ಡಾ. ಸುಧಾಕರ್ ಹೊಟ್ಟೆಗೆ ಏನು ತಿಂತಾರೆ?; ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೆಂಡಾಮಂಡಲ

ನನ್ನ ವಿರುದ್ಧ ಮಾಡಿರುವ ಆರೋಪವನ್ನು ವಿಚಾರಣೆ ನಡೆಸಲಿ, ಬೇಕಿದ್ರೆ ಈಗಲೇ ಹೋಗಿ ಕೋಲಾರ ಜೈಲಿನಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ  ಆರೋಪಕ್ಕೆ ಪ್ರತ್ಯಾರೋಪ ಮಾಡೋದು ಸಾರ್ವಜನಿಕ ಜೀವನದಲ್ಲಿ ಉತ್ತಮ ಆಗಲ್ಲ ಎಂದು ಕಿಡಿಕಾರಿದರು.

news18-kannada
Updated:August 3, 2020, 9:42 PM IST
ಡಾ. ಸುಧಾಕರ್ ಹೊಟ್ಟೆಗೆ ಏನು ತಿಂತಾರೆ?; ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೆಂಡಾಮಂಡಲ
ಸುದ್ದಿಗೋಷ್ಟಿಯಲ್ಲಿ ರಮೇಶ್ ಕುಮಾರ್
  • Share this:
ಕೋಲಾರ(ಆ.03): ಕಾಂಗ್ರೆಸ್​ ಮುಖಂಡರು ರಾಜ್ಯಾದ್ಯಂತ ಸ್ಪೀಕ್ ಅಪ್ ಕರ್ನಾಟಕದ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇಂದು ಕೋಲಾರದಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಹೊರಿಸಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕರಾದ ಎಸ್‍.ಎನ್ ನಾರಾಯಣಸ್ವಾಮಿ, ನಂಜೇಗೌಡ, ರಘು ಆಚಾರ್, ರೂಪಕಲಾ, ನಸೀರ್ ಅಹಮದ್, ವಿ.ಆರ್. ಸುದರ್ಶನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು. ವಿಪಕ್ಷಗಳು ಕೋವಿಡ್ ಅವ್ಯವಹಾರ ಕುರಿತು ಸರ್ಕಾರದ ಮೇಲೆ ಹೊರಿಸಿರುವ ಆರೋಪಕ್ಕೆ, ಸಚಿವ ಡಾ  ಸುಧಾಕರ್ ಬೆಂಗಳೂರಿನಲ್ಲಿ ಉತ್ತರ ನೀಡುವಾಗ, ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿ ಹಗರಣ ನಡೆದಿದೆ ಎಂಬ ಹೇಳಿಕೆ ನೀಡಿದ್ದರು.

ಈ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ದ ರಮೇಶ್ ಕುಮಾರ್ ಕೆಂಡಾಮಂಡಲರಾಗಿ ವಾಗ್ದಾಳಿ ನಡೆಸಿದ್ದಾರೆ. ಲೂಟಿ ಮಾಡುವಾಗ ನನಗೆ ಆತನ ಹೆಸರು ನೆನಪಾಗಿಲ್ಲ. ಇಲ್ಲ ಅಂದಿದ್ದರೆ ಅವರಿಗೂ ಶೇರ್ ಕೊಡುತ್ತಿದ್ದೆ. ಅವರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಗೊತ್ತಿಲ್ಲ. ಪಿಎಂ ಕೇರ್ ಫಂಡ್ ನಿಂದ 4 ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿ‌ ಎಲ್ಲಾ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಹಾಗಾದರೆ ಭಾರತ ಸರ್ಕಾರ ಕಳಪೆ ಗುಣಮಟ್ಟದ್ದು ಕಳುಹಿಸಿದ್ದಾರಾ? ಅಥವಾ ಇವರು ಲೂಟಿ ಹೊಡೆದಿದ್ದಾರಾ ಎಂದು ತಿಳಿಯಬೇಕಿದೆ ಎಂದು ಆಗ್ರಹಿಸಿದರು.

CoronaVirus: ದೆಹಲಿಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ; ಸೋಮವಾರವೂ 805 ಪ್ರಕರಣಗಳು ಪತ್ತೆ 17 ಮಂದಿ ಸಾವು!

ನನ್ನ ವಿರುದ್ಧ ಮಾಡಿರುವ ಆರೋಪವನ್ನು ವಿಚಾರಣೆ ನಡೆಸಲಿ, ಬೇಕಿದ್ರೆ ಈಗಲೇ ಹೋಗಿ ಕೋಲಾರ ಜೈಲಿನಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ  ಆರೋಪಕ್ಕೆ ಪ್ರತ್ಯಾರೋಪ ಮಾಡೋದು ಸಾರ್ವಜನಿಕ ಜೀವನದಲ್ಲಿ ಉತ್ತಮ ಆಗಲ್ಲ ಎಂದು ಕಿಡಿಕಾರಿದರು. ಇನ್ನು ನೀವು ಭಾರತ ಮಾತಾ ಕೀ ಸೆರಗಿನಲ್ಲಿ ಇದ್ದು, ಆಕೆಯ ಮಾನ ಕಾಪಾಡುವ ಅವತಾರ ಪುರುಷರಲ್ವ ? ನಾವು ಹುಟ್ಟಿದ್ದೆ ಹೊಲಸಲ್ಲಿ, ನಾವು ಏನು ಮಾಡಿಲ್ಲ ಈ ದೇಶಕ್ಕೆ. ಆದರೆ ಋಷಿ ಮುನಿಗಳಿಂದ ಜನ್ಮ ಪಡೆದು ಕಷ್ಟದ ಕಾಲದಲ್ಲಿ ಜನರ ಕಷ್ಟವನ್ನು ಆಲಿಸದೆ ನೀವೆಲ್ಲಪ್ಪ ಹೋಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ವೇಳೆಯಲ್ಲಿ ಅವ್ಯವಹಾರ, ನೀಚ ಹಾಗೂ ಹೇಯ ಕೃತ್ಯ: ಪರಮೇಶ್ವರ್ ಕಿಡಿ

ಇನ್ನು ಸ್ಪೀಕ್ ಅಪ್ ಕರ್ನಾಟಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಪರಮೇಶ್ವರ್ ಅವರು, ಸರ್ಕಾರ ಕೋವಿಡ್ ಸಲಕರಣೆ ಖರೀದಿಯಲ್ಲಿ 2 ಸಾವಿರ ಕೋಟಿ ಹಣ ಹೊಡೆದಿದೆ ಎಂಬುದು ನಮ್ಮ ಆರೋಪ. ಈ ವಿಚಾರದಲ್ಲಿ ಗೃಹಸಚಿವರು ಕೂಡ ಸುಳ್ಳು ಹೇಳಿತ್ತಿದ್ದಾರೆ, ಖರ್ಚಾಗಿರೋದೆ ಕೇವಲ 2 ಸಾವಿರ ಎಂದು ಸುಳ್ಳು ಹೇಳುತ್ತಾರೆ. ಆದರೆ ಕೋವಿಡ್ ನಿಯಂತ್ರಣದಲ್ಲಿ ಆಡಳಿತ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬಿಜೆಪಿ ಆಡಳಿತ ಮತ್ತು ಭೃಷ್ಟಾಚಾರ ರಾಜ್ಯದ ಜನರಿಗೆ ಗೊತ್ತಾಗಬೇಕಿದೆ ಎಂದರು.

ಇನ್ನು ವಿಪಕ್ಷ ನಾಯಕರು ಲೆಕ್ಕ ಕೇಳಿದರೆ ಪರಿಗಣಿಸಿಲ್ಲ, ಲೂಟಿ ಮಾಡಿದ ಹಣ ಸಚಿವರುಗಳ ಜೇಬು ಸೇರಿದೆ. ನಿಮಗೆ ಮಾನವೀಯತೆ, ಮನುಷ್ಯತ್ವ ಇಲ್ಲದ‌ ಸರ್ಕಾರವಿದು, ಇದಕ್ಕಿಂತ ನೀಚ, ಹೇಯ ಕೃತ್ಯ ಇನ್ನೊಂದಿಲ್ಲ. ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ, ಆಗಿದೆ ಸತ್ಯಾಸತ್ಯತೆ ಪರಾಮರ್ಶೆ ಆಗಲೇಬೇಕು. ಹಾಲಿ ನ್ಯಾಯಾಧೀಶರು ತನಿಖೆ ನಡೆಸಬೇಕು. ನಮ್ಮ ಕಾಲದಲ್ಲಿ ಆಗಿರುವ ಭೃಷ್ಟಾಚಾರದ ಬಗ್ಗೆಯೂ ಲೆಕ್ಕಪರಿಶೀಲನೆ ತನಿಖೆ‌ ಆಗಲಿ ಎಂದು ಆಗ್ರಹಿಸಿದರು.
Published by: Latha CG
First published: August 3, 2020, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading