Karnataka SSLC Result 2020: ಆಗಸ್ಟ್ ಮೊದಲನೇ ವಾರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ: ಸಚಿವ ಸುರೇಶ್‍ಕುಮಾರ್

ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಆಗಸ್ಟ್ ಮೊದಲನೇ ವಾರ ಪ್ರಕಟಿಸಲಾಗುವುದು ಹಾಗೂ ಪಿ.ಯು.ಸಿ ಫಲಿತಾಂಶವನ್ನು ಜುಲೈ ಕೊನೆ ವಾರದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

news18-kannada
Updated:June 30, 2020, 2:10 PM IST
Karnataka SSLC Result 2020: ಆಗಸ್ಟ್ ಮೊದಲನೇ ವಾರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ: ಸಚಿವ ಸುರೇಶ್‍ಕುಮಾರ್
ಸಚಿವ ಸುರೇಶ್​ ಕುಮಾರ್
  • Share this:
ಚಿಕ್ಕಬಳ್ಳಾಪುರ(ಜೂ.30): ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಆಗಸ್ಟ್ ಮೊದಲನೇ ವಾರದಲ್ಲಿ ಪ್ರಕಟಿಸಲಾಗುವುದು ಹಾಗೂ ಎಲ್.ಕೆ.ಜಿ ಮಕ್ಕಳ ಹಿತದೃಷ್ಟಿಯಿಂದ ಆನ್‍ಲೈನ್ ತರಗತಿಗಳನ್ನು ಮಾಡಬಾರದು. ಆ ಮಕ್ಕಳ ಪೋಷಕರಿಂದ ಶಿಕ್ಷಣವನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್‍ಕುಮಾರ್ ಹೇಳಿದ್ದಾರೆ.

ನಗರದ ಬಿ.ಜಿ.ಎಸ್ ಪ್ರೌಢಶಾಲೆ, ನ್ಯೂ ಹೊರೈಜಾನ್ ಪ್ರೌಢಶಾಲೆ, ಬಿ.ಬಿ ರಸ್ತೆಯ ಸರಕಾರಿ ಪ್ರೌಢಶಾಲೆ, ಸಂತ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಗಳಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಎಲ್.ಕೆ.ಜಿ ಮಕ್ಕಳ ಹಿತದೃಷ್ಟಿಯಿಂದ ಅವರಿಗೆ ಆನ್‍ಲೈನ್ ಕ್ಲಾಸ್‍ನ್ನು ಮಾಡಬಾರದು. ಆದರೆ ಆ ಮಕ್ಕಳ ಪೋಷಕರ ಜೊತೆ ಶಾಲಾ ಶಿಕ್ಷಕರು ಸಂಪರ್ಕದಲ್ಲಿದ್ದು, ಅವರಿಂದ ಮಕ್ಕಳಿಗೆ ಶಿಕ್ಷಣ ಒದಗಿಸುವಂತಹ ಕೆಲಸ ಮಾಡಬೇಕಿದೆ ಎಂದರು.

ಮುಂದುವರೆದ ಅವರು, ಕೇಂದ್ರ ಸರ್ಕಾರದಿಂದ 1ನೇ ತರಗತಿಯಿಂದ 6ನೇ ತರಗತಿ ವರೆಗೆ ಹಾಗೂ 7 ರಿಂದ  10ನೇ ತರಗತಿಯವರಿಗೆ ಯಾವ ರೀತಿ ಶಿಕ್ಷಣ ನೀಡಬೇಕೆಂಬ ಹೊಸ ಮಾರ್ಗಸೂಚಿ ಬಂದಿದೆ. ಅದರಂತೆ ರಾಜ್ಯದಲ್ಲಿ ಆ ಮಾರ್ಗ ಸೂಚಿಯಂತೆ ನಡೆಸಲಾಗುತ್ತದೆ. ಇದಕ್ಕೆಂದೇ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದೇವೆ. ಈ ತಜ್ಞರ ಮಾಹಿತಿಯ ಅನುಗುಣವಾಗಿ ಹೊಸ ರೂಪುರೇಷಗಳನ್ನು ತಯಾರಿಸಲಾಗುವುದು ಎಂದು ಹೇಳಿದರು. 

ವಿಜಯಪುರ ಜಿ. ಪಂ. ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಇಬ್ಬರು ಡಿಸಿಎಂ, ಐವರು ಶಾಸಕರ ಜೊತೆಗೂಡಿ ಬಿಜೆಪಿ ಕಾರ್ಯತಂತ್ರ

ಈ ವರ್ಷ ಕೊರೋನಾ ಇರುವುದರಿಂದ ಖಾಸಗಿ ಶಾಲೆಗಳು ಮಾನವೀಯತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಶುಲ್ಕವನ್ನು ಹೆಚ್ಚು ಮಾಡಬಾರದು. ಈ ಸುತ್ತೋಲೆಯ ವಿರುದ್ಧ ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಇದುವರೆಗೂ 1150 ಶಾಲೆಗಳ‌ ವಿರುದ್ದ ದೂರುಗಳು ಕೇಳಿ ಬಂದಿದ್ದು 450 ಶಾಲೆಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಆಗಸ್ಟ್ ಮೊದಲನೇ ವಾರ ಪ್ರಕಟಿಸಲಾಗುವುದು ಹಾಗೂ ಪಿ.ಯು.ಸಿ ಫಲಿತಾಂಶವನ್ನು ಜುಲೈ ಕೊನೆ ವಾರದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಜುಲೈ 5 ರ ನಂತರ ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡಲಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಂತ ಮಕ್ಕಳ ಪೋಷಕರು ಕೋರೊನಾ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಇಡೀ ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ ತದ ನಂತರ ನಿರ್ಧಾರವನ್ನು ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು.
ಡಿಸಿ ಆರ್.ಲತಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
First published: June 30, 2020, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading