ಲಿಂಗಾಯತ ಸಿಎಂ ವಿರುದ್ದ ಲಿಂಗಾಯತ ಶಾಸಕರನ್ನೇ ಎತ್ತಿ ಕಟ್ಟಿದ್ದಾರೆ; ಮಾಜಿ ಸಚಿವ ಬಸವರಾಜ್ ಹೊರಟ್ಟಿ

ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಬದಲಾವಣೆ ಮಾಡಲು, ಕೇಂದ್ರದ ನಾಯಕರ ಒಲವಿದೆ. ಹಾಗಾಗಿಯೇ ಅವರ ಒಮ್ಮತವನ್ನೇ ಯತ್ನಾಳ್ ಹೇಳಿದ್ದಾರೆ, ಯತ್ನಾಳ್  ಅವರಿಗೆ ಪಿಎಂ ನರೇಂದ್ರ ಮೋದಿ, ಅಮಿತ್ ಶಾ ಬೆಂಬಲವಿದೆ. ಅದಕ್ಕಾಗಿಯೇ ಒಬ್ಬ ಲಿಂಗಾಯತ ಸಿಎಂ ವಿರುದ್ದ ಮತ್ತೊಬ್ಬ ಲಿಂಗಾಯತ ಶಾಸಕರನ್ನು ಎತ್ತಿ ಕಟ್ಟಿದ್ದಾರೆ ಎಂದು ಹೇಳಿದರು.

news18-kannada
Updated:October 24, 2020, 1:26 PM IST
ಲಿಂಗಾಯತ ಸಿಎಂ ವಿರುದ್ದ ಲಿಂಗಾಯತ ಶಾಸಕರನ್ನೇ ಎತ್ತಿ ಕಟ್ಟಿದ್ದಾರೆ; ಮಾಜಿ ಸಚಿವ ಬಸವರಾಜ್ ಹೊರಟ್ಟಿ
ಬಸವರಾಜ ಹೊರಟ್ಟಿ
  • Share this:
ಕೋಲಾರ(ಅ.24):  ರಾಜ್ಯದಲ್ಲಿ ನೆರೆಯಿಂದಾಗಿ ಉತ್ತರ ಕರ್ನಾಟಕ ಜನ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇದ್ದಾರೆ. ಆದರೆ ಸರ್ಕಾರ  ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ನೆರೆಯನ್ನ ನಿರ್ವಹಣೆ ಮಾಡುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್‍ನ ಪರಿಷತ್ ಶಾಸಕ ಬಸವರಾಜ್ ಹೊರಟ್ಟಿ ಅವರು ವಾಗ್ದಾಳಿ ನಡೆಸಿದ್ದಾರೆ.  ಕೋಲಾರದ ಅರಾಬಿಕೊತ್ತುನೂರು ಗ್ರಾಮದಲ್ಲಿ ಜೆಡಿಎಸ್ ಮುಖಂಡ ನಂಜುಂಡಗೌಡ ನಿವಾಸಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ, ವಿಧಾನಪರಿಷತ್ ಆಗ್ನೇಯ ಪದವೀಧರರ ಚುನಾವಣೆ ಕುರಿತು ಚರ್ಚೆ ನಡೆಸಿದರು. ಅಭ್ಯರ್ಥಿ ಚೌಡರೆಡ್ಡಿ ಪರವಾಗಿ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಅವರು, ನೆರೆ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರ ಕಷ್ಟವನ್ನು ಕೇಳುವಲ್ಲಿ ಸರ್ಕಾರ ಸ್ಪಂದಸುತ್ತಿಲ್ಲ ಎಂದು ಕಿಡಿಕಾರಿದರು .

ಇದೇ ವೇಳೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳುವ ಧಮ್ ಯಾರಿಗೂ ಇಲ್ಲ ಎಂದು ಬಸವರಾಜ್ ಹೊರಟ್ಟಿ ವ್ಯಂಗ್ಯ ಮಾಡಿದರು. ಕೇಂದ್ರ ಸಚಿವ ಸದಾನಂದಗೌಡರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಹೊರಟ್ಟಿ, ಉತ್ತರ ಕರ್ನಾಟಕ ಅಭಿವೃದ್ದಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡುತ್ತಿಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರೇ ಅದನ್ನ ಹೇಳಿದ್ದಾರೆ ಎಂದರು.

ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ 25 ಸಾವಿರ ರೂ.ಪರಿಹಾರ; ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ

ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಬದಲಾವಣೆ ಮಾಡಲು, ಕೇಂದ್ರದ ನಾಯಕರ ಒಲವಿದೆ. ಹಾಗಾಗಿಯೇ ಅವರ ಒಮ್ಮತವನ್ನೇ ಯತ್ನಾಳ್ ಹೇಳಿದ್ದಾರೆ, ಯತ್ನಾಳ್  ಅವರಿಗೆ ಪಿಎಂ ನರೇಂದ್ರ ಮೋದಿ, ಅಮಿತ್ ಶಾ ಬೆಂಬಲವಿದೆ. ಅದಕ್ಕಾಗಿಯೇ ಒಬ್ಬ ಲಿಂಗಾಯತ ಸಿಎಂ ವಿರುದ್ದ ಮತ್ತೊಬ್ಬ ಲಿಂಗಾಯತ ಶಾಸಕರನ್ನು ಎತ್ತಿ ಕಟ್ಟಿದ್ದಾರೆ ಎಂದು ಹೇಳಿದರು.

ಇನ್ನು ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಚಿವ ಈಶ್ವರಪ್ಪ ಒತ್ತಾಯ ಮಾಡಿದ್ದಾರೆ. ಪಕ್ಷದಲ್ಲಿ ಅವರೆಲ್ಲಾ ಏನೇನು ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಯತ್ನಾಳ್ ಅವರ ವಿರುದ್ದ ಕ್ರಮ ಕೈಗೊಳ್ಳುವ ಧಮ್ ಯಾರಿಗೂ ಇಲ್ಲ ಎಂದು ಹೊರಟ್ಟಿ ಕಿಡಿಕಾರಿದರು.

ರಾಜ್ಯದಲ್ಲಿ ಜೆ.ಸಿ.ಬಿ ಸರ್ಕಾರ ಅಧಿಕಾರದಲ್ಲಿದೆಇನ್ನು ರಾಜ್ಯ ಸರ್ಕಾರವನ್ನ ಪರ್ಸೇಂಟೇಜ್ ಸರ್ಕಾರ ಅಧಿಕಾರದಲ್ಲಿದೆ ಎಂದು ಜರಿದ  ಬಸವರಾಜ್ ಹೊರಟ್ಟಿ, ರಾಜ್ಯದಲ್ಲಿ 15, 20, 25 ಪರ್ಸೆಂಟ್ ಸರ್ಕಾರವಿದೆ,  ಇಲ್ಲಿ ಎಲ್ಲಾ ಪಕ್ಷದವರು ಬಂದು ಶಾಸಕರಾಗಿದ್ದಾರೆ,  ಇದು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಶಾಸಕರಿರುವ ಜೆಸಿಬಿ ಸರ್ಕಾರ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ನಾಯಕರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದರು.
Published by: Latha CG
First published: October 24, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading