HOME » NEWS » State » KARWAR DEVELOPMENT AUTHORITY NOT DOING ANY LAYOUT SESR DKK

ಕಾರವಾರ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿ ‌ಮೂವತ್ತು ವರ್ಷವಾದರೂ ಅಭಿವೃದ್ದಿ ಮಾತ್ರ ಶೂನ್ಯ

1988ರಲ್ಲಿ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿದ್ದು,ಅಂದಿನಿಂದ ಇಂದಿನವರೆಗೆ ಒಂದೆ ಒಂದುಬಡಾವಣೆ ನಿರ್ಮಾಣ ಮಾಡಿಲ್ಲ.

news18-kannada
Updated:November 10, 2020, 7:41 PM IST
ಕಾರವಾರ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿ ‌ಮೂವತ್ತು ವರ್ಷವಾದರೂ ಅಭಿವೃದ್ದಿ ಮಾತ್ರ ಶೂನ್ಯ
ಅಭಿವೃದ್ಧಿ ಪ್ರಾಧಿಕಾರ
  • Share this:
ಕಾರವಾರ (ನ.10): ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಭಿವೃದ್ದಿ ಪ್ರಾಧಿಕಾರ ಕೇವಲ ಹೆಸರಿಗೆ ಮಾತ್ರವಾಗಿದೆ. ಪ್ರಾಧಿಕಾರ ರಚನೆ ಆಗಿದ್ದಾಗಿಂದ ಇದುವರೆಗೂ ಕಾರವಾರ ಅಭಿವೃದ್ದಿ ಮರಿಚೀಕೆ ಆಗಿದೆ. ಹೊರತು ಅಭಿವೃದಿಯ ಸೆಲೆ ಕಂಡು ಬಂದಿಲ್ಲ. 1988ರಲ್ಲಿ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿದ್ದು,ಅಂದಿನಿಂದ ಇಂದಿನವರೆಗೆ ಒಂದೆ ಒಂದುಬಡಾವಣೆ ನಿರ್ಮಾಣ ಮಾಡಿಲ್ಲ. ಒಂದೇ ಒಂದು ನಿವೇಶನ ಯಾರಿಗೂ ಮಂಜೂರು ಮಾಡಿಲ್ಲ. ಇದಕ್ಕೆ ನಗರದಲ್ಲಿ ನಿವೇಶನಕ್ಕೆ ಜಾಗದ ಕೊರೆತೆ ಕೂಡಾ ಒಂದು ಕಾರಣವಾಗಿದೆ. ಜತೆಗೆ ಯಾವುದೇ  ಅಭಿವೃದ್ದಿ ಕಾರ್ಯಕ್ಕೆ ಕೈ ಹಾಕಿದರೂ ಆರೋಪಿ ಸ್ಥಾನದಲ್ಲಿ ಇಡುವ ಸಿ.ಆರ್.ಜೆಡ್ ನಿಯಮ ಕೂಡಾ ಅಭಿವೃದ್ದಿ ಪ್ರಾಧಿಕಾರಕ್ಕೆ ಭೂತದಂತೆ ಕಾಡಿದೆ. ಈ ಎಲ್ಲ ಹತ್ತಾರು ಕಾರಣದ ಜೊತೆಗೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರೆತಯಿಂದ ಇವತ್ತು ಕಾರವಾರ ಅಭಿವೃದ್ದಿ ಪ್ರಾಧಿಕಾರ ಲೆಕ್ಕಕ್ಕೆ ಉಂಟು ಆಟಕ್ಕಿಲ್ಲವಾದಂತಾಗಿದೆ

ಏನು ಸಮಸ್ಯೆ ಕೆಡಿಎ  ನಿಷ್ಕ್ರಿಯ ಯಾಕೆ?

ಕಾರವಾರ ನಗರ ಭೌಗೋಳಿಕವಾಗಿ ತೀರಾ ಚಿಕ್ಕದ್ದು. ಇಲ್ಲಿ ಜಾಗದ ಕೊರತೆ ಇದೆ. ಇದಕ್ಕೆ ಪರ್ಯಾಯವಾಗಿ ಅಕ್ಕಪಕ್ಕದ ಹೊರವಲಯದಲ್ಲಿ ಕೆಡಿಎ ಲೇ ಔಟ್ ಮಾಡಲು ಪ್ರಯತ್ನಿಸಬಹುದು. ಆದರೆ ಇಲ್ಲಿನ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಾರವಾರ ಅಭಿವೃದ್ದಿ ಬಗ್ಗೆ ಇಚ್ಚಾಶಕ್ತಿ ಕೊರತೆಯಿಂದಾಗಿ ಈ ಪ್ರಯತ್ನಗಳು ಗಂಭೀರವಾಗಿ ಆಗುತ್ತಿಲ್ಲ, ಕಾರವಾರ ನಗರಸಭೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರೆ, ಈ ಎಲ್ಲ ಸಮಸ್ಯೆಗೆ ಒಂದು ಹಂತದಲ್ಲಿ ಮುಕ್ತಿ ಸಿಗೊತ್ತದೆ ಎಂಬ ಅಭಿಪ್ರಾಯ ಇಲ್ಲಿ ಪ್ರಜ್ಞಾವಂತರದ್ದಾಗಿದೆ. ಆದರೆ ಇದು ಸರಕಾರದ ಮಟ್ಟದಲ್ಲಿ ಆಗಬೇಕಿದೆ. ಇಷ್ಟು ಸುಲಭವಾಗಿ ಆಗೋ ಕೆಲಸವಲ್ಲ. ಕಾರವಾರ ತಾಲೂಕಿನ ಸಮೀಪದ ಗ್ರಾಮಗಳನ್ನ ನಗರಸಬೆ ವ್ಯಾಪ್ತಿಗೆ ಒಳಪಡಿಸಿ ಇಲ್ಲಿ ಬಡಾವಣೆ ನಿರ್ಮಾಣ ಮಾಡಿದರೆ ಬಡವರಿಗೆ ಸೂರು ಸಿಗಬಹುದು ಒಂದಿಷ್ಟು ಅಭಿವೃದ್ದಿಯ ಕನಸಿಗೆ ನಿರೇರದಂತಾಗುತ್ತದೆ.

ಕೆಡಿಎ ಜಿಲ್ಲಾಧಿಕಾರಿ ಜವಾಬ್ದಾರಿ

ರಾಜ್ಯ ಸರ್ಕಾರದ ಬದಲಾದ ಬಳಿಕ ಕೆಡಿಎ ಜವಾಬ್ದಾರಿಯನ್ನ ಜಿಲ್ಲಾಧಿಕಾರಿಯ ಹೆಗಲೇರಿದೆ.  ಹೊಸಬರನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿಲ್ಲ, ಪೂರ್ಣ ಪ್ರಮಾಣದ ಆಡಳಿತ ಇಲ್ಲದೆ ಕೆಡಿಎ ಇನ್ನಷ್ಟು ನಿಷ್ಕ್ರಿತೆಯ ಘಟ್ಟ ತಲುಪಿದೆ. ಕಾರವಾರ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವದೆಂದರೆ ಆಕಾಶಕ್ಕೆ ಏಣಿ ಹಾಕಿದಂತೆ, ಕೆಡಿಎ, ಅಥವಾ ಸರಕಾರದ ಕೆಲ ಯೋಜನೆಯಲ್ಲಿ ಮನೆ ಸಿಗಬಹುದೆಂದು  ಕನಸು ಕಾಣುವದರಲ್ಲಿ ಅರ್ಥ ಇಲ್ಲ. ಪ್ರಾಧಿಕಾರ ರಚನೆ ಆಗಿದ್ದಾಗಿನಿಂದ ಇವತ್ತಿನವರೆಗೂ ಒಂದೆ ಒಂದು ಬಡಾವಣೆ ಆಗಲಿ ಅಥವಾ ಬಡವರಿಗೆ ಸೂರು ನೀಡುವ ಕೆಲಸ ಮಾಡಿಲ್ಲ ಅಂದರೆ ಈ ಅಭಿವೃದ್ದಿ ಪ್ರಾಧಿಕಾರ ಯಾಕೆ ಬೇಕು ಮತ್ತು ಈ ಅಭಿವೃದ್ದಿ ಪ್ರಾಧಿಕಾರದಿಂದ ಕಾರವಾರ ಎಷ್ಟು ಅಭಿವೃದಿ ಆಗಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇದನ್ನು ಓದಿ: ಕೊರೋನಾ ಹಿನ್ನಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಜಾತ್ರೆ, ರಥೋತ್ಸವ ರದ್ದು: ಭಕ್ತರ ಪ್ರವೇಶ ನಿಷೇಧ

ಪ್ರವಾಸೋದ್ಯಮದಲ್ಲಿ ಶೂನ್ಯ ಸಾಧನೆಕಾರವಾರ ಅಭಿವರದ್ದಿ ಪ್ರಾಧಿಕಾರ ಕಾರವಾರ ಪ್ರವಾಸೋದ್ಯಮ ಅಭಿವೃದ್ದಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಇಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಅಪಾರ್ಟಮೆಂಟ್ ಗಳಿಗೆ ಮಾತ್ರ ಎಗ್ಗಿಲ್ಲದೆ ಪರವಾನಿಗೆ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಬಡವರಿಗೆ ಸೂರು ನೀಡಲು ಮಾತ್ರ ಕೆಡಿಎ ಇನ್ನು ಉತ್ತಮ ಯೋಜನೆ ರೂಪಿಸಿಲ್ಲ. ಒಟ್ಟಿನಲ್ಲಿ ಕಾರವಾರದಲ್ಲಿ ಅಭಿವೃದ್ದಿ ಪ್ರಾಧಿಕಾರ ಇದ್ದು ಇಲ್ಲದಂತಾಗಿದೆ..
Published by: Seema R
First published: November 10, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading