ಕೃಷಿಯತ್ತ ಮುಖ ಮಾಡಿದ ಪದವೀಧರ; ಮಿಶ್ರ ಬೆಳೆಯ ಜೊತೆಗೆ ನಾಟಿ ಕೋಳಿ ಸಾಕಣೆ ಮಾಡಿ ಕೈ ತುಂಬಾ ಸಂಪಾದನೆ

ಐದು ಎಕರೆ ಪ್ರದೇಶದಲ್ಲಿ ಮಿಶ್ರ ಬೆಳೆ ಬೆಳೆಯುದರ ಜೊತೆಗೆ ಹೈನುಗಾರಿಕೆಯನ್ನ ಮಾಡುತ್ತಿದ್ದಾರೆ.  ಇದೆಲ್ಲದರ ಜೊತೆಗೆ 300 ಅಪ್ಪಟ ಜವಾರಿ ಕೋಳಿ ಸಾಕಾಣಿಕೆ ಮಾಡಿಕೊಂಡು ಆರ್ಥಿಕವಾಗಿ ಚೇತರಿಕೆ ಕಂಡುಕೊಂಡಿದ್ದಾನೆ. ತಮ್ಮ ಮನೆಯ ಅಂಗಳದ ಮುಂಭಾಗದಲ್ಲಿ ಇರುವ  ಸಾಗವಾಣಿ ಗಿಡಗಳ ನೆರಳಿನ ಆಶ್ರಯದಲ್ಲಿ ಸುಮಾರು 300 ಜವಾರಿ ಕೋಳಿ ಸಾಕಾಣಿಕೆ ಮಾಡಿದ್ದಾರೆ.

news18-kannada
Updated:October 30, 2020, 3:18 PM IST
ಕೃಷಿಯತ್ತ ಮುಖ ಮಾಡಿದ ಪದವೀಧರ; ಮಿಶ್ರ ಬೆಳೆಯ ಜೊತೆಗೆ ನಾಟಿ ಕೋಳಿ ಸಾಕಣೆ ಮಾಡಿ ಕೈ ತುಂಬಾ ಸಂಪಾದನೆ
ಕೋಳಿ ಸಾಕಣೆ
  • Share this:
ಚಿಕ್ಕೋಡಿ(ಅ.30): ಸದ್ಯದ ಪರಿಸ್ಥಿತಿಯಲ್ಲಿ ಓರ್ವ ವ್ಯಕ್ತಿ ಒಂದು ಪದವಿ ವಿದ್ಯಾಭ್ಯಾಸ ಮಾಡಿದ್ರೆ ಸಾಕು ಯಾವುದಾದರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಹುಡುಕಿಕೊಂಡು ನೌಕರಿ ಮಾಡಿಕೊಂಡು ಹಾಯಾದ ಜೀವನ ನಡೆಸುವ ವಿಚಾರ ಮಾಡುತ್ತಾರೆ. ಕೈತುಂಬ ಸಂಬಳ ಸಿಗದಿದ್ದರೂ ಪರವಾಗಿಲ್ಲ, ಕಡಿಮೆ ಸಂಬಳದಲ್ಲೇ ದುಡಿದು ಜೀವನ ನಡೆಸಲು ಇವತ್ತಿನ ಯುವಕರ ಆಸೆ. ಆದ್ರೆ ಇಲ್ಲೊಬ್ಬ ಪದವಿಧರ ನೌಕರಿಗಾಗಿ ಅಲೆದಾಡದೆ ಸರಿಯಾದ ಸಂಬಳ ಸಿಗಲ್ಲ ಎಂದು ಗೊತ್ತಾಗಿ ನೌಕರಿಯ ಬದಲಾಗಿ ಕೃಷಿಯತ್ತ ಮುಖ ಮಾಡಿ ಈಗ ಯಶಸ್ಸು ಕಂಡಿದ್ದಾನೆ. ಹೌದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಬಿಸನಕೊಪ್ಪ ಗ್ರಾಮದ ಮೌನೇಶ ಜಿಡ್ಡಿಮನಿ ಎಂಬ ಯುವ ರೈತ ಆಧುನಿಕ ಕೃಷಿ ಮಾಡುವ ಮೂಲಕ ಸುಖಿ ಜೀವನ ನಡೆಸುತ್ತಿದ್ದಾರೆ. ಮೌನೇಶ ಓದಿದ್ದು ಬಿ.ಎ.ಪದವಿ. ಆದ್ರೆಯಾವುದೇ ನೌಕರಿ ಗೋಜಿಗೆ ಹೋಗದೆ  ತಮ್ಮ ತಂದೆಯ ಜಮೀನಿನಲ್ಲೆ ತಮ್ಮ ಆಸಕ್ತಿ ತೋರಿದ ಮೌನೇಶ ಆಧುನಿಕ ಪದ್ದತಿಯ ಕೃಷಿಯನ್ನ ಆರಂಭಿಸಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಭೂಮಿಯಲ್ಲಿ ಬಿತ್ತಿದ್ದ ಬೀಜ ಕೈ ಸೇರುತ್ತಿರಲಿಲ್ಲ. ಹೀಗಾಗಿ ನಷ್ಟದ ಮೇಲೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದ್ರೆ ಧೃತಿಗೆಡದ ಮೌನೇಶ ಕೃಷಿ ಜೊತೆಗೆ ಜವಾರಿ ಕೋಳಿ ಸಾಕಾಣಿಕೆ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ. ಜೊತೆಗೆ ಇತರ ರೈತರಿಗೂ ಮಾದರಿಯಾಗಿದ್ದಾನೆ.

ಮೌನೇಶ ತಮ್ಮ ತಂದೆಯ 5 ಎಕರೆ ಜಮೀನು ಹೊಂದಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಮಿಶ್ರ ಬೆಳೆ ಬೆಳೆಯುದರ ಜೊತೆಗೆ ಹೈನುಗಾರಿಕೆಯನ್ನ ಮಾಡುತ್ತಿದ್ದಾರೆ.  ಇದೆಲ್ಲದರ ಜೊತೆಗೆ 300 ಅಪ್ಪಟ ಜವಾರಿ ಕೋಳಿ ಸಾಕಾಣಿಕೆ ಮಾಡಿಕೊಂಡು ಆರ್ಥಿಕವಾಗಿ ಚೇತರಿಕೆ ಕಂಡುಕೊಂಡಿದ್ದಾನೆ. ತಮ್ಮ ಮನೆಯ ಅಂಗಳದ ಮುಂಭಾಗದಲ್ಲಿ ಇರುವ  ಸಾಗವಾಣಿ ಗಿಡಗಳ ನೆರಳಿನ ಆಶ್ರಯದಲ್ಲಿ ಸುಮಾರು 300 ಜವಾರಿ ಕೋಳಿ ಸಾಕಾಣಿಕೆ ಮಾಡಿದ್ದಾರೆ.

6 ತಿಂಗಳೊಳಗೆ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡ್ತೇನೆ; ಸಿಎಂ ಬಿಎಸ್ ಯಡಿಯೂರಪ್ಪ

ಮನೆಯ ಅಂಗಳದ ಮುಂಭಾಗದಲ್ಲಿ ಇರುವ ಸಾಗವಾಣಿ ಗಿಡದ ಸುತ್ತಮುತ್ತ ತಂತಿ ಬೇಲಿ ಅಳವಡಿಸಿ ಒಳಗೆ ಜವಾರಿ ಕೋಳಿ ಸಾಕಾಣಿಕೆ ಮಾಡಿದ್ದು, ಭದ್ರತೆ ದೃಷ್ಠಿಯಿಂದ ರಾತ್ರಿ ಹೊತ್ತಿನಲ್ಲಿ ಪ್ರತ್ಯೇಕ ಗೂಡು ನಿರ್ಮಾಣ ಮಾಡಿದ್ದಾರೆ. ಜವಾರಿ ಕೋಳಿಗಳಿಗೆ ಅಷ್ಟೊಂದು ಪರ್ಯಾಯ ಆಹಾರ ಕೂಡ ಅಗತ್ಯ ಇರಲ್ಲ. ಮನೆಯಲ್ಲಿರುವ ಅಕ್ಕಿ, ಮೆಕ್ಕೆಜೋಳದ ನುಚ್ಚು, ಹೊಲದಲ್ಲಿ ಬೆಳೆದ ಇತರೆ ತರಕಾರಿ ಹಾಕಲಾಗುತ್ತಿದೆ. ಪ್ರತಿ ತಿಂಗಳು ಖರ್ಚು ವೆಚ್ಚ ತೆಗೆದು ಕೋಳಿ ಸಾಕಾಣಿಕೆಯಿಂದ ಅಂದಾಜು 20 ಸಾವಿರ ರೂ ಉಳಿಯುತ್ತಿದೆ ಎನ್ನುತ್ತಾರೆ ಯುವ ಕೃಷಿಕ.

ಜವಾರಿ ಮೊಟ್ಟೆಗೆ ಭಾರಿ ಬೇಡಿಕೆ

ಇತ್ತೀಚೆಗೆ ಕೊರೋನಾ ವೈರಸ್ ತಡೆಗೆ ಹಾಗೂ ಪಾಸಿಟಿವ್​ ಬಂದವರು ಮೊಟ್ಟೆ  ಸೇವಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಜವಾರಿ ಕೋಳಿ ಮೊಟ್ಟೆ ಬೆಲೆಯಂತೂ ಗಗನಕ್ಕೆ ಹೋಗಿದೆ. ಒಂದು ಜವಾರಿ ಕೋಳಿ ಮೊಟ್ಟೆ 8 ರಿಂದ 10 ರೂಗೆ ಮಾರಾಟವಾಗುತ್ತಿದೆ. ಇದೆ ಕೋಳಿಯಿಂದ ಸಿಗುವ ಒಂದು ವಾರಕ್ಕೆ 500 ಮೊಟ್ಟೆ ಮಾರಾಟ ಮಾಡುತ್ತಾರೆ. ಇನ್ನು ಜವಾರಿ ಕೋಳಿಗೆ 500 ರೂ ಹಾಗೂ ಹುಂಜಗೆ 600 ರೂ ಮಾರಾಟವಾಗುತ್ತಿವೆ. ಹೀಗಾಗಿ ಕೃಷಿ ಜೊತೆಗೆ ಉಪಕಸಬುವಾಗಿ ಕೋಳಿ ಸಾಕಾಣಿಕೆ ಮಾಡುವುದು ಉತ್ತಮ ಎನ್ನುತ್ತಾರೆ ಮೌನೇಶ.
ಸದ್ಯ 300 ಕೋಳಿ ಸಾಕಾಣಿಕೆ ಮಾಡಿ ಯಶಸ್ಸು ಕಂಡಿರುವ ಮೌನೇಶ ಇನ್ನು 500 ಕೋಳಿ ಸಾಕಾಣಿಕೆ ಮಾಡುವ ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಪದವಿ ಓದಿದರೂ ಕೆಲಸ ಸಿಗುತ್ತಿಲ್ಲ, ನಾವು ನಿರುದ್ಯೋಗಿಗಳು ಎಂದು ಹೇಳಿಕೊಂಡ ಓಡಾಡುವ ಯುವಕರಿಗೆ ಮೌನೇಶ ಒಳ್ಳೆಯ ಮಾದರಿಯಾಗಿದ್ದಾರೆ.
Published by: Latha CG
First published: October 30, 2020, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading