HOME » NEWS » State » KANNADA NEWS BANGALORE IPS OFFICER ADGP SANJAY SAHAY ANNOUNCED VOLUNTARY RETIREMENT SCT

Sanjay Sahay IPS: ಸ್ವಯಂ ನಿವೃತ್ತಿ ಘೋಷಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್

Sanjay Sahay: ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಳೆದ ವರ್ಷ ಮೇ ತಿಂಗಳಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ್ದರು. ಇದೀಗ ಮತ್ತೋರ್ವ ಐಪಿಎಸ್​ ಅಧಿಕಾರಿ ಸಂಜಯ್ ಸಹಾಯ್ ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ.

news18-kannada
Updated:March 11, 2020, 9:15 AM IST
Sanjay Sahay IPS: ಸ್ವಯಂ ನಿವೃತ್ತಿ ಘೋಷಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್
ಐಪಿಎಸ್​ ಅಧಿಕಾರಿ ಸಂಜಯ್ ಸಹಾಯ್
  • Share this:
ಬೆಂಗಳೂರು (ಮಾ. 11): ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆಯಿಂದ ದೂರ ಸರಿದ ಬೆನ್ನಲ್ಲೇ ಕರ್ನಾಟಕದ ಮತ್ತೋರ್ವ ಐಪಿಎಸ್​ ಅಧಿಕಾರಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ.

'ಕರ್ನಾಟಕದ ಸಿಂಗಂ' ಎಂದೇ ಹೆಸರಾಗಿದ್ದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಳೆದ ವರ್ಷ ಮೇ ತಿಂಗಳಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ್ದರು. ಇದೀಗ ಕರ್ನಾಟಕ ರಾಜ್ಯ ಗಣಕ ಪರಿಷತ್ ಎಡಿಜಿಪಿಯಾಗಿರುವ ಸಂಜಯ್ ಸಹಾಯ್ ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅನುಮತಿ‌ ಕೂಡ ನೀಡಿದೆ. ಮಾ. 31ರವರೆಗೆಸಂಜಯ್ ಸಹಾಯ್ ಕರ್ತವ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮತ್ತೆ 5 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​ರಾಜ್ಯ ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಆಗಿರುವ ಸಂಜಯ್ ಸಹಾಯ್ 1989ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಇವರ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಕಲಂ 16(2) DCRB ನಿಯಮದಂತೆ ರಾಜ್ಯ ಸರ್ಕಾರ ಅನುಮತಿ ನೀಡಿ, ಆದೇಶ ಹೊರಡಿಸಿದೆ. ಇವರ ಈ ನಿರ್ಧಾರಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.
First published: March 11, 2020, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories