಯಿಡಾ ತಾಲೂಕಿನ ಜಲಗಲಬೇಟ ಎಂಬ ಗ್ರಾಮದಲ್ಲಿ ಪಾರ್ಮ್ ಹೌಸ್ ಮಾಡಿಕೊಂಡಿದ್ದರು. ಜಿಲ್ಲೆಯ ಜೋಯಿಡಾ ತಾಲೂಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರಿಗೆ ಇಲ್ಲಿನ ಜನರ ಜೀವನ ಶೈಲಿ ಹೆಚ್ಚು ಹಿಡಿಸಿತು. ಬೆಳೆಗೆರೆ ಪುಸ್ತಕ ಬರೆಯಲು ಮನಸ್ಸು ಮಾಡುತ್ತಿದ್ದದ್ದು ಕೂಡ ಜಗಲಬೇಟದಲ್ಲಿ ಇರುವ ಪಾರ್ಮಹೌಸ್ ನಲ್ಲಿ ಅಂತೆ. ಈ ಎಲ್ಲ ವಿಚಾರವನ್ನ ಅವರ ಆತ್ಮೀಯರು ಆದ ನರಸಿಂಹ ಕಾಡುಮನೆ ಮೆಲಕು ಹಾಕಿದ್ದಾರೆ. ಅಕ್ಷರ ಬ್ರಹ್ಮ ಇಹಲೋಕ ತ್ಯಜಿಸಿದ್ದು, ಜಗಲಬೇಟದ ಅವರ ಪಾರ್ಮಹೌಸ್ ನಲ್ಲಿ ಈಗ ನೀರವ ಮೌನ ಆವರಿಸಿದೆ. ಆಗಾಗ್ಗೆ ಇಲ್ಲಿಗೆ ಬರುತ್ತಿದ್ದ ಬೆಳೆಗೆರೆಯವರು ಇಲ್ಲಿನ ಕೆಲಸಗಾರರೊಂದಿಗೆ ಉತ್ತಮ ಒಡನಾಟಹೊಂದಿದ್ದರು. ಈಗ ಯಜಮಾನನಿಲ್ಲದ ಮನೆಯಲ್ಲಿ ಏಕಾಂತ ಕಾಡುತ್ತಿದೆ ಎನ್ನುತ್ತಿದ್ದಾರೆ ಕೆಲಸಗಾರರು.
ಜೋಯಿಡಾ ಬಂದ್ರೆ ಖುಷಿ ಖುಷಿಯಿಂದ ಇರುತ್ತಿದ್ದ ಬೆಳಗೆರೆ ನನ್ನ ಜೋಯಿಡಾ ಇದು ಅಂತಾ ಮಾತು ಮಾತಿಗೂ ತಮ್ಮ ತುಂಬು ಬಾಯಿಂದ ಹೇಳುತ್ತಿದ್ದ ರವಿ ಬೆಳಗೆರೆ ಹಿಂದುಳಿದ ತಾಲೂಕನ್ನ ಪ್ರವರ್ದಮಾನಕ್ಕೆ ತರಲು ಸದಾ ಹಂಬಲಿಸುತ್ತಿದ್ದರು, ಒಂದು ಪುಸ್ತಕ ಬರೆಯಲು ಕುಳಿತರೆ ಆ ಪುಸ್ತಕ ಜೋಯಿಡಾದಲ್ಲೆ ಪೂರ್ಣಗೊಳಿಸಿ, ಬೆಂಗಳೂರಿಗೆ ಹೋಗುತ್ತಿದ್ದರು. ಈ ಎಲ್ಲ ವಿಷಯವನ್ನ ವಿವಿರಿಸಿದ್ದು ಆತ್ಮೀಯ ಸ್ನೇಹಿತ ಜೋಯಿಡಾದ ನರಸಿಂಹ ಚಾಪಖಂಡ. ಜೋಯಿಡಾದ ಸಾಂಸ್ಕೃತಿಕ ವೈವಿಧ್ಯತೆ ಹೆಚ್ಚು ಸೆಳೆಯುತ್ತಿತ್ತು. ಇದೇ ಕಾರಣಕ್ಕೆ ಅವರು ಇಲ್ಲಿ ಫಾರ್ಮ್ ಹೌಸ್ ಮಾಡಿದ್ದರು.

ಕೆಲಸದವರನ್ನ ಅಮ್ಮ ತಂಗಿ ಎಂದೇ ಕರೆಯುತ್ತಿದ್ದರು
ಬೆಳಗೆರೆ ಅವರಿಗೆ ತಮ್ಮ ಬರವಣಿಗೆಯಲ್ಲಿ ಎಷ್ಟು ಆಳ ಇರುತ್ತಿತ್ತೊ, ಅವರ ಪ್ರೀತಿ ವಿಶ್ವಾಸದಲ್ಲೂ ಅಷ್ಟೇ ಆಳ ಇರುತ್ತಿತ್ತು. ರವಿ ಬೆಳೆಗೆರೆ ಫಾರ್ಮ್ಹೌಸ್ಗೆ ಬರುತ್ತಾರೆ ಎಂದರೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಇಲ್ಲಿನ ಕೆಲಸಗಾರರನ್ನ ರವಿ ಅತಿಯಾಗಿ ಪ್ರೀತಿಸುತ್ತಿದ್ದರು. ಯಾರನ್ನೇ ಮಾತನಾಡಿಸುವಾಗಲು ಅವರನ್ನು ಅಮ್ಮ-ತಂಗಿ ಎಂದು ಗೌರವಯುತವಾಗಿ ಸಂಬೋಧಿಸುತ್ತಿದ್ದರು. ಬಂದಾಕ್ಷಣ ಚಿಕನ್ಫ್ರೈ ಮಾಡಮ್ಮ ಎಂದು ಕೇಳುತ್ತಿದ್ದರು. ತಮ್ಮ ಕುಶಲವನ್ನು ಉಪಚರಿಸುತ್ತಿದ್ದರು. ಅವರು ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ಕಣ್ಣೀರಾಕುತ್ತಿದ್ದಾರೆ ಅವರ ಮನೆ ಕೆಲಸದವರು.
ಇದನ್ನು ಓದಿ: ರವಿ ಬೆಳಗೆರೆ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಬಿಎಸ್ ಯಡಿಯೂರಪ್ಪಹಿರಿಯ ಸಾಹಿತಿಯವರ ಮನೆಯನ್ನ ಖರೀದಿ ಮಾಡಿ ಫಾರ್ಮ್ ಹೌಸ್ ಮಾಡಿಕೊಂಡಿದ್ದ ರವಿ ಬೆಳಗೆರೆ
ಬಳ್ಳಾರಿ ,ಬೆಂಗಳೂರಿನೊಂದಿಗೆ ಒಡನಾಟ ಹೊಂದಿದ್ದ ಅವರಿಗೆ ಜೋಯಿಡಾ ಸೆಳೆದಿದ್ದು ಅಪರೂಪ. ಅದರಲ್ಲಿಯೂ ಇಲ್ಲಿ ಫಾರ್ಮ್ಹೌಸ್ ಮಾಡಿದ್ದು, ಅಚ್ಚರಿ ಮೂಡಿಸಿತ್ತು. ಇಲ್ಲಿನ ಪ್ರಕೃತಿಯ ಜೊತೆಗೆ ಸುಂದರ ವಾತಾವರಣ ಹಿಡಿಸಿದ ಅವರು, ಜಗಲಬೇಟದ ಹಿರಿಯ ಸಾಹಿತಿಯೊಬ್ಬರ ಮನೆಯನ್ನು ಖರೀದಿ ಮಾಡಿ ಫಾರ್ಮ್ ಹೌಸ್ ಮಾಡಿಕೊಂಡು ಜೋಯಿಡಾ ಮೇಲಿನ ಪ್ರೀತಿಯನ್ನ ಇನ್ನಷ್ಟು ಗಟ್ಟಿಗೊಳಿಸಿಕೊಂಡರು ಎನ್ನುತ್ತಾರೆ ಇಲ್ಲಿನ ಹಿರಿಯ ಪತ್ರಕರ್ತ ಮತ್ತು ಸ್ಥಳೀಯ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾದರ ಹಿರೇಗುತ್ತಿ.
ಜೋಯಿಡಾ ಬಂದ್ರೆ ಖುಷಿ ಖುಷಿಯಿಂದ ಇರುತ್ತಿದ್ದ ಬೆಳಗೆರೆ