ಶಿರಾ ವಿಧಾನಸಭಾ ಉಪಚುನಾವಣೆ: ಬಿಜೆಪಿಗೆ ಪವರ್ ಸ್ಟ್ರೋಕ್ ಕೊಟ್ಟ ಕಾಂಗ್ರೆಸ್ ಕಟ್ಟಾಳುಗಳು

ಸಭೆಯಲ್ಲಿ ತಮ್ಮ ತಮ್ಮ ಅಸಮಾಧಾನಗಳನ್ನ ಕೆ.ಎನ್.ರಾಜಣ್ಣ ಹಾಗೂ ಟಿ.ಬಿ ಜಯಚಂದ್ರ ಹೊರ ಹಾಕಿದ್ದರು. ಡಾ.ಜಿ ಪರಮೇಶ್ವರ್ ರವರ ಅಭಿಪ್ರಾಯಗಳನ್ನೂ ಕೂಡ ಆಲಿಸಲಾಗಿತ್ತು. ಸಭೆಯ ನಂತರ ಮಾತನಾಡಿದ್ದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆಶಿವಕುಮಾರ್ ಶಿರಾ ಉಪಚುನಾವಣೆಗೆ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ರು.

news18-kannada
Updated:September 20, 2020, 8:04 PM IST
ಶಿರಾ ವಿಧಾನಸಭಾ ಉಪಚುನಾವಣೆ: ಬಿಜೆಪಿಗೆ ಪವರ್ ಸ್ಟ್ರೋಕ್ ಕೊಟ್ಟ ಕಾಂಗ್ರೆಸ್ ಕಟ್ಟಾಳುಗಳು
ಸಾಂದರ್ಭಿಕ ಚಿತ್ರ
  • Share this:
ತುಮಕೂರು(ಸೆ.20): ಶಿರಾ ಶಾಸಕ ಸತ್ಯನಾರಾಯಣ್ ಸಾವಿನಿಂದ ತೆರವಾದ ಶಿರಾ ವಿಧಾನಸಭಾ ಉಪಚುನಾವಣೆ ಚುನಾವಣೆ ಘೋಷಣೆಗೂ ಮುನ್ನವೇ ರಂಗೇರತೊಡಗಿದೆ. ಮೂರು ಪಕ್ಷಗಳೂ ಕೂಡ ಗೆಲುವಿಗಾಗಿ ರಣತಂತ್ರ ರೂಪಿಸತೊಡಗಿವೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ, ಹಾವು ಮುಂಗಸಿಯಂತಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಒಂದಾಗಿದ್ದಾರೆ. ಶಿರಾದಲ್ಲಿ ಕೈಗೆ ಬಲಬಂದಂತಾಗಿದೆ. ಒಂದೇ ಪಕ್ಷದ ಬದ್ದವೈರಿಗಳ ಸಮಾಗಮ ಮೂಲಕ ಜಯಚಂದ್ರಗೆ ಇದ್ದ ದೊಡ್ಡದೊಂದು ತೊಡಕು ಶಮನವಾದಂತಾಗಿದೆ. ತುಮಕೂರು ವಿಭಿನ್ನ ರಾಜಕೀಯ ಲೆಕ್ಕಾಚಾರಕ್ಕೆ ಹೆಸರು ಮಾಡಿದ ಜಿಲ್ಲೆ, ಯಾವಾಗ ಯಾವರೀತಿ ಲೆಕ್ಕಾಚಾರಗಳು ಬದಲಾಗುತ್ತೆ ಅಂತ ಹೇಳೊಕಾಗೋದಿಲ್ಲ. ಶಿರಾ ಉಪಚುನಾವಣೆ ಅಖಾಡದಲ್ಲಿ ಇದೀಗ ಅಂತಹದ್ದೇ ಒಂದು ರಾಜಕೀಯ ವಿದ್ಯಾಮಾನ ನಡೆದಿದ್ದು ಒಂದೇ ಪಕ್ಷದಲ್ಲಿದ್ದುಕೊಂಡೇ ಪರಸ್ಪರ ಕತ್ತಿ ಮಸೆಯುತ್ತಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರಸ್ಪರ ದ್ವೇಷ ಮರೆತು ಒಂದಾಗಿದ್ದಾರೆ.

ನಿನ್ನೆ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಐದನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎನ್ ರಾಜಣ್ಣ ಮನೆಗೆ ಟಿ.ಬಿ ಜಯಚಂದ್ರ, ತಮ್ಮ ಪತ್ನಿ ಸಮೇತ ಆಗಮಿಸಿ ಅಭಿನಂದನೆ ಸಲ್ಲಿಸಿದ್ದರು. ಇಬ್ಬರು ನಾಯಕರ ಒಗ್ಗಟ್ಟು ಪ್ರದರ್ಶನಗೊಂಡಿದೆ. ಕಳೆದ ಮೂರು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಟಿ.ಬಿ ಜಯಚಂದ್ರ, ಕೆ.ಎನ್ ರಾಜಣ್ಣ, ಡಾ.ಜಿ ಪರಮೇಶ್ವರ್ ಸೇರಿದಂತೆ ತುಮಕೂರಿನ ಕೈ ಮುಖಂಡರ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ತಮ್ಮ ತಮ್ಮ ಅಸಮಾಧಾನಗಳನ್ನ ಕೆ.ಎನ್.ರಾಜಣ್ಣ ಹಾಗೂ ಟಿ.ಬಿ ಜಯಚಂದ್ರ ಹೊರ ಹಾಕಿದ್ದರು. ಡಾ.ಜಿ ಪರಮೇಶ್ವರ್ ರವರ ಅಭಿಪ್ರಾಯಗಳನ್ನೂ ಕೂಡ ಆಲಿಸಲಾಗಿತ್ತು. ಸಭೆಯ ನಂತರ ಮಾತನಾಡಿದ್ದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆಶಿವಕುಮಾರ್ ಶಿರಾ ಉಪಚುನಾವಣೆಗೆ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ರು.

ಈ ಎಲ್ಲಾ ಬೆಳವಣಿಗೆ ನಂತರ ಟಿ.ಬಿ ಜಯಚಂದ್ರ ರಾಜಣ್ಣ ಮನೆಗೆ ಆಗಮಿಸಿದ್ದು, ಶಿರಾ ಕೈ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಜಿಲ್ಲಾ ಕಾಂಗ್ರೆಸ್​ನಲ್ಲಿ ಇಬ್ಬರೂ ಜೊಡೆತ್ತುಗಳಂತೆ ಇದ್ದು,ಕೆಲವೊಮ್ಮೆ ರಾಜಕೀಯ ತಪ್ಪು ನಿರ್ಧಾರಗಳು ಆಗಿರಬಹುದು. ಇದನೆಲ್ಲಾ ಮರೆತು ಒಂದಾಗಿ ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ ಎಂದಿದ್ದಾರೆ.

ಇನ್ನೂ ಸ್ವತಃ ತಮ್ಮ ಮನೆಗೆ ಹುಡುಕಿ ಬಂದ ಜಯಚಂದ್ರ ಅವ್ರನ್ನ ಭೇಟಿಯಾದ ಬಳಿಕ ಇದ್ದ ಕೋಪವನ್ನ ತಣ್ಣಗಾಗಿಸಿಕೊಂಡಂತಿರೋ ಕೆ.ಎನ್.ರಾಜಣ್ಣ, ಶಿರಾ ಉಪಚುನಾವಣೆಯಲ್ಲಿ ಜಯಚಂದ್ರರನ್ನ ಗೆಲ್ಲಿಸುವ ನಿಟ್ಟಿನಲ್ಲಿ ನಮ್ಮ‌ ಹೋರಾಟ ಅನ್ನೋ ಮೂಲಕ ಗೆಲುವಿನ ಬಾವುಟ ಹಾರಿಸಲು ಶಂಖ ಮೊಳಗಿಸಿದ್ದಾರೆ.

ಇದನ್ನೂ ಓದಿ: ಇನ್ನೊಂದು ವಾರ ರಾಜ್ಯದಲ್ಲಿ ಭಾರೀ ಮಳೆ - ಕರಾವಳಿ ಮತ್ತು ಮಲೆನಾಡಿನಲ್ಲಿ ರೆಡ್, ಆರೆಂಜ್ ಅಲರ್ಟ್ಜಯಚಂದ್ರ ಗೆಲುವಿಗಿಂತ ಇದು ಪಕ್ಷದ ಗೆಲುವಾಗಲಿದೆ. ನಮ್ಮ ನಡುವೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಕೆಲವೊಮ್ಮೆ ಸಂಶಯಗಳಿಂದಾಗಿ ವ್ಯತ್ಯಾಸವಾಗಿತ್ತು ಎಂದು ಹೇಳುವ ಮೂಲಕ ಪರಸ್ಪರ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ಸಾರಿದ್ದಾರೆ.

ಸದ್ಯ ಇಬ್ಬರು ರಾಜಕೀಯ ವೈರಿಗಳ‌ ಸ್ನೇಹ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ಜಯಚಂದ್ರ ಅವ್ರಿಗೆ ಇದ್ದ ಸ್ವಪಕ್ಷೀಯ ವಿರೋಧ ಸಹ ತಕ್ಕಮಟ್ಟಿಗೆ ಶಮನವಾದಂತಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನ ಸೆಳೆಯುತ್ತಿರೋ ಶಿರಾ ಕ್ಷೇತ್ರ ಇನ್ನೂ ಏನೆಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತೆ ಕಾದುನೊಡ್ಬೇಕಿದೆ.
Published by: Ganesh Nachikethu
First published: September 20, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading