6 ತಿಂಗಳೊಳಗೆ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡ್ತೇನೆ; ಸಿಎಂ ಬಿಎಸ್ ಯಡಿಯೂರಪ್ಪ

ಮದಲೂರು ಕೆರೆಗೆ ನೀರು ತುಂಬಿಸೋದು ಏನು ಕಷ್ಟ ಅಲ್ಲ ಮದಲೂರು ಕೆರೆಗೆ ಎಷ್ಟೇ ಖರ್ಚು ಆಗಲಿ, ಕೆರೆ ತುಂಬಿಸೋದು ಶತ ಸಿದ್ದ ಎಂದು ಪದೇ ಪದೇ ಕೆರೆಗೆ ನೀರು ತುಂಬಿಸುವ ಬಗ್ಗೆ ಸಿಎಂ ಯಡಿಯೂರಪ್ಪ ಒತ್ತಿ ಒತ್ತಿ ಹೇಳಿದರು.

news18-kannada
Updated:October 30, 2020, 2:57 PM IST
6 ತಿಂಗಳೊಳಗೆ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡ್ತೇನೆ; ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ತುಮಕೂರು(ಅ.30): ಈ ಯಡಿಯೂರಪ್ಪ ಆಡಿದ ಮಾತನ್ನು ಅಕ್ಷರಶಃ ನಡೆಸಿಕೊಡುವಂತವನು. ಇನ್ನು ಎರಡೂವರೆ ವರ್ಷಗಳಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಎಲ್ಲಾ ವರ್ಗದ ಜನರಿಗೆ ಯಾವುದೇ ಅನಾನುಕೂಲ ಆಗಬಾರದು. ಕೋವಿಡ್ ನಿಂದ ಸ್ವಲ್ಪ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇವಾಗ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಿದೆ. ಶಿರಾ ಹಾಗೂ ತುಮಕೂರು ಕ್ಷೇತ್ರಗಳನ್ನು ಮಾದರಿ ತಾಲ್ಲೂಕು ಆಗಿ ಮಾಡ್ತೇನೆ. ಚುನಾವಣೆ ಮುಗಿದ ನಂತರ ಇಲ್ಲಿ ಆಗಬೇಕಿರುವ ಕೆಲಸ ನಾನು ಮಾಡಿಕೊಡ್ತೇನೆ. ದೇವಸ್ಥಾನಕ್ಕೆ ಅನುದಾನ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಜಾತಿ ಪ್ರಶ್ನೆ ಇಲ್ಲ, ಎಲ್ಲರೂ ಚೆನ್ನಾಗಿ ಬದುಕಬೇಕು. ನಮ್ಮ ಅಭ್ಯರ್ಥಿಯನ್ನು 25- 35 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ನೀವು ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಮಗೆ ಆಗಬೇಕಿರುವ ಕೆಲಸವನ್ನು ನಾನು ಮಾಡಿಕೊಡಲು ರಾಜ್ಯದ ಸಿಎಂ ಆಗಿ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.  ಮದಲೂರು ಕೆರೆ ಮುಂಭಾಗ ಕಾರ್ಯಕ್ರಮ ಮಾಡಿರೋದು ಕೆರೆ ತುಂಬಿಸಲು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಶಿರಾದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್, ಜೆಡಿಎಸ್ ಯಾವ ಶಕ್ತಿಗಳು ನಮ್ಮ ಗೆಲುವು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್, ಜೆಡಿಎಸ್​​ನ ಹೋರಾಟ ಏನಿದ್ರು ಎರಡನೇ ಸ್ಥಾನಕ್ಕಾಗಿ ಅಷ್ಟೇ ಎಂದರು.

ದಾರಿ ತಪ್ಪಿದ ಮರಿಯಾನೆ; ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ಘಟನೆ

ಮದಲೂರು ಕೆರೆ ತುಂಬಿಸಬೇಕು ಎಂಬುದು ಬಹಳ ಜನರ ಬೇಡಿಕೆ. ಈ ಹಿಂದೆ ಸಿಎಂ ಆಗಿದ್ದಾಗ ಮದಲೂರು ಕೆರೆಗೆ ನೀರು ಬಿಡಲು ಕಾಲುವೆ ಮಾಡಲು ಹಣ ಕೊಟ್ಟಿದ್ದೆ. ಕಾಡುಗೊಲ್ಲ ಅಭಿವೃದ್ಧಿ ಕೂಡ ಮಾಡಿದ್ದೆ. ಆರು ತಿಂಗಳ ಒಳಗಾಗಿ ಮದಲೂರು ನೀರು ತುಂಬಿಸ್ತೇನೆ. ನಾನೇ ಬಂದು ಕೆರೆ ಉದ್ಘಾಟನೆ ಮಾಡ್ತೇನೆ. ನಿಮ್ಮ ಯಡಿಯೂರಪ್ಪ ಒಂದು ಸಾರಿ ಭರವಸೆ ಕೊಟ್ರೆ ಸಾಕು.  ಅದು ಒಂದು ಸಾರಿಯೂ ಹುಸಿ ಯಾಗಿಲ್ಲ ಎಂದು ಭರವಸೆ ನೀಡಿದರು.

ಈ ಹಿಂದೆ ಕೆ ಆರ್ ಪೇಟೆಯಲ್ಲಿ ಮಾತು ಕೊಟ್ಟಂತೆ ಅಭಿವೃದ್ಧಿ ಮಾಡಿದ್ದೇವೆ. ಹೇಮಾವತಿಯಿಂದ ಇಲ್ಲಿರುವ ಕೆರೆ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸ್ತೇವೆ. ಕುಂಚಿಟಗ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. 60 ಕೆರೆ ತುಂಬಿಸುವ ಭರವಸೆ ನಾನು ಕೊಡ್ತೇನೆ ಈಗಾಗಲೇ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗಳಿಗೆ ನೀರು ಕೊಡ್ತಿದ್ದೇವೆ.  ಮದಲೂರು ಕೆರೆಗೆ ನೀರು ತುಂಬಿಸೋದು ಏನು ಕಷ್ಟ ಅಲ್ಲ ಮದಲೂರು ಕೆರೆಗೆ ಎಷ್ಟೇ ಖರ್ಚು ಆಗಲಿ, ಕೆರೆ ತುಂಬಿಸೋದು ಶತ ಸಿದ್ದ ಎಂದು ಪದೇ ಪದೇ ಕೆರೆಗೆ ನೀರು ತುಂಬಿಸುವ ಬಗ್ಗೆ ಸಿಎಂ ಯಡಿಯೂರಪ್ಪ ಒತ್ತಿ ಒತ್ತಿ ಹೇಳಿದರು.

ಶಿರಾ ಒಂದೇ ಅಲ್ಲ, ರಾಜ್ಯದ ಎಲ್ಲಾ ಕ್ಷೇತ್ರದ ಜನರಿಗೆ ನಿವೇಶನ ಸಿಗಬೇಕು ಯಾರಿಗೆ ಮನೆ ಸಿಗಬೇಕು, ಅದರ ಪಟ್ಟಿ ಕೊಡಿ. 5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡ್ತೇನೆ ಎಂದು ಭರವಸೆ ನೀಡಿದರು.
Published by: Latha CG
First published: October 30, 2020, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading