ಕಾರವಾರ ಬಂದರಿನಲ್ಲಿ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಚಾಪೆಲ್ ಯುದ್ದ ನೌಕೆ; ಬೇಕಿದೆ ಕಾಯಕಲ್ಪ
ಸದ್ಯ ಈಗಿರುವ ನೌಕೆಗಳ ಸಂರಕ್ಷಣೆಯೇ ಸೂಕ್ತವಾಗಿ ಆಗುತ್ತಿಲ್ಲ. ಈ ನಡುವೆ ಮತ್ತೊಂದು ಯುದ್ದ ನೌಕೆ ತರಲು ಮುಂದಾಗಲಾಗಿದೆ. ಅದಕ್ಕೂ ಮೊದಲು ಇಲ್ಲಿರುವ ಯುದ್ದ ನೌಕೆಗೆ ಕಾಯಕಲ್ಪ ಸಿಗಬೇಕಿದೆ.
news18-kannada Updated:September 26, 2020, 7:32 AM IST

ಚಪೆಲ್ ಯುದ್ದ ವಿಮಾನ
- News18 Kannada
- Last Updated: September 26, 2020, 7:32 AM IST
ಕಾರವಾರ (ಸೆ.26): ಯುದ್ಧದ ಸಮಯದಲ್ಲಿ ವಿರೋಧಿಗಳಿಗೆ ಸಿಂಹ ಸ್ವಪ್ನವಾಗಿ ಚಾಪೆಲ್ ಯುದ್ದ ನೌಕೆ ಹೋರಾಡಿತ್ತು. ಇತಿಹಾಸದ ಪುಟ ಸೇರಿದ ಈ ಯುದ್ದ ನೌಕೆ ಈಗ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇಂಡೋ-ಪಾಕ್ ಯುದ್ದದ ವೇಳೆ ದೇಶದ ಗೌರವ ಹೆಚ್ಚಿಸಿ, ರಕ್ಷಣೆ ಹೋರಾಡಿದ ಈ ಯುದ್ದ ನೌಕೆಗೆ ಈಗ ಸುರಕ್ಷತೆಯ ಆಸರೆ ಬೇಕಾಗಿದೆ. ಇಲ್ಲಿನ ವಾರ್ ಶಿಪ್ ಮ್ಯೂಸಿಯಂ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಆದರೆ, ಕೊರೋನಾ ಕರಿನೆರಳು ಈ ಮ್ಯೂಸಿಯಂ ಮೇಲೆ ಕರಿಛಾಯೆ ಬೀರಿದೆ. ಪರಿಣಾಮ ಲಾಕ್ಡೌನ್ ಬಳಿಕ ಈ ಮ್ಯೂಸಿಯಂಗೆ ಸೂಕ್ತ ರಕ್ಷಣೆಯಿಲ್ಲದೇ ಸೊರಗುತ್ತಿದೆ. ಇದರಿಂದ ಹಡಗಿನ ನ ಕೆಲ ಭಾಗಗಳು ತುಕ್ಕು ಹಿಡಿದಿದೆ. ಅಲ್ಲದೇ ನೌಕೆ ಕೆಲ ಆವರಣದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದುಕೊಂಡಿದ್ದು, ಕಾಡಿನ ನಡುವೆ ವಾರ್ ಶಿಪ್ ಇದೆ ಎಂದು ಬಾಸವಾಗುತ್ತಿದೆ. ಕಳೆದ ಆರು ತಿಂಗಳಿಂದ ಈ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಯಾವುದೇ ನಿರ್ವಹಣೆ ಇಲ್ಲದೆ ಸುರಿಯುವ ಮಳೆಯಲ್ಲಿ ಹಡಗು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಮಳೆಯಿಂದ ರಕ್ಷಣೆ ನೀಡಲು ಇದಕ್ಕೆ ಮೇಲಗಡೆ ತಾಡಪಲ್ ಹಾಕಲಾಗಿದ್ದರೂ, ಅದು ಕೂಡಾ ಹಾನಿಗೊಂಡಿದೆ. ಲಾಕ್ಡೌನ್ ಬಳಿಕವೂ ಇದರ ನಿರ್ವಹಣೆ ಸರಿಯಾಗಿ ಆಗದೆ ದೇಶದ ಹೆಮ್ಮೆ ಹೆಚ್ಚಿಸಿದ್ದ ಯುದ್ಧನೌಕೆ ಸೊರಗುತ್ತಿದೆ.
ಲಾಕ್ಡೌನ್ಗೂ ಮುನ್ನ ವರ್ಷಕ್ಕೆ ಒಮ್ಮೆ ಯುದ್ಧ ನೌಕೆಗಳಿಗೆ ಸುಣ್ಣ ಬಣ್ಣ ಹೊಡೆಯುವ ಕಾರ್ಯ ನಡೆಯುತ್ತಿತ್ತು. ಆದರೆ. ಈಗ ಕಾರ್ಮಿಕರಿಲ್ಲದೇ ನೌಕೆಗಳು ತುಕ್ಕು ಹಿಡಿಯುತ್ತಿವೆ. ಇಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದೆ ಹಿನ್ನಲೆ ಅವರೆಲ್ಲಾ ಕೆಲಸ ತೊರೆದಿದ್ದಾರೆ. ಇವರನ್ನು ಪುನಃ ನೇಮಕ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಜಿಲ್ಲಾಡಳಿತದ ಹಣದ ಸಮಸ್ಯೆ ಎದುರಿಸುತ್ತಿದ್ದು, ಇದರಿಂದಾಗಿ ಈ ಅವಸ್ಥೆ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೌಕೆಗಳ ನಿರ್ವಹಣೆ, ಸಿಬ್ಬಂದು ನಿರ್ವಹಣೆಗೆ ಹಣ ವಿಲ್ಲದ ಹಿನ್ನಲೆ ಈ ತೊಂದರೆಯಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯುವ ಪಾತ್ರ ನಡೆದಿಲ್ಲ ಎನ್ನಲಾಗಿದೆ.
ಇದನ್ನು ಓದಿ: ದೇವರು ಇನ್ನೊಂದು ಜನ್ಮ ಕೊಟ್ಟರೆ ಕನ್ನಡಿಗನಾಗಿ ಹುಟ್ಟಲು ಬಯಸುತ್ತೇನೆ ಎಂದಿದ್ದರು ಎಸ್ಪಿಬಿ
ಸದ್ಯ ಈಗಿರುವ ನೌಕೆಗಳ ಸಂರಕ್ಷಣೆಯೇ ಸೂಕ್ತವಾಗಿ ಆಗುತ್ತಿಲ್ಲ. ಈ ನಡುವೆ ಮತ್ತೊಂದು ಯುದ್ದ ನೌಕೆ ತರಲು ಮುಂದಾಗಲಾಗಿದೆ. ಅದಕ್ಕೂ ಮೊದಲು ಇಲ್ಲಿರುವ ಯುದ್ದ ನೌಕೆಗೆ ಕಾಯಕಲ್ಪ ಸಿಗಬೇಕಿದೆ.
ಲಾಕ್ಡೌನ್ಗೂ ಮುನ್ನ ವರ್ಷಕ್ಕೆ ಒಮ್ಮೆ ಯುದ್ಧ ನೌಕೆಗಳಿಗೆ ಸುಣ್ಣ ಬಣ್ಣ ಹೊಡೆಯುವ ಕಾರ್ಯ ನಡೆಯುತ್ತಿತ್ತು. ಆದರೆ. ಈಗ ಕಾರ್ಮಿಕರಿಲ್ಲದೇ ನೌಕೆಗಳು ತುಕ್ಕು ಹಿಡಿಯುತ್ತಿವೆ. ಇಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದೆ ಹಿನ್ನಲೆ ಅವರೆಲ್ಲಾ ಕೆಲಸ ತೊರೆದಿದ್ದಾರೆ. ಇವರನ್ನು ಪುನಃ ನೇಮಕ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.