ಬ್ಲೂ ಪ್ಲ್ಯಾಗ್ ಮಾನ್ಯತೆ ಪಡೆದ ಹೊನ್ನಾವರದ ಕಾಸರಕೋಡು ಕಡಲ ಕಿನಾರೆ ಹೇಗಿದೆ ಗೊತ್ತಾ!
ಜಿಲ್ಲೆಯ ಕಡಲ ಕಿನಾರೆಗೆ ಈ ಮಾನ್ಯತೆ ಸಿಕ್ಕಿರುವುದು ಹಳಿಯಾಳ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.
news18-kannada Updated:October 13, 2020, 7:22 AM IST

ಕಾಸರಕೋಡು ಕಡಲ ಕಿನಾರೆ
- News18 Kannada
- Last Updated: October 13, 2020, 7:22 AM IST
ಕಾರವಾರ (ಅ.13): ಇಲ್ಲಿನ ಕರಾವಳಿ ಕಡಲ ಕಿನಾರೆ ಎಲ್ಲರ ಪ್ರಮುಖ ಆಕರ್ಷಣೆ. ಇಲ್ಲಿನ ಕಣ್ಮನ ಸೆಳೆಯುವ ಕಡಲ ತೀರ ಸ್ಥಳೀಯರನ್ನು ಮಾತ್ರವಲ್ಲದೇ, ದೇಶ ವಿದೇಶಿಗರ ನೆಚ್ಚಿನ ತಾಣವೂ ಹೌದು. ಈಗ ಇಲ್ಲಿನ ಹೊನ್ನಾವರ ತಾಲೂಕಿನ ಕಾಸರಕೋಡಿ ಕಡಲ ಕಿನಾರೆ ಈಗ ಮತ್ತೊಂದು ಗರಿಮೆ ಮುಡಿಯಲು ಮುಂದಾಗಿದೆ. ಇಲ್ಲಿನ ಕಾಸರಕೋಡಿ ಇಕೋ ಬೀಚ್ ಈಗ ಅಂತರಾಷ್ಟ್ರೀಯ ಬ್ಲ್ಯೂ ಪ್ಲ್ಯಾಗ್ ಮಾನ್ಯತೆ ಪಡೆದಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದ ಸುಂದರ ಇಕೋ ಕಡಲತೀರ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿತ್ತು. ಇದೀಗ ಜಿಲ್ಲಾಡಳಿತ ಪರಿಶ್ರಮದ ಫಲವಾಗಿ ಆ ಕಡಲತೀರಕ್ಕೆ ಅಂತರಾಷ್ಟ್ರೀಯ ಬ್ಲೂಫ್ಲ್ಯಾಗ್ ಮಾನ್ಯತೆ ದೊರಕಿದೆ.
ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಕುಳಿತು ಕೊಳ್ಳಲು ವಿಶೇಷ ಆಸನ, ಮಕ್ಕಳ ಆಟವಾಡಲು ಪಾರ್ಕ್ ಜೊತೆಗೆ ಸದಾ ಸಿದ್ಧವಾಗಿರುವ ಜೀವರಕ್ಷಕ ಸಿಬ್ಬಂದಿ ಇಲ್ಲಿ ಎಲ್ಲರ ಮೆಚ್ಚುಗೆಗಳಿಸಿದೆ. ಅದರಲ್ಲಿಯೂ ಇಲ್ಲಿನ ಸ್ವಚ್ಛತೆ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದೆ. ಇದಕ್ಕಾಗಿಯೇ ಇಲ್ಲಿ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ವಿನೂತನ ಮಾದರಿಯಲ್ಲಿ ನಿಯೋಜಿಸಲಾಗಿದೆ.
5.6 ಕಿಲೋ ಮೀಟರ್ ಉದ್ದವಿರುವ ಈ ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಛದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ನಡೆಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕಡಲತೀರವನ್ನ ಪರಿಸರ ಸ್ನೇಹಿಯಾಗಿ ಸಿದ್ಧಪಡಿಸಲಾಗಿದೆ.

ಇಲ್ಲಿನ ಈ ಸೌಲಭ್ಯವನ್ನು ಕಂಡ ಡೆನ್ಮಾರ್ಕ್ನ ಪರಿಸರ ಶಿಕ್ಷಣ ಪ್ರತಿಷ್ಠಾನ ಕಡಲತೀರವನ್ನ ಪರಿಶೀಲನೆ ನಡೆಸಿ, ಇದೀಗ ಬ್ಲೂಫ್ಲ್ಯಾಗ್ ಪ್ರಮಾಣಪತ್ರವನ್ನ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಗೆ ಈ ಪ್ರಶಸ್ತಿ ಲಭಿಸಿರುವುದರಿಂದ ಹೆಮ್ಮೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನು ದೇಶದ 8 ಬೀಚ್ಗಳಿಗೆ ಬ್ಲೂಫ್ಲ್ಯಾಗ್ ಮಾನ್ಯತೆ ದೊರಕಿದ್ದು ಈ ಪಟ್ಟಿಗೆ ಈಗ ಕಾಸಗಕೋಡಿ ಕಡಲ ಕಿನಾರೆ ಸೇರ್ಪಡೆಯಾಗಿದೆ. ಬ್ಲೂಫ್ಲ್ಯಾಗ್ ಮಾನ್ಯತೆ ಸಿಗಬೇಕಾದರೆ ಕಡಲತೀರದ ನೀರಿನ ಗುಣಮಟ್ಟ, ಬೀಚ್ ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಪ್ರವಾಸಿಗರ ಭದ್ರತೆಯನ್ನೂ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.
ಇನ್ನು ಜಿಲ್ಲೆಯ ಕಡಲ ಕಿನಾರೆಗೆ ಈ ಮಾನ್ಯತೆ ಸಿಕ್ಕಿರುವುದು ಹಳಿಯಾಳ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

I am really delighted to know that Kasarkod beach in Honnavar, Uttara Kannada has received the #Blueflag Certificate.
Matter of pride for Karnataka and India. 👏👏
Hope environmental awareness increases across the country and more beaches in India get certified. https://t.co/87beHyS3Xc
— R V Deshpande (@RV_Deshpande) October 11, 2020
5.6 ಕಿಲೋ ಮೀಟರ್ ಉದ್ದವಿರುವ ಈ ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಛದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ನಡೆಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕಡಲತೀರವನ್ನ ಪರಿಸರ ಸ್ನೇಹಿಯಾಗಿ ಸಿದ್ಧಪಡಿಸಲಾಗಿದೆ.

ಕಾಸರಕೋಡು ಕಡಲ ಕಿನಾರೆ
ಇಲ್ಲಿನ ಈ ಸೌಲಭ್ಯವನ್ನು ಕಂಡ ಡೆನ್ಮಾರ್ಕ್ನ ಪರಿಸರ ಶಿಕ್ಷಣ ಪ್ರತಿಷ್ಠಾನ ಕಡಲತೀರವನ್ನ ಪರಿಶೀಲನೆ ನಡೆಸಿ, ಇದೀಗ ಬ್ಲೂಫ್ಲ್ಯಾಗ್ ಪ್ರಮಾಣಪತ್ರವನ್ನ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಾಸರಕೋಡು ಕಡಲ ಕಿನಾರೆ

ಕಾಸರಕೋಡು ಕಡಲ ಕಿನಾರೆ
ಜಿಲ್ಲೆಗೆ ಈ ಪ್ರಶಸ್ತಿ ಲಭಿಸಿರುವುದರಿಂದ ಹೆಮ್ಮೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನು ದೇಶದ 8 ಬೀಚ್ಗಳಿಗೆ ಬ್ಲೂಫ್ಲ್ಯಾಗ್ ಮಾನ್ಯತೆ ದೊರಕಿದ್ದು ಈ ಪಟ್ಟಿಗೆ ಈಗ ಕಾಸಗಕೋಡಿ ಕಡಲ ಕಿನಾರೆ ಸೇರ್ಪಡೆಯಾಗಿದೆ. ಬ್ಲೂಫ್ಲ್ಯಾಗ್ ಮಾನ್ಯತೆ ಸಿಗಬೇಕಾದರೆ ಕಡಲತೀರದ ನೀರಿನ ಗುಣಮಟ್ಟ, ಬೀಚ್ ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಪ್ರವಾಸಿಗರ ಭದ್ರತೆಯನ್ನೂ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.
Proud moment for India; all 8 beaches recommended by government gets coveted International #Blueflag Certification.@narendramodi pic.twitter.com/j38BTnibl0
— Prakash Javadekar (@PrakashJavdekar) October 11, 2020