ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ; ಹಾಟ್ಸ್ಪಾಟ್ ಪಟ್ಟಿಯಿಂದ ಹಿಂದೆ ಸರಿದ ಉತ್ತರ ಕನ್ನಡ
ಕೋವಿಡ್ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಜಿಲ್ಲೆ ಈಗ ಈ ಪಟ್ಟಿಯಿಂದ ಹೊರಬಂದಿರುವುದು ಸಂತಸಕ್ಕೆ ಕಾರಣವಾಗಿದೆ.
news18-kannada Updated:October 25, 2020, 6:44 PM IST

ಪ್ರಾತಿನಿಧಿಕ ಚಿತ್ರ.
- News18 Kannada
- Last Updated: October 25, 2020, 6:44 PM IST
ಕಾರವಾರ (ಅ.25): ಕೋವಿಡ್ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಜಿಲ್ಲೆ ಈಗ ಈ ಪಟ್ಟಿಯಿಂದ ಹೊರಬಂದಿದ್ದು, ಜನರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಇದರಿಂದ ಅಧಿಕಾರಿಗಳಲ್ಲಿ ನೆಮ್ಮದಿ ನಿಟ್ಟುಸಿರು ಬಿಡುವಂತೆ ಆಗಿದೆ. ಈ ಹಿಂದೆ ಜಿಲ್ಲೆಯಲ್ಲಿ ದಿನವೊಂದಕ್ಕೆ ಶೇ 12ರಷ್ಟು ಸೋಂಕಿತ ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆ ಕೊರೋನಾ ಹಾಟ್ಸ್ಪಾಟ್ ಆಗಿತ್ತು. ಈ ಪ್ರಮಾಣ ಈಗ ಶೇ.2ಕ್ಕೆ ಇಳಿದಿದ್ದು, ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂಬ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಗೆ ನೀಡಿದ ಕೋವಿಡ್ ಪರೀಕ್ಷಾ ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಅದರಲ್ಲೂ ಆಂಟಿಜೆನ್ ರ್ಯಾಪಿಡ್ಗಿಂತ ಆರ್ಟಿ- ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಿರುವುದು ವಿಶೇಷವಾಗಿದೆ. ಶೇ 90ರಷ್ಟು ಗುಣಮುಖರಾಗಿರವುದು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಹರೀಶ್.
ಹಾಟ್ಸ್ಟಾಟ್ ಆಗಿದ್ದ ಜಿಲ್ಲೆ ಜಿಲ್ಲೆಯಲ್ಲಿ ಕೊರೋನಾ ಆರಂಭದಿಂದ ಇಲ್ಲಿಯವರೆಗೂ 1,49,183 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರಂಭದ ಕೆಲ ತಿಂಗಳು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಇದರ ಪರಿಣಾ ಕೊರೋನಾ ಹಾಟ್ಸ್ಪಾಟ್ ಜಿಲ್ಲೆಗಳ ಪಟ್ಟಿಗೆ ಉತ್ತರ ಕನ್ನಡ ಕೂಡ ಸೇರಿಕೊಂಡಿತ್ತು. ಮಧ್ಯೆ ಒಂದೆರಡು ತಿಂಗಳು ಸ್ವಲ್ಪ ಇಳಿಕೆಯಾದಂತೆ ಕಂಡರೂ, ಮತ್ತೆ ಆಗಸ್ಟ್, ಸೆಪ್ಟೆಂಬರ್ನಲ್ಲಿ ಅತಿ ಹೆಚ್ಚಿನ ಹೊಸ ಸೋಂಕಿತರು ಪತ್ತೆಯಾಗಿ ಜಿಲ್ಲೆ ಮತ್ತೆ ಹಾಟ್ಸ್ಪಾಟ್ ಪಟ್ಟಿ ಸೇರಿತು. ಈ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚುತಲಿದ್ದು, ಜನರಲ್ಲೂ ಆತಂಕ ಸೃಷ್ಟಿ ಮಾಡಿತ್ತು.
ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ 100 ಜನರನ್ನು ತಪಾಸಣೆಗೆ ಒಳಪಡಿಸಿದರೆ 12 ಮಂದಿಗೆ ಸೋಂಕು ದೃಢಪಟ್ಟು, ಸೋಂಕಿನ ಪ್ರಮಾಣ ಶೇ 12ಕ್ಕೆ ತಲುಪಿತ್ತು. ಒಂದೆಡೆ ಪ್ರತಿ ದಿನ 250ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದೃಢಪಡುತ್ತಿದ್ದರೆ, ಮತ್ತೊಂದೆಡೆ 7ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಈ ಪ್ರಮಾಣದಲ್ಲಿ ಈಗ ಗಣನೀಯವಾಗಿ ಇಳಿಕೆಯಾಗುತ್ತಿದೆ. ಪ್ರತಿದಿನ 100ರ ಒಳಗೆ ಕೇಸುಗಳು ಪತ್ತೆಯಾಗುತ್ತಿದ್ದು, ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಜತೆಗೆ, ಕೆಲವೊಂದು ತಾಲೂಕುಗಳಲ್ಲಿ ವಾರಗಟ್ಟಲೆ ಪ್ರಕರಣಗಳೇ ಇಲ್ಲವಾಗಿಬಿಟ್ಟಿದೆ.
ಎಚ್ಚರ ತಪ್ಪಿದರೆ ಅಪಾಯ
ಇನ್ನು, ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ನಿಯಂತ್ರಣಕ್ಕೆ ಬರುತ್ತಿದ್ದು, ಜನತೆ ಇನ್ನಷ್ಟು ಎಚ್ಚರಿಕೆ ವಹಿಸಿದರೆ ಶೀಘ್ರ ಕೋವಿಡ್ ಮುಕ್ತ ಜಿಲ್ಲೆ ಮಾಡಬಹುದು. ಕೊರೋನಾ ಕಡಿಮೆ ಆಗಿದೆ ಎಂದು ಅನಗತ್ಯ ಓಡಾಟ ಮಾಡುವುದು. ಎಚ್ಚರ ತಪ್ಪುವುದು ಸಲ್ಲ ಎಂದು ಕೂಡ ಜಿಲ್ಲಾಡಳಿತ ಎಚ್ಚರಿಸಿದೆ. ಜನತೆ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಸ್ಚಚ್ಛತೆ ಕಾಪಾಡುವುದರಿಂದ ಸೋಂಕು ಹರಡುವಿಕೆಯನ್ನು ಇನ್ನಷ್ಟು ತಡೆಯಬಹುದಾಗಿದೆ ಎನ್ನುತ್ತಾರೆ ವೈದ್ಯರುಗಳು.
ಇದನ್ನು ಓದಿ: ಸಾಲು ರಜೆ ಹಿನ್ನಲೆ ಭರಚುಕ್ಕಿ ಸೊಬಗ ಕಣ್ತುಂಬಿಕೊಳ್ಳಲು ಮುಂದಾದ ಜನ; ಕೋವಿಡ್ ಸುರಕ್ಷತೆಗೆ ಡೋಂಟ್ ಕೇರ್ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿ ಮಾರ್ಗದರ್ಶನದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ವೈದ್ಯಾಧಿಕಾರಿಗಳ ತಂಡ ಪ್ರತಿ ಮನೆಗೆ ತೆರಳಿ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು ಪತ್ತೆ ಮಾಡಿದ್ದರು. ಕೋವಿಡ್ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಶುಶ್ರೂಷಕರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಶ್ರಮಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಇಳಿಮುಖ ಕಂಡಿದೆ.
ರಾಜ್ಯದಲ್ಲೇ 3ನೇ ಸ್ಥಾನದಲ್ಲಿ
ಅತಿ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡ 3ನೇ ಸ್ಥಾನದಲ್ಲಿದೆ. ಬೀದರ್ ಮತ್ತು ಗದಗ ಶೇ 1ರಷ್ಟು ಸೋಂಕು ಪ್ರಮಾಣ ದರ ಹೊಂದಿ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಉತ್ತರ ಕನ್ನಡ ಶೇ 2ರಷ್ಟು ಸೋಂಕು ಪ್ರಮಾಣ ದರದ ಮೂಲಕ 3ನೇ ಸ್ಥಾನದಲ್ಲಿದೆ.
ಶೇ 90ರಷ್ಟು ಸೋಂಕಿತರು ಗುಣಮುಖ
ಜಿಲ್ಲೆಯಲ್ಲಿ ಶನಿವಾರದವರೆಗೆ 12,538 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶೇ 90ರಷ್ಟು ಸೋಂಕಿತರು, ಅಂದರೆ 11,341 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎನ್ನುವುದು ಕೂಡ ಇಲ್ಲಿ ಗಮನಾರ್ಹವಾಗಿದೆ. ಒಟ್ಟು 1,037 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, 160 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 406 ಮಂದಿ ಹೋಮ್ ಐಸೋಲೇಶನ್ನಲ್ಲಿದ್ದರೆ, 631 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್ನ ಎಲ್ಲಾ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ನಿರ್ಲಕ್ಷಿಸಿದ್ದಲ್ಲಿ ದೊಡ್ಡ ಗಂಡಾಂತರಕ್ಕೆ ನಾವೇ ದಾರಿ ಮಾಡಿದಂತಾಗುತ್ತದೆ. ಈ ಹಿನ್ನಲೆ ಪ್ರತಿಯೊಬ್ಬರು ಎಚ್ಚರಿಕೆವಹಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಹಾಟ್ಸ್ಟಾಟ್ ಆಗಿದ್ದ ಜಿಲ್ಲೆ