HOME » NEWS » State » IPS OFFICER VARTHIKA KATIYAR FLIES DOWRY HARASSMENTS CASE AGAINST HUSBAND AND HIS FAMILY SESR

ಗಂಡನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ IPS ಅಧಿಕಾರಿ

ವರ್ತಿಕಾ 2009ರ ಐಪಿಎಸ್​ ಬ್ಯಾಚ್ ಅಧಿಕಾರಿಯಾಗಿದ್ದರೆ, ನಿತೀನ್ ಸುಭಾಷ್​ 2011ರ ಬ್ಯಾಚಿನ ಐಎಎಫ್​​ ಅಧಿಕಾರಿಯಾಗಿದ್ದಾರೆ.

news18-kannada
Updated:February 6, 2021, 8:39 PM IST
ಗಂಡನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ IPS ಅಧಿಕಾರಿ
ವರ್ತಿಕಾ ಕಟಿಯಾರ್​
  • Share this:
ಬೆಂಗಳೂರು (ಫೆ. 6): ಐಪಿಎಸ್​ ಅಧಿಕಾರಿಯೊರ್ವರು ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಅಧಿಕಾರಿ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಕೆಎಸ್​ಆರ್​ಪಿಯಲ್ಲಿ ವರ್ತಿಕಾ ಕಟಿಯಾರ್​ ಸೇವೆ ಸಲ್ಲಿಸುತ್ತಿದ್ದಾರೆ. ​ ಪತಿ ನಿತಿನ್​ ಸುಭಾಷ್​ ಮತ್ತು ಆತನ ಕುಟುಂಬಸ್ಥರು ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ತಿಕಾ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರ್ತಿಕಾ ಪತಿ ನಿತಿನ್​ ಕೂಡ ಐಎಫ್​ ಎಸ್​ ಅಧಿಕಾರಿಯಾಗಿದ್ದಾರೆ. ಇನ್ನು ಈ ಪ್ರಕರಣವನ್ನು ಕಬ್ಬನ್​ ಪಾರ್ಕ್​ ಪೊಲೀಸರು ದೆಹಲಿಗೆ ವರ್ಗಾಯಿಸಿದ್ದಾರೆ. 

ವರ್ತಿಕಾ 2009ರ ಐಪಿಎಸ್​ ಬ್ಯಾಚ್ ಅಧಿಕಾರಿಯಾಗಿದ್ದರೆ, ನಿತಿನ್ ಸುಭಾಷ್​ 2011ರ ಬ್ಯಾಚಿನ ಐಎಎಫ್​​ ಅಧಿಕಾರಿಯಾಗಿದ್ದಾರೆ. ಈ ಹಿಂದೆ ವರ್ತಿಕಾ ಕಟಿಯಾರ್​ ಕೊಡಗು ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಬೆಂಗಳೂರಿನ ಕೆಎಸ್​ಆರ್​ಪಿಯಲ್ಲಿ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್​ನಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ.

ದೂರಿನಲ್ಲಿ ಪತಿ ಸೇರಿದಂತೆ ಕುಟುಂಬದ 7 ಜನರ ವಿರುದ್ಧ ವರದಕ್ಷಿಣೆ, ಹಲ್ಲೆ, ಜೀವಬೆದರಿಕೆ ಆರೋದಡಿ ದೂರು ಸಲ್ಲಿಸಿದ್ದಾರೆ.

ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಿರುವ ಇವರು ,ಕೊಲಂಬೋ ಸೇರಿದಂತೆ ಹಲವು ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  2011ರಲ್ಲಿ ಈ ಜೋಡಿ ಮಹಾರಾಷ್ಟ್ರದಲ್ಲಿ  ಮದುವೆಯಾಗಿತ್ತು. ಮದುವೆಯಾದ ಕೆಲ ದಿನಕ್ಕೆ ಇವರ ಮಧ್ಯೆ ವೈಮನಸ್ಯ ಉಂಟಾಗಿತ್ತು ಎನ್ನಲಾಗಿದೆ. ಇದೀಗ ಪತಿ ಹಾಗೂ ಅವರ ಕುಟುಂಬ ಸದಸ್ಯರು ತಮಗೆ ಹಣದ ಬೇಡಿಕೆ ಇಟ್ಟಿದ್ದು, ತಮ್ಮ ವಿರುದ್ಧ ನಿತಿನ್​ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
Published by: Seema R
First published: February 6, 2021, 7:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories