ಬೆಂಗಳೂರಿನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ನಾಲ್ವರ ಬಂಧನ

ನೈಸ್ ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಯುವಕರು ತಮ್ಮದೇ ಗುಂಪು ಕಟ್ಟಿಕೊಂಡು ಬಾಜಿ ನಡೆಸುತ್ತಿದ್ದರು. ಯುವಕರ ಮೊಬೈಲ್​ನಲ್ಲಿ ಹಲವಾರು ಮಂದಿ ವೀಲಿಂಗ್ ಮಾಡುವ ವಿಡಿಯೋಗಳು ಪತ್ತೆಯಾಗಿತ್ತು.

news18-kannada
Updated:August 10, 2020, 8:29 AM IST
ಬೆಂಗಳೂರಿನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ನಾಲ್ವರ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಆ. 10): ಕೊರೋನಾ ಭೀತಿಯಿಂದಾಗಿ ಕೆಲವರು ಮನೆಯಿಂದ ಹೊರಗೆ ಬರಲೂ ಭಯಪಡುತ್ತಿದ್ದಾರೆ. ಇನ್ನು ಕೆಲವರು ತಾವು ಮಜಾ ಮಾಡಿ, ಬೇರೆಯವರಿಗೆ ತೊಂದರೆ ಕೊಡಲೆಂದೇ ರಸ್ತೆಗೆ ಇಳಿಯುತ್ತಾರೆ. ಇದೇ ರೀತಿ ಬೇರೆಯವರಿಗೆ ತೊಂದರೆ ನೀಡುತ್ತಾ ಬೆಂಗಳೂರಿನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಬ್ಯಾಟರಾಯನಪುರ ಸಂಚಾರಿ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ನೈಸ್ ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಯುವಕರು ತಮ್ಮದೇ ಗುಂಪು ಕಟ್ಟಿಕೊಂಡು ಬಾಜಿ ನಡೆಸುತ್ತಿದ್ದರು. ಯುವಕರ ಮೊಬೈಲ್​ನಲ್ಲಿ ಹಲವಾರು ಮಂದಿ ವೀಲಿಂಗ್ ಮಾಡುವ ವಿಡಿಯೋಗಳು ಪತ್ತೆಯಾಗಿತ್ತು. ವಿಡಿಯೋ ಪರಿಶೀಲನೆ ನಡೆಸಿ ಇತರರಿಗೆ ಬಲೆ ಬೀಸಿರುವ ಪೊಲೀಸರು ವೀಲಿಂಗ್ ಮಾಡಲು ಬಳಸುತ್ತಿದ್ದ 3 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು


ಇದನ್ನೂ ಓದಿ: Kerala Rains: ವಿಪರೀತ ಮಳೆಯಿಂದ ಕೇರಳದ 6 ಜಿಲ್ಲೆಗಳಲ್ಲಿಂದು ಹೈ ಅಲರ್ಟ್​; ಇಡುಕ್ಕಿ ಭೂಕುಸಿತದ ಸಾವಿನ ಸಂಖ್ಯೆ 43ಕ್ಕೆ ಏರಿಕೆ

ಬೆಂಗಳೂರಿನ ಚಂದನ್, ಸುಮಂತ್, ಲಿಖಿತ್ ಮತ್ತು ವಿನಯ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ವಿರುದ್ಧ 3 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೈಸ್​ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರೂ ತಮ್ಮ ವೀಲಿಂಗ್ ಕ್ರೇಜ್ ತೀರಿಸಿಕೊಳ್ಳಲು ಯುವಕರು ನೈಸ್​ ರೋಡ್​ಗೆ ತೆರಳುತ್ತಿದ್ದರು.

ಆ ಮಾರ್ಗವಾಗಿ ಓಡಾಡುತ್ತಿದ್ದ ಕೆಲವು ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿತ್ತು. ಆ ಯುವಕರು ಚಾಲೆಂಜ್ ಕಟ್ಟಿಕೊಂಡು ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಿದದ್ ದೃಶ್ಯವನ್ನು ವಿಡಿಯೋ ಮಾಡಿಕೊಂಡು ಇತರೆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದರು.
Published by: Sushma Chakre
First published: August 10, 2020, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading