HOME » NEWS » State » FROM THIS YEAR PRE NURSERY EDUCATION WILL BE STARTS IN GOVERNMENT SCHOOLS

ಪಾಲಕರಿಗೆ ತಪ್ಪಲಿದೆ ಡೊನೇಷನ್​ ಹೊರೆ; ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಪ್ರೀ ನರ್ಸರಿ

2019-20ನೇ ಶೈಕ್ಷಣಿಕ ವರ್ಷದಿಂದ 276 ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆಜಿ -ಯುಕೆಜಿ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Latha CG | news18
Updated:May 18, 2019, 8:12 PM IST
ಪಾಲಕರಿಗೆ ತಪ್ಪಲಿದೆ ಡೊನೇಷನ್​ ಹೊರೆ; ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಪ್ರೀ ನರ್ಸರಿ
ಪ್ರಾತಿನಿಧಿಕ ಚಿತ್ರ
  • News18
  • Last Updated: May 18, 2019, 8:12 PM IST
  • Share this:
ಬೆಂಗಳೂರು,(ಮೇ 18): ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್​  ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳಿಗೆ ಅನಿವಾರ್ಯವಾಗಿ ಲಕ್ಷಗಟ್ಟಲೇ ಡೊನೇಷನ್​ ಕಟ್ಟುತ್ತಿದ್ದ ರಾಜ್ಯದ ಪೋಷಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಪ್ರೀ ನರ್ಸರಿ (ಎಲ್​ಕೆಜಿ, ಯುಕೆಜಿ) ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪೋಷಕರು ತಮ್ಮ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದರು. ಇದರಿಂದಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿಯುತಿತ್ತು. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಪ್ರೀ ನರ್ಸರಿ ಆರಂಭಿಸುವ ಮಹತ್ವದ ನಿರ್ಧಾರ ಮಾಡಿದೆ. ಆಯ್ದ 4100 ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ 4100 ಅಂಗನವಾಡಿ‌ ಕೇಂದ್ರಗಳನ್ನು ಬಾಲಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧನೆ ಮಾಡಲಾಗುತ್ತದೆ. ಈ ಬಾಲಸ್ನೇಹಿ ಕೇಂದ್ರಗಳಲ್ಲಿ LKG /UKG ಶಿಕ್ಷಣ ನೀಡಲು ತೀರ್ಮಾನ ಮಾಡಲಾಗಿದೆ.



new doc 2019-05-17 14.14.24


new doc 2019-05-17 14.14.24


2019-20ನೇ ಶೈಕ್ಷಣಿಕ ವರ್ಷದಿಂದ 276 ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆಜಿ -ಯುಕೆಜಿ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರವು 2017-18ರಲ್ಲಿ 176 ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಿತ್ತು. 2018-19ರಲ್ಲಿ 100 ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು. ಈಗ 276 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮೊದಲ ಹಂತದ ಪ್ರೀ ನರ್ಸರಿ ಸ್ಕೂಲ್ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: ಬಯಲಾಯ್ತು ಗೋಲ್​ಮಾಲ್​; ಖಾಸಗಿ ಅನುದಾನಿತ ಕಾಲೇಜುಗಳಿಂದ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಲು ಬೇಕಾದ ಮಾನದಂಡ ಮತ್ತು ಷರತ್ತುಗಳು

  • ಪ್ರತಿ ತರಗತಿಗೆ 20-30ಮಕ್ಕಳನ್ನು ದಾಖಲಿಸತಕ್ಕದ್ದು

  • ಯುನಿಸೆಫ್, ಅಜೀಂ ಪ್ರೇಮ್ ಜಿ ವಿವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ನಿಯೋಜಿಸಿರುವ ಸಮಿತಿಯ ಶಿಫಾರಿಸ್ಸಿನಂತೆ ಪಠ್ಯಕ್ರಮ

  • ತರಗತಿಗೆ ಕನಿಷ್ಠ 3.5ವರ್ಷ ಮೇಲ್ಪಟ್ಟ ಮಕ್ಕಳ ದಾಖಲಾತಿಗೆ ಅವಕಾಶ

  • ತರಗತಿಯನ್ನು ಬೆಳಿಗೆ 10 ರಿಂದ ಸಂಜೆ 3.30ರ ತನಕ ನಡೆಸಬೇಕು

  • ತರಗತಿಗೆ ಶಿಕ್ಷಕರನ್ನು ತಾತ್ಕಾಲಿಕವಾಗಿ 10ತಿಂಗಳ ಕಾಲಕ್ಕೆ ಎಸ್ ಡಿಎಂಸಿ ನೇಮಕ ಮಾಡಲಾಗುತ್ತದೆ

  • ಪ್ರತಿ ಒಂದು ತರಗತಿಗೆ ಓರ್ವ ಶಿಕ್ಷಕ ಮತ್ತು ಒಬ್ಬ ಆಯಾ ನೇಮಕ ಮಾಡಬೇಕು

  • ಅಂಗನವಾಡಿಯಲ್ಲಿ‌ ನೀಡುವ ರೀತಿ ಹಾಲು, ಉಪಹಾರ, ಊಟ ನೀಡಬೇಕು


ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

First published: May 18, 2019, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories