ಚಾಮರಾಜನಗರದಲ್ಲಿ ಮುಂದುವರಿದ ಪೊಲೀಸ್ ಕಾರ್ಯಾಚರಣೆ; 3 ಲಕ್ಷ ರೂ ಮೌಲ್ಯದ ಗಾಂಜಾ ಸೊಪ್ಪು ವಶ

ಗಾಂಜಾ ಸಾಗಿಸುತ್ತಿದ್ದ ಕಾರು ಹಾಗೂ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

news18-kannada
Updated:September 14, 2020, 2:08 PM IST
ಚಾಮರಾಜನಗರದಲ್ಲಿ ಮುಂದುವರಿದ ಪೊಲೀಸ್ ಕಾರ್ಯಾಚರಣೆ; 3 ಲಕ್ಷ ರೂ ಮೌಲ್ಯದ ಗಾಂಜಾ ಸೊಪ್ಪು ವಶ
ಗಾಂಜಾ ಸೊಪ್ಪು
  • Share this:
ಚಾಮರಾಜನಗರ (ಸೆ.14): ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವಿದ್ದು ಇಲ್ಲಿ ಬೆಳೆಯುವ  ಬೆಳೆಯುವ ಗಾಂಜಾ ಸೊಪ್ಪಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ ಇದೆ ಎಂಬ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ  ಹೆಚ್ಚು ಹೆಚ್ಚು ಕಾರ್ಯಾಚರಣೆ  ನಡೆಸಿ ಗಾಂಜಾ ದಂಧೆಯನ್ನು ತಳಮಟ್ಟದಲ್ಲೇ ಮಟ್ಟ ಹಾಕಬೇಕೆಂದು ಇತ್ತೀಚೆಗಷ್ಟೇ ಗೃಹಸಚಿವರು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ  ಗಾಂಜಾ ಬೆಳೆಯುವ ಪ್ರದೇಶಗಳನ್ನು ಪತ್ತೆಹಚ್ಚಲು ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿರುವ ಚಾಮರಾಜನಗರ ಪೊಲೀಸರು ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಮೂರು ಲಕ್ಷ ರೂಪಾಯಿ  ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ಚಾಮರಾಜನಗರ ತಾಲೋಕು ಕಾಡಂಚಿನ ಗ್ರಾಮ ಬೆಲವತ್ತ  ಬಳಿ ಮೇಲ್ಮಾಳದ ಸರ್ವೆ ನಂಬರ್ 312 ರಲ್ಲಿ ಪಾಳು ಬಿದ್ದಿದ್ದ ಜಮೀನೊಂದರಲ್ಲಿ  ಶನಿವಾರಮುಂಟಿ ಗ್ರಾಮದ ಜಡೇಗೌಡ ಹಾಗೂ ಬೆಲವತ್ತ ಗ್ರಾಮದ ಮಾದಯ್ಯ ಎಂಬುವರು ಅಕ್ರಮವಾಗಿ  ಗಾಂಜಾ ಬೆಳೆದಿದ್ದರು. ಇದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ರಾಮಸಮುದ್ರ ಪೂರ್ವ ಗ್ರಾಮಾಂತರ  ಪೊಲೀಸರು 26 ಕೆ.ಜಿ 800 ಗ್ರಾಂ ತೂಕದ 134 ಗಾಂಜಾಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರಮುಂಟಿ  ಗ್ರಾಮದ ಜಡೇಗೌಡನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿದ ಚಾಮರಾಜನಗರ ಎಸ್ಪಿ ದಿವ್ಯಸಾರಥಾಮಸ್ , ಚಾಮರಾಜನಗರ ಜಿಲ್ಲೆಯಿಂದ ಬೆಂಗಳೂರಿಗೆ  ಗಾಂಜಾ ಸರಬರಾಜಾಗುತ್ತಿರುವ  ಬಗ್ಗೆ ಶಂಕೆ ಇದ್ದು  ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.  ಈ ಸಪ್ಲೈ ಚೈನ್ ಕಟ್ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು .

ಜಮೀರ್​ ಅಹಮ್ಮದ್​ ಅವರಿಗೆ ಸುಳ್ಳೇ ಮನೆ ದೇವರು; ಸಚಿವ ಸಿ.ಟಿ. ರವಿ

ಮೂರು ದಿನಗಳ ಹಿಂದೆಯಷ್ಟೇ  ಸೈಬರ್, ಎಕನಾಮಿಕ್ ಹಾಗು ನಾರ್ಕೋಟಿಕ್ ಕ್ರೈಂ ಪೊಲೀಸರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ  ನಾಲ್ವರನ್ನು ಬಂಧಿಸಿ 2 ಕೆ.ಜಿ ಒಣಗಾಂಜಾ ವಶಪಡಿಸಿಕೊಂಡಿದ್ದರು ಚಾಮರಾಜನಗರದ ಗಾಳೀಪುರ ಬಡಾವಣೆಯ ಸಯ್ಯದ್ ರುಮಾನ್, ಮಹಮದ್ ಅಲ್ತಾಫ್ , ಹನೂರಿನ  ವೆಂಕಟೇಗೌಡ ಹಾಗು ಕುರಟ್ಟಿ ಹೊಸೂರಿನ ಗೋವಿಂದರಾಜು ಎಂಬುವರು ಗಾಂಜಾ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಾಗ ಚಾಮರಾಜನಗರ ತಾಲೂಕು ದೊಡ್ಡರಾಯಪೇಟೆ ಬಳಿ  ಬಲೆ ಬೀಸಿ ಆರೋಪಿಗಳನ್ನು ಬಂಧಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಗಾಂಜಾ ಸಾಗಿಸುತ್ತಿದ್ದ ಕಾರು ಹಾಗೂ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಬೆಲವತ್ತ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಬಂಧಿತರಾಗಿರುವ ಗಾಂಜಾ ಪೆಡ್ಲರ್ ಗಳಿಗೆ ಚಾಮರಾಜನಗರ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾಥಾಮಸ್, ಗಾಂಜಾ ಬೆಳೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ರಾಮಸಮುದ್ರ ಪೂರ್ವಠಾಣೆ ಪೊಲೀಸ್ ತಂಡಕ್ಕೆ ವೈಯಕ್ತಿಕವಾಗಿ 20 ಸಾವಿರ ರೂಪಾಯಿ  ಹಾಗೂ ಅಕ್ರಮ ಗಾಂಜಾ ಸಾಗಣೆ ಪತ್ತೆ ಹಚ್ಚಿದ ಸಿಇಎನ್ ಪೊಲೀಸರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ನೀಡಿದರು.
Published by: Latha CG
First published: September 14, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading