ತುಮಕೂರಿನಲ್ಲಿ ಅಡಿಕೆ, ತೆಂಗಿನ ಮರಗಳ ಮಾರಣಹೋಮ; ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ಎತ್ತಂಗಡಿ

ತಹಶೀಲ್ದಾರ್​ ಮಮತಾ ಅವರ ಆದೇಶದ ಮೇರೆಗೆ ನೂರಾರು ಅಡಿಕೆ, ತೆಂಗಿನ ಮರಗಳನ್ನು ಕಡಿದಿದ್ದಾಗಿ ಗ್ರಾಮ ಲೆಕ್ಕಿಗ ಮುರಳಿ ಹೇಳಿಕೆ ನೀಡಿದ್ದರು. ಅಲ್ಲಿನ ಗ್ರಾಮಸ್ಥರು ಮುರಳಿ ಹಾಗೂ ತಹಶೀಲ್ದಾರ್ ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Sushma Chakre | news18-kannada
Updated:March 11, 2020, 2:20 PM IST
ತುಮಕೂರಿನಲ್ಲಿ ಅಡಿಕೆ, ತೆಂಗಿನ ಮರಗಳ ಮಾರಣಹೋಮ; ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ಎತ್ತಂಗಡಿ
ತುಮಕೂರಿನ ಗುಬ್ಬಿಯಲ್ಲಿ ಕಡಿದು ಹಾಕಿದ ತೆಂಗು ಮತ್ತು ಅಡಿಕೆ ಮರಗಳು
  • Share this:
ತುಮಕೂರು (ಮಾ. 11): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವಿವಾದಿತ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ, ತೆಂಗಿನ ಮರಗಳನ್ನು ಕಡಿದು ಹಾಕಿದ್ದ ವಿಚಾರ ಭಾರೀ ಚರ್ಚೆಗೀಡಾಗಿತ್ತು. ಆ ಮರಗಳನ್ನು ಕಡಿಯಲು ಆದೇಶ ನೀಡಿದ್ದ ಗ್ರಾಮ ಲೆಕ್ಕಿಗನನ್ನು ಮಂಗಳವಾರ ಅಮಾನತು ಮಾಡಲಾಗಿದೆ. ಹಾಗೇ, ಗುಬ್ಬಿ ತಾಲೂಕಿನ ತಹಶೀಲ್ದಾರ್​ ಮಮತಾ ಅವರನ್ನು ಬೇರೆಡೆಗೆ ಎತ್ತಗಂಡಿ ಮಾಡಲಾಗಿದೆ.

ಫಸಲು ಕೊಡುತ್ತಿದ್ದ ನೂರಾರು ಅಡಿಗೆ ಮರಗಳು ಹಾಗೂ 50ಕ್ಕೂ ಹೆಚ್ಚು ತೆಂಗಿನ ಮರಗಳನ್ನು 2 ದಿನಗಳ ಹಿಂದೆ ಕಡಿದು ಹಾಕಲಾಗಿತ್ತು.ಇಲ್ಲಿನ 4 ಎಕರೆ ಜಮೀನಿನಲ್ಲಿ ಕೋಡಿ ಕೆಂಪಮ್ಮ ದೇವಸ್ಥಾನದ ಇನಾಮ್ತಿ ಜಮೀನಿನಲ್ಲಿ ಸಿದ್ದಮ್ಮ ಎಂಬ ಮಹಿಳೆ ಬೆಳೆದಿದ್ದ ಅಡಿಕೆ, ತೆಂಗಿನ ಮರಗಳನ್ನು ಜೆಸಿಬಿಯಲ್ಲಿ ನೆಲಸಮಗೊಳಿಸಲಾಗಿತ್ತು. ಈ ಘಟನೆಗೆ 50 ತೆಂಗಿನ ಮರಗಳನ್ನು ನಾಶ ಮಾಡಿರುವ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅಮ್ಮನಘಟ್ಟ ವೃತ್ತದ ಗ್ರಾಮಲೆಕ್ಕಿಗ ಮುರಳಿ ಅವರನ್ನು ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ತುಮಕೂರು ಗ್ರಾಮ ಲೆಕ್ಕಿಗನ ದರ್ಪ; 250 ತೆಂಗಿನ ಮರಗಳ ಮಾರಣಹೋಮ; ರೈತನ ಕಣ್ಣೀರಿಗೆ ಉತ್ತರಿಸುತ್ತಾ ಸರ್ಕಾರ?

ತಹಶೀಲ್ದಾರ್​ ಮಮತಾ ಅವರ ಆದೇಶದ ಮೇರೆಗೆ ಅಡಿಕೆ, ತೆಂಗಿನ ಮರಗಳನ್ನು ಕಡಿದಿದ್ದಾಗಿ ಗ್ರಾಮ ಲೆಕ್ಕಿಗ ಮುರಳಿ ಹೇಳಿಕೆ ನೀಡಿದ್ದರು. ಅಲ್ಲಿನ ಗ್ರಾಮಸ್ಥರು ಮುರಳಿ ಹಾಗೂ ತಹಶೀಲ್ದಾರ್ ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಮತಾ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಅಮ್ಮನಘಟ್ಟ ವೃತ್ತದ ಸರ್ವೇ ನಂಬರ್ 13ರಲ್ಲಿ 5.18 ಗುಂಟೆ ಜಮೀನು ಇತ್ತು. ಇದು ಉಡಸಲಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿತ್ತು. ಉಡಸಲಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಈ ಜಮೀನನ್ನು ಸಿದ್ದಮ್ಮ-ಮುನಿ ಕೆಂಪಯ್ಯರಿಗೆ ದಶಕಗಳ ಹಿಂದೆಯೇ ಉಚಿತವಾಗಿ ನೀಡಲಾಗಿತ್ತು. ಅದರಲ್ಲಿ ಮುನಿ ಕೆಂಪಯ್ಯನವರ ಕುಟುಂಬದವರು ಅಡಿಕೆ, ತೆಂಗಿನ ತೋಟ ಮಾಡಿಕೊಂಡಿದ್ದರು. ಜೊತೆಗೆ ಮುನಿ ಕೆಂಪಯ್ಯ ಈ ಜಮೀನಿನ ಸಂಪೂರ್ಣ ಸ್ವಾಧೀನ ಕೋರಿ ಜಿಲ್ಲಾಧಿಕಾರಿ ಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಹ್ಯಾಂಡ್ ಶೇಕ್ ಬದಲು ನಮಸ್ಕಾರ ಮಾಡಿ; ಕೊರೋನಾ ವೈರಸ್​ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಲಹೆ

ಇಲ್ಲಿನ ಅರ್ಚಕರು ಹಾಗೂ ರೈತ ಮಹಿಳೆ ಸಿದ್ದಮ್ಮ ನಡುವೆ ಜಮೀನು ವಿಚಾರವಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಕಳೆದ ವರ್ಷ ಸೇರಿದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ. ಜಾತ್ರೆಯ ನೆಪದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದ ಅರ್ಚಕರು ಸರ್ಕಾರಿ ಜಮೀನು ದೇವಸ್ಥಾನಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಸಿದ್ದಮ್ಮನ ವಶದಲ್ಲಿರುವ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು. ಈ ಮೂಲಕ ಸುಗಮವಾಗಿ ಜಾತ್ರೆ ನಡೆಯಲು ಅನುವು ಮಾಡಿಕೊಡಬೇಕು ಮನವಿ ಮಾಡಿದ್ದರು.ಆ ಮನವಿಗೆ ಸ್ಪಂದಿಸಿದ್ದ ತುಮಕೂರು ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸುಗಮವಾಗಿ ಜಾತ್ರೆ ಮಾಡಲು ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರ್​ಗೆ ಆದೇಶ ನೀಡಿದ್ದರು. ಆ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಈ ಅಧಿಕಾರಿಗಳು ಫಸಲಿಗೆ ಬಂದಿದ್ದ ಮರಗಳನ್ನು ಕಡಿದು ಹಾಕಿದ್ದರು. ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆಗೆ ಗ್ರಾಮಸ್ಥರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
First published: March 11, 2020, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading