ಮುನಿರತ್ನ ಸಕಲಕಲಾವಲ್ಲಭ; ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

ನಾನಾಗಲಿ, ಡಿಕೆಶಿವಕುಮಾರ್ ಅವರಾಗಲಿ.. ಕತ್ತಿಡಿದು ಹೊರಗಡೆ ತಳ್ಳಿಲ್ಲ. ಅವರವರ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪಿಡುಗು.

news18-kannada
Updated:October 30, 2020, 4:04 PM IST
ಮುನಿರತ್ನ ಸಕಲಕಲಾವಲ್ಲಭ; ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ
ಸಿದ್ದರಾಮಯ್ಯ
  • Share this:
ಬೆಂಗಳೂರು(ಅ.30): ಆರ್​ ಆರ್​ ನಗರ ಉಪಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದೆ. ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಪ್ರಚಾರ ನಡೆಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಕೈ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಬಗ್ಗೆ ವ್ಯಂಗ್ಯ ಮಾಡಿದರು. ನಾನಾಗಲಿ, ಡಿಕೆಶಿವಕುಮಾರ್ ಅವರಾಗಲಿ.. ಕತ್ತಿಡಿದು ಹೊರಗಡೆ ತಳ್ಳಿಲ್ಲ. ಅವರವರ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪಿಡುಗು ಎಂದು ಜರಿದರು. ಜೊತೆಗೆ 14 ಜನ ನಮ್ಮ ಶಾಸಕರು, ಮೂವರು ಜೆಡಿಎಸ್‌‌ನವರು ಹೋದ್ರು. ಇವರು ಪಕ್ಷ ಬಿಡದೇ ಇದ್ದಿದ್ದರೆ ಯಡಿಯೂರಪ್ಪ ಸಿಎಂ ಆಗ್ತಿರಲಿಲ್ಲ. ಯಾರಿಗೂ ಬೆಂಬಲ‌ ಇರಲಿಲ್ಲ. ಕುಮಾರಸ್ವಾಮಿಗೂ ಬೆಂಬಲ ಇರಲಿಲ್ಲ. ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಸಿಎಂ ಆಗಿದ್ದು. ನಾವು ಬೆಂಬಲ ಕೊಟ್ಟಿಲ್ಲ ಅಂದಿದ್ದರೆ, ಕುಮಾರಸ್ವಾಮಿ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಹೋಗುತ್ತಿದ್ದರು ಎಂದರು.

ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ- ಈ ಮೂವರು ಎಸ್​​ಬಿಎಂ. ಬೆಳಗ್ಗೆ ಎದ್ದಾಗ ಇವರ ಮುಖ ನೋಡ್ತಿದ್ದೆ, ರಾತ್ರಿ ಮಲಗಬೇಕಾದರೂ ಇವರ ಮುಖ ನೋಡಬೇಕು. ಪೇಪರ್‌ಗಳನ್ನು ತಂದಿದ್ದೇ ತಂದಿದ್ದು, ಅಭಿವೃದ್ಧಿ ಮಾಡೋಕೆ ಹಣ ಕೊಟ್ಟಿದ್ದು ಯಾರಪ್ಪ? ಮುನಿರತ್ನ ಸಕಲಕಲಾವಲ್ಲಭ. ಇವತ್ತು ಸೋಲ್ತೀನಿ ಅನ್ನೋದು ಗೊತ್ತಾಗಿದೆ ಎಂದು ಲೇವಡಿ ಮಾಡಿದರು.

ಕೃಷಿಯತ್ತ ಮುಖ ಮಾಡಿದ ಪದವೀಧರ; ಮಿಶ್ರ ಬೆಳೆಯ ಜೊತೆಗೆ ನಾಟಿ ಕೋಳಿ ಸಾಕಣೆ ಮಾಡಿ ಕೈ ತುಂಬಾ ಸಂಪಾದನೆ

ಸಿದ್ದರಾಮಯ್ಯ ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ನಮ್ಮ ಹುಡುಗರು ಗೊತ್ತಿದ್ದೋ, ಗೊತ್ತಿಲ್ಲದೆಯೋ.. ಮೋದಿ ಮೋದಿ ಮೋದಿ ಅಂತಾರೆ. ಅವರಿಗೆಲ್ಲಾ ಮೋದಿ ಮೂರು ನಾಮ ಹಾಕಿದ್ರು. ಯುವಕರು ಉದ್ಯೋಗ ಕೇಳಿದರೆ, ಪಕೋಡಾ ಮಾರೋಕೆ ಹೇಳಿದ್ರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಂದುವರೆದ ಅವರು, ಕೊರೋನಾ ಬಂದಾಗ 21 ದಿನಗಳಲ್ಲಿ ಓಡಿಸ್ತೀನಿ, ಅದಕ್ಕೋಸ್ಕರ ದೀಪ ಹಚ್ಚಿ, ಜಾಗಟೆ ಬಾರಿಸಿ ಅಂತಾ ಹೇಳಿದರು. ಜಾಗಟೆ ಬಾರಿಸಿ, ದೀಪ ಹಚ್ಚಿದ್ದಕ್ಕೆ ಕೋರೊನಾ ಹೋಯ್ತೇನಪ್ಪ ಮೋದಿ. ಇಲ್ಲ, ಬದಲಾಗಿ ಇವತ್ತು ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಪ್ರಪಂಚದಲ್ಲಿ ನಮ್ಮ ಭಾರತ ಎರಡನೇ ಸ್ಥಾನದಲ್ಲಿದೆ ಎಂದರು.
Published by: Latha CG
First published: October 30, 2020, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading