HOME » NEWS » State » HUBLI THERE IS A TERRIFYING JOB OF KEEPING THE REMDESIVIR SAYS PRAHLAD JOSHI

ರೆಮಿಡಿಸಿವರ್​ನಿಂದ ಭಯಂಕರ ಗಾಬರಿ ಹುಟ್ಟಿಸುವ ಕೆಲಸ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ

ಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಬಳಿ ಆ್ಯಂಬುಲೆನ್ಸ್ ಗಳಿಗೆ ಹಸಿರು ನಿಶಾನೆ ತೋರಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಟೆಂಪೋ ಟ್ರ್ಯಾಕ್ಸ್  ಗಳನ್ನೇ ಆ್ಯಂಬುಲೆನ್ಸ್ ಆಗಿ ರೂಪಿಸಲಾಗಿದೆ. ಕೋವಿಡ್ ಸೋಂಕಿತರನ್ನು ಕರೆತರಲೆಂದೇ ರೂಪಿಸಿರೋ ಆ್ಯಂಬುಲೆನ್ಸ್ ಅನ್ನು ಉಭಯ ಸಚಿವರು ಉದ್ಘಾಟಿಸಿದರು.

news18-kannada
Updated:April 24, 2021, 3:36 PM IST
ರೆಮಿಡಿಸಿವರ್​ನಿಂದ ಭಯಂಕರ ಗಾಬರಿ ಹುಟ್ಟಿಸುವ ಕೆಲಸ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
  • Share this:
ಹುಬ್ಬಳ್ಳಿ:  ರೆಮಿಡಿಸಿವರ್ ಇಟ್ಟುಕೊಂಡು ಭಯಂಕರ ಗಾಬರಿ ಹುಟ್ಟಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೊರೋನಾ ಎರಡನೆಯ ಅಲೆ ಗಂಭೀರವಾಗಿದೆ. ಅದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಅನಿರೀಕ್ಷಿತ  ಸರ್ಜ್ ನಿಂದಾಗಿ ಬಹಳಷ್ಟು ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ತೀರಾ ಜಾಸ್ತಿಯಾಗುತ್ತಿದೆ. ಜೊತೆಗೆ ಜನ ಸ್ವಲ್ಪ ಅಗತ್ಯಕ್ಕಿಂತ ಹೆಚ್ಚು ಭಯಗೊಂಡಿದ್ದಾರೆ. ಕೆಲವೆಡೆ ಸ್ವಲ್ಪ ಆಕ್ಸಿಜನ್ ಕೊರತೆ ಉಂಟಾಗಿದೆ. ಅಲಾಟ್ ಮೆಂಟ್ ಕಮಿಟಿಗೆ ಮಾತನಾಡುತ್ತೇನೆ. ಆಕ್ಸಿಜನ್ ಸಿಗಲ್ಲ, ವೆಂಟಿಲೇಟರ್ ಸಿಗೋದಿಲ್ಲ ಅಂತ ಗಾಬರಿಯಾಗೋದು ಬೇಡ. ಹಾಗೆಂದು ನಿರ್ಲಕ್ಷ್ಯ ಮಾಡೋದು ಸರಿಯಲ್ಲ. ಈ ಸಮಯದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯವಿದೆ ಎಂದು ಮನವಿ ಮಾಡಿದರು.

ಧಾರವಾಡ ಜಿಲ್ಲೆಯಲ್ಲಿ ಬೆಡ್,  ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. 80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ಉಚಿತ ವಿತರಣೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳೂ ಸಹ ಕೋವಿಡ್ ಸಂಕಷ್ಟಕ್ಕೆ ಸಹಕರಿಸಬೇಕು. ಕೊರೋನಾ ರೋಗಿಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಜೊತೆ ಮಾತನಾಡೋದಾಗಿ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಚಿಕಿತ್ಸೆಗೆ ನಿರಾಕರಿಸುವವರ ಮೇಲೆ ಕ್ರಮ

ಧಾರವಾಡ ಜಿಲ್ಲೆಯಲ್ಲಿ ಎರಡು ಸಾವಿರ ಬೆಡ್ ಗಳವರೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಮಾಜಿ ಸಿಎಂ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್  ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಕಿಮ್ಸ್ ನಲ್ಲಿ ಸದ್ಯ 500 ಬೆಡ್ ಗಳಿವೆ. ಮುಂದಿನ ದಿನಗಳಲ್ಲಿ ಕಿಮ್ಸ್ ನಲ್ಲಿ ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಲಿದ್ದೇವೆ. ಆಕ್ಸಿಜನ್ ಸಮೇತ ಬೆಡ್ ಗಳ ವ್ಯವಸ್ಥೆ ಮಾಡುತ್ತೇವೆ. ಮೂರು - ನಾಲ್ಕು ಎರಡು ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಿಗೂ ಶೇ. 50 ರಷ್ಟು ಬೆಡ್ ಕೊಡಲೇಬೇಕು. ಜಿಲ್ಲೆಯಲ್ಲಿ ಎಲ್ಲಿಯೂ ಆಕ್ಸಿಜನ್ ಕೊರತೆ ಇಲ್ಲ. ವೆಂಟಿಲೇಟರ್ ಗಳ ಕೊರತೆಯು ಇಲ್ಲ. ಖಾಸಗಿ ಆಸ್ಪತ್ರೆಗಳು ಯಾವುದೇ ಪೇಷಂಟ್ ಗೆ ಕೋವಿಡ್ ಚಿಕಿತ್ಸೆ ನಿರಾಕರಿಸುವಂತಿಲ್ಲ. ಹಾಗೊಂದು ವೇಳೆ ಚಿಕಿತ್ಸೆ ನಿರಾಕರಿಸಿದ್ದು ಕಂಡು ಬಂದಲ್ಲಿ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು. ಕೋವಿಡ್ ನಿಯಂತ್ರಣಕ್ಕೆ ಜನ ಸಹಕರಿಸಬೇಕು. ವೀಕೆಂಡ್ ಕರ್ಫ್ಯೂ ಜಾರಿ ವೇಳೆಯಲ್ಲಿಯೂ ಅನಗತ್ಯ ಅಡ್ಡಾಟ ನಿಲ್ಲಿಸಬೇಕು. ಮನೆಯಲ್ಲಿದ್ದುಕೊಂಡು ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾದಿಂದ ಗುಣಮುಕ್ತರಾದ ಎಚ್.ಡಿ.ಕುಮಾರಸ್ವಾಮಿ; 2 ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ

ಆ್ಯಂಬುಲೆನ್ಸ್ ಗಳಿಗೆ ಚಾಲನೆಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಬಳಿ ಆ್ಯಂಬುಲೆನ್ಸ್ ಗಳಿಗೆ ಹಸಿರು ನಿಶಾನೆ ತೋರಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಟೆಂಪೋ ಟ್ರ್ಯಾಕ್ಸ್  ಗಳನ್ನೇ ಆ್ಯಂಬುಲೆನ್ಸ್ ಆಗಿ ರೂಪಿಸಲಾಗಿದೆ. ಕೋವಿಡ್ ಸೋಂಕಿತರನ್ನು ಕರೆತರಲೆಂದೇ ರೂಪಿಸಿರೋ ಆ್ಯಂಬುಲೆನ್ಸ್ ಅನ್ನು ಉಭಯ ಸಚಿವರು ಉದ್ಘಾಟಿಸಿದರು.
Youtube Video

ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳಿವೆ. ಹೆಚ್ಚುವರಿಯಾಗಿ 10 ಆ್ಯಂಬುಲೆನ್ಸ್ ಗಳನ್ನು ಬಳಸಿಕೊಳ್ಳಲಾಗ್ತಿದೆ. ಹುಬ್ಬಳ್ಳಿಗೆ ಏಳು ಮತ್ತು ಧಾರವಾಡಕ್ಕೆ ಮೂರು ಆ್ಯಂಬುಲೆನ್ಸ್ ಗಳ ಸೇವೆ ಮೀಸಲಿಡಲಾಗಿದೆ. ಕೋವಿಡ್ ನಂತಹ ತುರ್ತು ಸಂದರ್ಭದಲ್ಲಿ ಬಳಕೆಗೆ ಆ್ಯಂಬುಲೆನ್ಸ್  ಸಿದ್ಧಮಾಡಲಾಗಿದೆ ಎಂದು ಈ ವೇಳೆ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by: HR Ramesh
First published: April 24, 2021, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories