ಸೆಪ್ಟೆಂಬರ್ 21ರಿಂದ ಅಧಿವೇಶನ ಆರಂಭ; ಸಂಪುಟ ಸಚಿವರೊಂದಿಗೆ ಇಂದು ಸಭೆ ನಡೆಸಿದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಸಚಿವರ ಜೊತೆಗೆ ಸಂಪುಟ ಸಭೆ ಹೊರತುಪಡಿಸಿ ಔಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಆರಂಭವಾಗಿದ್ದು, ಅಧಿವೇಶನಕ್ಕೆ ಸಜ್ಜಾಗುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗಿದೆ.

news18-kannada
Updated:September 7, 2020, 7:09 PM IST
ಸೆಪ್ಟೆಂಬರ್ 21ರಿಂದ ಅಧಿವೇಶನ ಆರಂಭ; ಸಂಪುಟ ಸಚಿವರೊಂದಿಗೆ ಇಂದು ಸಭೆ ನಡೆಸಿದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು (ಸೆಪ್ಟೆಂಬರ್‌ 07); ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ಜೂನ್‌ ತಿಂಗಳಲ್ಲೇ ನಡೆಯಬೇಕಿದ್ದ ಮಳೆಗಾಲದ ಅಧಿವೇಶನವನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಅಲ್ಲದೆ, ಇದೇ ಸಮಯವನ್ನು ಬಳಸಿಕೊಂಡು ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಯಂತಹ ಪ್ರಮುಖ ಕಾಯ್ದೆಗಳನ್ನು ಚರ್ಚೆಯೇ ಇಲ್ಲದೆ ಸುಗ್ರೀವಾಜ್ಞೆ ಮೂಲಕ ಅಂಗೀಕಾರ ಪಡೆದಿತ್ತು. ಆದರೆ, ಇದೀಗ ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಕೊನೆಗೂ ಸೆಪ್ಟೆಂಬರ್‌ 21ರಿಂದ ಅಧಿವೇಶನವನ್ನು ನಡೆಸಲು ತೀರ್ಮಾನಿಸಿದೆ. ಅಧಿವೇಶನಕ್ಕಾಗಿ ಈಗಾಗಲೇ ಎಲ್ಲಾ ಪಕ್ಷಗಳು ಸಜ್ಜಾಗಿವೆ. ಈ ನಡುವೆ ಅಧಿವೇಶನದ ವೇಳೆ ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿತೋರಿಸಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಜ್ಜಾಗಿದ್ದರೆ, ಅಧಿವೇಶನದಲ್ಲಿ ಇಂತಹ ಸಂದಿಗ್ಧ ಸಂದರ್ಭಗಳಿಂದ ಪಾರಾಗುವುದು ಹೇಗೆ ಎಂಬ ಕುರಿತು ಸಿಎಂ ಯಡಿಯೂರಪ್ಪ ಇಂದು ಕ್ಯಾಬಿನೆಟ್ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಸಚಿವರ ಜೊತೆಗೆ ಸಂಪುಟ ಸಭೆ ಹೊರತುಪಡಿಸಿ ಔಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಆರಂಭವಾಗಿದ್ದು, ಅಧಿವೇಶನಕ್ಕೆ ಸಜ್ಜಾಗುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗಿದೆ.

ಕೆಲ ವಿಧೇಯಕಗಳ ಮಂಡನೆ, ಅಭಿವೃದ್ಧಿ ಕಾರ್ಯಗಳು, ಇಲಾಖೆ ಕಾರ್ಯಗಳು, ಕೊವೀಡ್ ತಡೆಗೆ ಹಾಗೂ ಪ್ರವಾಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಸದನದಲ್ಲಿ ವಿಪಕ್ಷಗಳ ಆರೋಪಕ್ಕೆ ಅಂಕಿ ಅಂಶಗಳ ಮೂಲಕ ಉತ್ತರ ಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನೂತನ ಶಿಕ್ಷಣ ನೀತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಕನಿಷ್ಠವಾಗಿರಬೇಕು; ಪ್ರಧಾನಿ ನರೇಂದ್ರ ಮೋದಿ ಕರೆ

ಇದರ ಜೊತೆಗೆ ಇತ್ತೀಚಿನ ವಿಷಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದ್ದು, ಡ್ರಗ್ಸ್ ದಂಧೆ, ಅದರ ನಿಯಂತ್ರಣ ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದ ಚರ್ಚೆಯ ಜೊತೆಗೆ ಸರ್ಕಾರದ ವೈಫಲ್ಯ ಎನ್ನುತ್ತಿರೋ ಕಾಂಗ್ರೆಸ್ ಗೆ ಸದನದಲ್ಲಿ ತಕ್ಕ ಉತ್ತರ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Published by: MAshok Kumar
First published: September 7, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading