HOME » NEWS » State » GRASIM SODA COMPANY IN KARWAR FACES ANGUISH FROM LOCALS DKK SNVS

ಕಾರವಾರದ ಗ್ರಾಸಿಂ ಕಾಸ್ಟಿಕ್ ಸೋಡಾ ಕಂಪನಿಯಿಂದ ವಿಷಪೂರಿತ ತ್ಯಾಜ್ಯ; ಸ್ಥಳೀಯರ ಆಕ್ರೋಶ

ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗ್ರಾಸಿಂ ಕಾಸ್ಟಿಕ್ ಸೋಡಾ ಕಂಪನಿ ಹೊರಬಿಡುವ ರಾಸಾಯನಿಕ ತ್ಯಾಜ್ಯ ಸ್ಥಳೀಯ ಜನವಸತಿ ಪ್ರದೇಶ ಸೇರುತ್ತಿದೆ. ಇಲ್ಲಿಯ ಪರಿಸರ ಮತ್ತು ನೀರನ್ನು ಇದು ಕಲುಷಿತಗೊಳಿಸುತ್ತಿದೆ.

news18-kannada
Updated:October 22, 2020, 7:17 AM IST
ಕಾರವಾರದ ಗ್ರಾಸಿಂ ಕಾಸ್ಟಿಕ್ ಸೋಡಾ ಕಂಪನಿಯಿಂದ ವಿಷಪೂರಿತ ತ್ಯಾಜ್ಯ; ಸ್ಥಳೀಯರ ಆಕ್ರೋಶ
ಕಾರವಾರದಲ್ಲಿ ಗ್ರಾಸಿಮ್ ಕಾರ್ಖಾನೆಯಿಂದ ಹೊರಬರುವ ರಾಸಾಯನಿಕ ತ್ಯಾಜ್ಯ ಹಳ್ಳದ ನೀರನ್ನು ಸೇರುತ್ತಿರುವುದು
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ಇರುವ ಗ್ರಾಸಿಂ ಕಾಸ್ಟಿಕ್ ಸೋಡಾ ಕಂಪನಿಯಿಂದ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹತ್ತಿರದಲ್ಲಿ ಹರಿಯುತ್ತಿರುವ ಹಳ್ಳದ ನೀರಿಗೆ ಸೇರಿಕೊಂಡು ಅಕ್ಕಪಕ್ಕದ ಭತ್ತದ ಬೆಳೆ ನಾಶವಾಗುತ್ತಿದೆ. ಜತೆಗೆ ಗಬ್ಬು ವಾಸನೆಯಿಂದ ಇಲ್ಲಿನ ಜನ ಜೀವನ ಮಾಡೋದೆ ಕಷ್ಟದಾಯಕವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬಿಣಗಾದಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿ-66 ಕ್ಕೆ ಹೊಂದಿಕೊಂಡು ಇರುವ ಗ್ರಾಸಿಂ ಕಾಸ್ಟಿಕ್ ಸೋಡಾ ಕಂಪನಿಯವರು ರಾಸಾಯನಿಕ ತ್ಯಾಜ್ಯವನ್ನ ಜನವಸತಿ ಪ್ರದೇಶದಲ್ಲೆ ಬಿಡುತ್ತಿದ್ದಾರೆ. ರಾಜಾರೋಷವಾಗಿ ಇಂತಹ ಕೃತ್ಯಮಾಡುತ್ತಿದ್ದರೂ ಸಂಬಂಧಿಸಿದವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಕಂಪನಿಯಿಂದ ಬರುವ ರಾಸಾಯಾನಿಕ ತ್ಯಾಜ್ಯ ನೇರವಾಗಿ ಹತ್ತಿರದಲ್ಲಿ ಹರಿಯುವ ಹಳ್ಳದ ನೀರಿಗೆ ಸೇರಿಕೊಂಡು ಹಳ್ಳದ ನೀರು ಉಪಯೋಗಕ್ಕೆ ಬಾರದಾಗಿದೆ. ಹಳ್ಳದ ನೀರು ಕೊಳಕು ಬಣ್ಣಕ್ಕೆ ತಿರುಗಿದೆ. ಇದೇ ಹಳ್ಳದ ನೀರನ್ನ ಇಲ್ಲಿನ ರೈತರು ಭತ್ತದ ಕೃಷಿಗೆ ಉಪಯೋಗ ಮಾಡುತ್ತಾರೆ.

ಆದರೆ, ಹೀಗೆ ವಿಷಪೂರಿತ ರಾಸಾಯನಿಕ ತ್ಯಾಜ್ಯ ನೀರನ್ನ ಸೇರಿ ನೀರು ಉಪಯೋಗಕ್ಕೆ ಬಾರದಾಗಿದ್ದು ಭತ್ತದ ಬೆಳೆ ನಾಶವಾಗುತ್ತಿದೆ. ಇದು ನೇರವಾಗಿ ಸಮುದ್ರ ಸೇರುತ್ತಿದ್ದು ಜಲಚರಗಳಿಗೂ ಸಂಕಟ ತಂದಿದೆ. ಈ ಭಾಗದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ವಾತಾವರಣ ಸುತ್ತಮುತ್ತ ಗಬ್ಬು ವಾಸನೆ ನಾರುತ್ತಿದೆ. ವಿಷಪೂರಿತ ರಾಸಾಯನಿಕ ತ್ಯಾಜ್ಯದಿಂದ ಇಲ್ಲಿನ ಜನ ಆತಂಕಿತರಾಗಿದ್ದಾರೆ.

ಇದನ್ನೂ ಓದಿ: ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು

ಈ ಕಂಪನಿಯ ಮುಂದುವರೆದ ನಿರ್ಲಕ್ಷ್ಯದ ವಿರುದ್ದ ಸ್ಥಳೀಯರು ಆಕ್ರೋಷಿತರಾಗಿದ್ದಾರೆ. ಹತ್ತಾರು ಬಾರಿ ಕಂಪನಿಯವರಿಗೆ ಸಮಸ್ಯೆ ತಿಳಿ ಹೇಳಿದರೂ ಬಡವರ ಮೇಲೆ ಗದಾಪ್ರಹಾರ ಮಾಡುತ್ತಲೇ ಇದೆ. ಗ್ರಾಸಿಂ ಕಂಪನಿಯ ಆಡಳಿತ ಮಂಡಳಿ ಕೂಡಲೆ ತ್ಯಾಜ್ಯವನ್ನ ಬಿಡುವದನ್ನ ನಿಲ್ಲಿಸಬೇಕೆಂದು ಆಗ್ರಹಿಸಿರುವ ಸ್ಥಳೀಯರು, ಮತ್ತೆ ಮುಂದುವರೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಒಂದೆರಡು ವರ್ಷದಿಂದ ಉಲ್ಭಣಿಸಿದ ಸಮಸ್ಯೆ:

ಈ ಹಿಂದೆ ಕಂಪನಿಯ ಸುತ್ತಮುತ್ತಲಿರುವ ಜನವಸತಿ ಪ್ರದೇಶದ ಜನರು ಯಾವುದೇ ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಕಳೆದ ಒಂದೆರಡು ವರ್ಷದಿಂದ ಗ್ರಾಸಿಂ ಕಂಪನಿಯ ನಿರ್ಲಕ್ಷ್ಯ ಜೋರಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ, ಜನವಸತಿ ಪ್ರದೇಶದಲ್ಲಿಯೇ ವಿಷಪೂರಿತ ರಾಸಾಯನಿಕ ತ್ಯಾಜ್ಯವನ್ನ ಬಿಡುವುದ್ರಿಂದ ಅಕ್ಕಪಕ್ಕದ ವಾತಾವರಣ ಕೆಡುತ್ತಿದೆ. ಹೀಗೆ ನಿರಂತರವಾಗಿ ಕಂಪನಿಯವರು ಇಂತಹ ಕೃತ್ಯ ಎಸಗುತ್ತಿದ್ದರೂ ಕ್ರಮ ಮಾತ್ರವಾಗಿಲ್ಲ. ಈ ಹಿಂದೆ ನೇರವಾಗಿ ರಸ್ತೆಗೆ ರಾಸಾಯನಿಕ ತ್ಯಾಜ್ಯವನ್ನ ಹರಿ ಬಿಟ್ಟಿದ್ದರು. ಇದ್ರಿಂದ ಇಲ್ಲಿನ ಜನ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಕಂಪನಿ ವಿರುದ್ದ ಪ್ರತಿಬಟನೆ ಕೂಡಾ ನಡೆದಿತ್ತು. ತದನಂತರ ವಿವಾದ ಕೊಂಚ ತಣ್ಣಗಾಗಿತ್ತು. ಆದ್ರೆ ಈಗ ಮತ್ತೆ ರಾಸಾಯನಿಕ ತ್ಯಾಜ್ಯವನ್ನ ಹೊರ ಬಿಡಲಾಗುತ್ತಿದೆ. ಇದು ಬಡ ರೈತರ ಮೇಲೆ ಅಗಾಧ ಪರಿಣಾಮ ಬೀರುತ್ತಿದ್ದು ಈ ರಸ್ತೆಯಿಂದ ಜನ ಓಡಾಡದ ಹಾಗೆ ಆಗಿದೆ.

ಇದನ್ನೂ ಓದಿ: ಗಂಡ, ಅತ್ತೆ ಮತ್ತು ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗೃಹಿಣಿ; ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆಒಗ್ಗಟಿಲ್ಲದ ಸ್ಥಳೀಯರು:

ಈ ಸಮಸ್ಯೆಗೆ ಪೂರ್ಣ ವಿರಾಮ ಹಾಕಬಹುದಾಗಿತ್ತು. ಆದ್ರೆ ಇಲ್ಲಿ ಎರಡು ಗುಂಪುಗಳು ಕಾರ್ಯ ಮಾಡುತ್ತಿವೆ. ಒಂದು ಗ್ರಾಸಿಂ ಪರವಾದ ಗುಂಪು, ಇನ್ನೊಂದು ಗ್ರಾಸಿಂ ವಿರೋಧದ ಗುಂಪು. ಈ ಎರಡು ಗುಂಪಿನಲ್ಲಿ ಒಗ್ಗಟಿಲ್ಲದ ಪರಿಣಾಮ ಇಲ್ಲಿನ ಬಡ ರೈತರು ಬಲಿಪಶುವಾಗುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಇಲ್ಲಿನ ಕೆಲ ಪ್ರಭಾವಿಗಳೂ ಕೂಡ ಗ್ರಾಸಿಂ ಕಂಪನಿಯಿಂದ ವಿವಿಧ ಕಾಗಾರಿಯ ಗುತ್ತಿಗೆ ಪಡೆದು ಕಂಪನಿಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕಾಲ ಬುಡದಲ್ಲೇ ಇಂತಹ ಕೃತ್ಯ ನಡೆಯುತ್ತಿದ್ದರೂ ಇಲ್ಲಿನ ಪ್ರಭಾವಿಗಳು ಕಣ್ಣುಕಿವಿ ಮುಚ್ಚಿಕೊಂಡಿದ್ದಾರೆ ಎಂಬ ದೂರು ಇಲ್ಲಿ ನೋವು ಅನುಭವಿಸುವವರದ್ದಾಗಿದೆ. ಎರಡು ಗುಂಪುಗಳ ಜಟಾಪಟಿಯಲ್ಲಿ ಕಂಪನಿಯವರು ರಾಜಾರೋಷವಾಗಿ ರಾಸಾಯನಿಕ ತ್ಯಾಜ್ಯ ಹೊರಬಿಟ್ಟು ಬಡವರಿಗೆ ಸಮಸ್ಯೆ ತಂದಿಡುತ್ತಿದ್ದಾರೆ.

ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: October 22, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading