ನಮ್ಮ ಜೀವಕ್ಕೆ ಏನಾದ್ರೂ ಆದ್ರೆ ಡಿಸಿಎಂ ಕಾರಜೋಳ, ಶಾಸಕ ದೊಡ್ಡನಗೌಡ ಪಾಟೀಲ್ ಕಾರಣ; ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್

ಇದೇ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ದೌರ್ಜನ್ಯ ಖಂಡಿಸ್ತೇವೆ. ನಾನು ಮತ್ತೆ ಚುನಾವಣೆಯಲ್ಲಿ ಗೆಲ್ತೇನೆ ಎನ್ನುವ ಹೊಟ್ಟೆಕಿಚ್ಚಿನಿಂದ ಪೊಲೀಸರ ಮೂಲಕ ಶಾಸಕ ಹಾಗೂ ಡಿಸಿಎಂ ನಮ್ಮ ಮೇಲೆ ಗೂಂಡಾಗಿರಿ ಮಾಡ್ತಿದಾರೆ ಎಂದು ವಿಜಯಾನಂದ ಕಾಶಪ್ಪನವರ್ ಗಂಭೀರ ಆರೋಪ ಮಾಡಿದರು.

news18-kannada
Updated:October 30, 2020, 8:37 AM IST
ನಮ್ಮ ಜೀವಕ್ಕೆ ಏನಾದ್ರೂ ಆದ್ರೆ ಡಿಸಿಎಂ ಕಾರಜೋಳ, ಶಾಸಕ ದೊಡ್ಡನಗೌಡ ಪಾಟೀಲ್ ಕಾರಣ; ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್
  • Share this:
ಬಾಗಲಕೋಟೆ(ಅ.30): ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪೊಲೀಸರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.  ಪೊಲೀಸರು ಬಿಜೆಪಿಯವರ ಚೇಲಾ, ನಾಯಿಯಾಗಿದ್ದಾರೆ. ಪೊಲೀಸರಂತೂ ನಾಯಿಗಿಂತ ಕಡೆಯಾಗಿದ್ದಾರೆ ಎಂದು ಕಾಶಪ್ಪನವರ್ ಪೊಲೀಸರ ಬಗ್ಗೆ ತುಚ್ಛ ಪದ ಬಳಸಿದ್ದಾರೆ. ಜೊತೆಗೆ ನಾನು ಇದೇ ಶಬ್ದ ಬಳಸುತ್ತೇನೆ ಎಂದು ಖಾರವಾಗಿ ನುಡಿದಿದ್ದಾರೆ.  ಹುನಗುಂದ ತಾಲೂಕಿನ ಪಿಕೆಪಿಎಸ್ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭೀತಿಯಿಂದ ಅಧಿಕಾರಿಗಳು ಹಾಗೂ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಜಯಾನಂದ ಕಾಶಪಪ್ಪನವರ್ ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ಧ ಕಾಶಪ್ಪನವರ್ ಗಂಭೀರ ಆರೋಪ ಮಾಡಿದ್ದಾರೆ. ಹುನಗುಂದ, ಇಳಕಲ್ ಪಿಕೆಪಿಎಸ್ ನಿರ್ದೇಶಕರಿಗೆ ಜೀವ ಭಯವಿದೆ. ಬಿಜೆಪಿಯವರು ಪೊಲೀಸ್ ಹಾಗೂ ಅಧಿಕಾರಿಗಳಿಂದ ದೌರ್ಜನ್ಯ ಮಾಡಿಸ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದ ಅವರು, ನಮಗೆ ಜೀವ ಭಯವಿದೆ, ಇದಕ್ಕೆ ಗೋವಿಂದ ಕಾರಜೋಳ, ದೊಡ್ಡನಗೌಡ ಪಾಟೀಲ್ ಕಾರಣ. ನಮ್ಮ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಡಿಸಿಎಂ ಕಾರಜೋಳ,ಶಾಸಕ ದೊಡ್ಡನಗೌಡ ಪಾಟೀಲ್ ಕಾರಣ. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸುತ್ತಿದ್ದಾರೆ.  ಘಟ್ಟಿಗನೂರು, ಸೂಳೇಭಾವಿ ಪಿಕೆಪಿಎಸ್ ಚುನಾವಣೆಯಲ್ಲಿ ಪ್ರತಿನಿಧಿ ಆಯ್ಕೆ ಅಕ್ರಮವಾಗಿತ್ತು. ಸಭೆಗೆ ಹುನಗುಂದ ತಹಶೀಲ್ದಾರ್ ಎಸ್ ಎಸ್ ನಾಗರಾಳ ,ಸಿಪಿಐ ಅಯ್ಯನಗೌಡ, ಬಾಗಲಕೋಟೆ ಡಿವೈಎಸ್ಪಿ ನಂದರಡ್ಡಿ, ಅಕ್ರಮ ಪ್ರವೇಶ,ಒತ್ತಡದಿಂದ ಸ್ವತ: ಠರಾವು ಬರೆಸಿದ್ದಾರೆ. ಅಲ್ಲದೇ ನಮ್ಮ ಸದಸ್ಯರಿಗೆ ತಹಶೀಲ್ದಾರ್, ಪೊಲೀಸರು ಜೀವ ಭಯವೊಡ್ಡಿದ್ದಾರೆ ಎಂದು ಹೇಳಿ, ಕಾಶಪ್ಪನವರ್ ಈ ಬಗ್ಗೆ ಸಿಡಿಯೊಂದನ್ನು ಬಿಡುಗಡೆ ಮಾಡಿದರು.

20 ವರ್ಷಗಳ ಬಳಿಕ ಆನೇಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಸಭೆಯೊಳಗೆ ಪೊಲೀಸರು, ತಹಶೀಲ್ದಾರ್ ಕೆಲಸವೇನು..? ಹೈಕೋರ್ಟ್ ಮೂಲಕ ಅದಕ್ಕೆ ತಡೆಯಾಜ್ಞೆ ತಂದಿದ್ದೇವೆ, ಕೋರ್ಟ್ ಆದೇಶದಿಂದ ನಮಗೆ ನ್ಯಾಯ ಸಿಕ್ಕಿದೆ.ಈಗ ಮತ್ತೆ ಘಟ್ಟಿಗನೂರು, ಸೂಳೇಭಾವಿ ಪಿಕೆಪಿಎಸ್ ಪ್ರತಿನಿಧಿ ಮರು ಆಯ್ಕೆ ಮಾಡಿದ್ದೇವೆ. ಅಕ್ರಮ ಪ್ರವೇಶಿಸಿದ ಅಧಿಕಾರಿಗಳು ತಕ್ಷಣವೇ ಅಮಾನತು ಆಗಬೇಕು.  ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದೇನೆ.  ಒಂದು ವೇಳೆ ಆ ಅಧಿಕಾರಿಗಳು ಅಮಾನತು ಆಗದಿದ್ದರೆ, ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಕಾಶಪ್ಪನವರ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ದೌರ್ಜನ್ಯ ಖಂಡಿಸ್ತೇವೆ. ನಾನು ಮತ್ತೆ ಚುನಾವಣೆಯಲ್ಲಿ ಗೆಲ್ತೇನೆ ಎನ್ನುವ ಹೊಟ್ಟೆಕಿಚ್ಚಿನಿಂದ ಪೊಲೀಸರ ಮೂಲಕ ಶಾಸಕ ಹಾಗೂ ಡಿಸಿಎಂ ನಮ್ಮ ಮೇಲೆ ಗೂಂಡಾಗಿರಿ ಮಾಡ್ತಿದಾರೆ ಎಂದು ವಿಜಯಾನಂದ ಕಾಶಪ್ಪನವರ್ ಗಂಭೀರ ಆರೋಪ ಮಾಡಿದರು.

ವಿಜಯಾನಂದ ಕಾಶಪ್ಪನವರ್ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆ ಅಭ್ಯರ್ಥಿ. ಇವರು ಬಾಗಲಕೋಟೆ ಜಿಲ್ಲೆ ಹುನಗುಂದ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನವೆಂಬರ್ 5ರಂದು ಚುನಾವಣೆ ನಡೆಯಲಿದೆ.
Published by: Latha CG
First published: October 30, 2020, 8:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading