ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಕಲ್ಲೂರು

ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್‌ಗೆ ಜೆಡಿಎಸ್ ಬೆಂಬಲ ನೀಡಿದೆ‌ ಎಂದವರು ಸ್ಪಷ್ಟಪಡಿಸಿದ್ದಾರೆ. ಶಿವಶಂಕರ್ ಕಲ್ಲೂರ್ ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಇರುವುದಾಗಿ ಹೇಳಿದ್ದಾರೆ.

news18-kannada
Updated:October 24, 2020, 9:14 AM IST
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಕಲ್ಲೂರು
ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಕಲ್ಲೂರ್
  • Share this:
ಹುಬ್ಬಳ್ಳಿ(ಅ.24): ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣದಿಂದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಕಲ್ಲೂರು ಹಿಂದೆ ಸರಿದಿದ್ದಾರೆ ಎಂದು, ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ‌ಅವರು, ಜೆಡಿಎಸ್ ಅಭ್ಯರ್ಥಿಗೆ ಅನಾರೋಗ್ಯದ ಕಾರಣ ನಾಲ್ಕು ಜಿಲ್ಲೆಗಳ ಮತದಾರರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.‌ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಜೆಡಿಎಸ್ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧಾರ ಮಾಡಿದ್ದೇವೆ. ಚುನಾವಣೆ ದಿನಾಂಕ ಪ್ರಕಟವಾದ ಮೇಲೆ ಮತದಾರರನ್ನು ಭೇಟಿ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಅಂತರ ಕಾಪಾಡಿಕೊಳ್ಳಲು ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುತ್ತಿದ್ದೇವೆ. ಇದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್‌ಗೆ ಜೆಡಿಎಸ್ ಬೆಂಬಲ ನೀಡಿದೆ‌ ಎಂದವರು ಸ್ಪಷ್ಟಪಡಿಸಿದ್ದಾರೆ.

ಶಿವಶಂಕರ್ ಕಲ್ಲೂರ್ ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಇರುವುದಾಗಿ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್ ಮಾತನಾಡಿ ಜೆಡಿಎಸ್ ಬೆಂಬಲದೊಂದಿಗೆ ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜು ಆರಂಭಿಸಿದರೆ ತಪ್ಪಿಲ್ಲ ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹೆಚ್ಚುದಿನ ರಜೆ ಕೊಟ್ಟಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧ ಕಡಿತವಾಗುತ್ತೆ ಎಂದಿದ್ದಾರೆ. ಪ್ರಾಥಮಿಕ ಶಾಲೆಗಳನ್ನು ಬಿಟ್ಟು ಕಾಲೇಜು ಆರಂಭಿಸಲಿ. ಕಾಲೇಜುಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಜ್ ಮಾಡಬೇಕು,‌ ಮಾಸ್ಕ್ ಕೊಡಬೇಕು ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗುಡಿಸಲು ತೆರವಿಗೆ ಬಂದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರ ಹಲ್ಲೆ

ಪಠ್ಯಕ್ರಮ ಶೇಕಡಾ 50ನ್ನು ಮೀರಬಾರದು. ಶೂನ್ಯ ವರ್ಷ ಮಾಡುವುದರಿಂದ ಸಮಸ್ಯೆಗಳಾಗುತ್ತೆ. ಸಿಇಟಿ,‌ ನೀಟ್‌ಗೆ ತೊಂದರೆಯಾಗದಂತೆ ಶಿಕ್ಷಣದ ರೂಪುರೇಷೆ ತಯಾರಿಸಬೇಕು. ವಿದ್ಯಾಗಮದಿಂದ 72 ಶಿಕ್ಷಕರು ಸಾವನ್ನಪ್ಪಿದ್ದಾರೆ. ಸರ್ಕಾರದ ತಪ್ಪಿಂದ ಹೀಗಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಬಳಿಕ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯೋತ್ಸವದ ನಿಮಿತ್ತ‌ ಹುಬ್ಬಳ್ಳಿಯಲ್ಲಿ ಚೆನ್ನಮ್ಮನ ಪುತ್ಥಳಿಗೆ ಗಣ್ಯರು‌ ಮಾಲಾರ್ಪಣೆ ‌ಮಾಡಿದ್ರು.‌ ಹರಿಹರ ಪಂಚಮಸಾಲಿಸಾಲಿ ಪೀಠದ ವಚನಾನಂದ ಸ್ವಾಮೀಜಿ ಚೆನ್ನಮ್ಮನಿಗೆ ಪುಷ್ಪನಮನ‌ಸಲ್ಲಿಸಿದ್ರು.‌ ಪಂಚಮಸಾಲಿ ಸಮಾಜದಿಂದ ಬೈಕ್ ರ್ಯಾಲಿ ನಡೆಯಿತು. ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ಮಾಲಾರ್ಪಣೆಗೆ ಮುಗಿಬಿದ್ದಿದ್ದರು.‌ ಯುವಕರು ಮಾಸ್ಕ್ ಧರಿಸದೇ ಗುಂಪುಗೂಡಿದ್ದರು.
ಮಾಜಿ ಸಚಿವ ಬಸವರಾಜ್ ಹೊರಟ್ಟಿ, ಮಾಜಿ‌ಶಾಸಕ‌ಎನ್.ಎಚ್. ಕೋನರೆಡ್ಡಿ, ಶಾಸಕ‌ ಅರುಣಕುಮಾರ್ ಸಮ್ಮುಖದಲ್ಲಿ ಜನಜಂಗುಳಿ ಸೇರಿತ್ತು. ಗದ್ದಲವನ್ನು ನೋಡಿಯೂ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು.
Published by: Latha CG
First published: October 24, 2020, 9:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading