ಚಾಮರಾಜನಗರ: ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಹೆಣ ಹಿಡಿದು ನದಿ ದಾಟಬೇಕು!; ಕಣ್ಮುಚ್ಚಿ ಕುಳಿತಿದ್ದಾರೆ ಶಾಸಕರು

ಕೊಳ್ಳೇಗಾಲದ  ಹಾಲಿ ಶಾಸಕ ಎನ್ ಮಹೇಶ್ ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅವರು ಶಾಸಕರಾಗಿ ಎರಡು ವರ್ಷ ಮುಗಿಯುತ್ತಾ ಬಂದಿದ್ದರೂ ಭರವಸೆ ಕೇವಲ ಭರವಸೆಯಾಗಿಯೇ ಉಳಿದು ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

news18-kannada
Updated:August 24, 2020, 1:21 PM IST
ಚಾಮರಾಜನಗರ: ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಹೆಣ ಹಿಡಿದು ನದಿ ದಾಟಬೇಕು!; ಕಣ್ಮುಚ್ಚಿ ಕುಳಿತಿದ್ದಾರೆ ಶಾಸಕರು
ನದಿಯಲ್ಲಿ ಹೆಣ ಹೊತ್ತು ಸಾಗುತ್ತಿರುವ ಗ್ರಾಮಸ್ಥರು
  • Share this:
ಚಾಮರಾಜನಗರ (ಆಗಸ್ಟ್ 24) ಈ  ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಅಂತ್ಯ ಸಂಸ್ಕಾರಕ್ಕೆ  ಶವ ಹೊತ್ತು ನದಿಯ ನೀರಿನ ನಡುವೆ  ಹಾಯ್ದು ಜಮೀನುಗಳಿಗೆ ಹೋಗಬೇಕು.ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಹೌದು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ಮಾಂಬಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ,  ಇಂತಹ ಗಂಭೀರ ಸಮಸ್ಯೆ ಇದ್ದರೂ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.  

ಮಳೆಗಾಲದಲ್ಲಿ ರಭಸವಾಗಿ ಹರಿಯುವ ಸುವರ್ಣಾವತಿ ನದಿ ದಾಟಲು ಹರಸಾಹಸ ಮಾಡಬೇಕು.ನೀರಿನ ಸೆಳೆತ ಜಾಸ್ತಿ ಇರುವುದರಿಂದ ಶವ ಹೊತ್ತು ಸಾಗುವುದಂತು ಬಹಳ ಅಪಾಯಕಾರಿ. ಹಾಗಾಗಿ ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಣ ಹೊರುವವರು ಜೀವ ಕೈಯಲ್ಲಿ ಹಿಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು. ಆದರೆ ಶವ ಹೊತ್ತೊಯ್ಯುವಾಗ  ಸ್ವಲ್ಪ ಯಾಮಾರಿದರು ಹೆಣ ಹೊರುತ್ತಿರುವವರೇ ಹೆಣವಾದರೂ ಆಶ್ಚರ್ಯವಿಲ್ಲ.

ಗ್ರಾಮದ ಸರ್ವೆ ನಂಬರ್ 887 ಹಾಗು 888/1 ರಲ್ಲಿ ವಿವಿಧ ಸಮುದಾಯಗಳ ಸ್ಮಶಾನಕ್ಕೆ  7 ಎಕರೆ 16 ಗುಂಟೆ ಸರ್ಕಾರಿ  ಭೂಮಿಯನ್ನು  ಮಂಜೂರು ಮಾಡಲಾಗಿತ್ತು. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಇದು ತಮಗೆ ಸೇರಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದಾರೆ.ಆದರೆ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆ ಗಳನ್ನು ಒದಗಿಸಿ ತ್ವರಿತಗತಿಯಲ್ಲಿ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ನದಿ ಮದ್ಯೆ ಶವ ಹೊತ್ತು ಹೆಣಗಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಕೊಳ್ಳೇಗಾಲದ  ಹಾಲಿ ಶಾಸಕ ಎನ್ ಮಹೇಶ್ ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅವರು ಶಾಸಕರಾಗಿ ಎರಡು ವರ್ಷ ಮುಗಿಯುತ್ತಾ ಬಂದಿದ್ದರೂ ಭರವಸೆ ಕೇವಲ ಭರವಸೆಯಾಗಿಯೇ ಉಳಿದು ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.  ಮಾಜಿ ಶಾಸಕ ಜಯಣ್ಣ ಇದೇ ಗ್ರಾಮದವರು. ತಮ್ಮ ಅವಧಿಯಲ್ಲಿ ತಮ್ಮೂರಿನ  ಸಮಸ್ಯೆಪರಿಹರಿಸುವಲ್ಲಿ ಅವರೂ ಸಹ ವಿಫಲರಾಗಿದ್ದರು.

ಇದನ್ನೂ ಓದಿ: Jr. YAsh: ಜೂ. ಯಶ್​ಗೆ ಏನು ಹೆಸರಿಡ್ತಾರಂತೆ ಗೊತ್ತಾ?; ರಾಧಿಕಾ ಪಂಡಿತ್ ಕೊಟ್ರು ಸುಳಿವು

ಸ್ಮಶಾನ ಸಮಸ್ಯೆಗೆ ಸಂಬಂಧಿಸಿದಂತೆ ನ್ಯೂಸ್ 18 ಜೊತೆ ಮಾತನಾಡಿದ  ಜಿಲ್ಲಾಧಿಕಾರಿ ಎಂ.ಆರ್.ರವಿ, ಪ್ರಕರಣ ಹೈಕೋರ್ಟ್ ನಲ್ಲಿದೆ. ನಾಲ್ಕು ವರ್ಷಗಳಿಂದ ವಿಳಂಬವಾಗುತ್ತಿರುವುದು ಸಹ ತಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಅಗತ್ಯ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿ ಆದಷ್ಟು ಬೇಗ ಪ್ರಕರಣ ಇತ್ಯರ್ಥ ಆಗುವಂತೆ ಕ್ರಮ ವಹಿಸಲು ಕೊಳ್ಳೇಗಾಲ ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ, ಎಂದು ತಿಳಿಸಿದರು.
ಹಾಲಿ ಚಾಮರಾಜನಗರ ಜಿಲ್ಲಾಧಿಕಾರಿ ಯಾಗಿರುವ ಡಾ.ಎಂ.ಆರ್.ರವಿ ಮೂಲತಃ ಇದೇ ಗ್ರಾಮದವರು.  ಇವರಾದರೂ ಈ ಸಮಸ್ಯೆಗೆ ಮುಕ್ತಿ ಹಾಡಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
Published by: Rajesh Duggumane
First published: August 24, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading