HOME » NEWS » State » ED OFFICERS DRILL BINEESH KODIYERI IN BENGALURU KMTV SNVS

ಕೇರಳ ಮಾಜಿ ಗೃಹ ಮಂತ್ರಿ ಪುತ್ರನಿಗೂ ಡ್ರಗ್ಸ್ ಕೇಸ್ ಆರೋಪಿ ಮೊಹಮ್ಮದ್ ಅನೂಪ್​ಗೂ ಇದೆ ನಂಟು

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತನಾಗಿರುವ ಕೇರಳದ ಬಿನೀಶ್ ಕೊಡಿಯೇರಿಗೂ ಡ್ರಗ್ಸ್ ಪ್ರಕರಣದ ಆರೋಪಿ ಮೊಹಮ್ಮದ್ ಅನೂಪ್​ಗೂ ನಂಟು ಇರುವ ವಿಚಾರ ಇದೀಗ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

news18-kannada
Updated:October 30, 2020, 6:45 PM IST
ಕೇರಳ ಮಾಜಿ ಗೃಹ ಮಂತ್ರಿ ಪುತ್ರನಿಗೂ ಡ್ರಗ್ಸ್ ಕೇಸ್ ಆರೋಪಿ ಮೊಹಮ್ಮದ್ ಅನೂಪ್​ಗೂ ಇದೆ ನಂಟು
ಬಿನೀಶ್ ಕೋಡಿಯೇರಿ
  • Share this:
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕೇರಳದ ಮಾಜಿ ಗೃಹ ಸಚಿವರ ಪುತ್ರನಿಗೆ ಇಡಿ ಆಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನಿನ್ನೆಯಷ್ಟೆ ಬಿನೀಶ್ ಕೊಡಿಯೇರಿಯನ್ನ ಬಂಧಿಸಿದ ಜಾರಿ ನಿರ್ದೇಶನಾಲಯದ ಆಧಿಕಾರಿಗಳು, ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ತಮ್ಮ ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಇಡಿ ಆಧಿಕಾರಿಗಳು ಇಂದು ಬೆಳಗ್ಗೆಯಿಂದ ವಿಚಾರಣೆ ಕೈಗೆತ್ತಿಕೊಂಡಿದ್ದು ಅಕ್ರಮ ಹಣ ವರ್ಗಾವಣೆ ಸಂಬಂಧ ಬಿನೀಶ್ ಕೊಡಿಯೇರಿಗೆ ಕೆಲವು ಪ್ರಶ್ನೆಗಳನ್ನ ಮಾಡಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಇಡಿ ವಿಚಾರಣೆ ವೇಳೆ ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧಿತನಾದ ಆರೋಪಿ ಮೊಹಮ್ಮದ್‌ ಅನೂಪ್, ಬಿನೀಶ್ ಕೊಡಿಯೇರಿಯ ಬೇನಾಮಿಯಾಗಿದ್ದ ಎನ್ನಲಾಗಿದೆ. ಅನೂಪ್ ಮೂಲಕ ಬಿನೀಶ್ ಕೊಡಿಯೇರಿ ಸಾಕಷ್ಟು ಹಣಕಾಸು ವ್ಯವಹಾರಗಳನ್ನ ನಡೆಸಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.  ಅಲ್ಲದೆ ಬಿನೀಶ್ ಕೊಡಿಯೇರಿ ಅನೂಪ್​ಗೆ ದೊಡ್ಡ ಮೊತ್ತದ ಹಣ ಸಂದಾಯ ಮಾಡಿದ್ದು ಆ ಬಗ್ಗೆ ಅನೂಪ್ ಯಾವುದೇ ಮಾಹಿತಿ ಬಿಟ್ಟು ಕೊಡುತ್ತಿಲ್ಲ ಎನ್ನಲಾಗಿದೆ. ಇಡಿ ಆಧಿಕಾರಿಗಳು ಈ ಬಗ್ಗೆ ಕೆಲವು ಬ್ಯಾಂಕ್ ದಾಖಲೆಗಳು ಮತ್ತು ವ್ಯವಹಾರ ಪತ್ರಗಳನ್ನ ಇಟ್ಟುಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Drugs Case: ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಕೊಡಿಯೇರ್​ ಬಂಧನ

ಸದ್ಯ ಇಬ್ಬರ ಹಣಕಾಸು ವ್ಯವಹಾರ ಸಂಬಂಧ ಬ್ಯಾಂಕ್ ದಾಖಲೆಗಳು, ಇತರ ಕಾಗದ ಪತ್ರಗಳನ್ನ ಇಡಿ ಆಧಿಕಾರಿಗಳು ಸಂಗ್ರಹ ಮಾಡಿದ್ದು ಪಿಎಂಎಲ್ಎ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದಾರೆ. ಬಿನೀಶ್ ಕೊಡಿಯೇರಿ ಇನ್ನೂ ನಾಲ್ಕು ದಿನಗಳ ಕಾಲ ಇಡಿ ವಶದಲ್ಲೇ ಇರಲಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: October 30, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories