ಪ್ರಸಾದ ಎಂದು ನಂಬಿಸಿ ಕೆಎಸ್​​ಆರ್​ಟಿಸಿ ಚಾಲಕರಿಂದ ಬ್ರೌನ್​ಶುಗರ್​ ಸಾಗಾಟ; ಆರೋಪಿ ಬಂಧನ

ಡ್ರಗ್ಸ್ ಜಾಲದ ಬೆನ್ನತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು , ಇಂದು 50 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

news18-kannada
Updated:September 17, 2020, 5:48 PM IST
ಪ್ರಸಾದ ಎಂದು ನಂಬಿಸಿ ಕೆಎಸ್​​ಆರ್​ಟಿಸಿ ಚಾಲಕರಿಂದ ಬ್ರೌನ್​ಶುಗರ್​ ಸಾಗಾಟ; ಆರೋಪಿ ಬಂಧನ
ಆರೋಪಿ ವಿಕ್ರಮ್​ ಬಿಲೇರಿ
  • Share this:
ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಕಾವು ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಪಟ್ಟವರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಈ ನಡುವೆ ನಗರದಲ್ಲಿ ಈ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಇದರ ಜಾಲ ಬೇಧಿಸಲು ಪಣತೊಟ್ಟಿದ್ದಾರೆ. ಈ ನಡುವೆ ಹೆಲ್ಮೆಟ್​ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಸಿಟಿ ಮಾರುಕಟ್ಟೆ ಬಳಿ ಹೆಲ್ಮೆಟ್ ಒಳಗೆ ಈತ ಬ್ರೌನ್ ಶುಗರ್ ಪ್ಯಾಕೇಟ್​ಗಳನ್ನು ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಈತನ ಬಳಿಯಿದ್ದ 6 ಸಾವಿರ ಮೌಲ್ಯ 90 ಗ್ರಾಂನ ಬ್ರೌನ್ ಶುಗರ್ ಪ್ಯಾಕೇಟ್​ಗಳನ್ನು ವಶಪಡಿಸಿ ಕೊಂಡಿದ್ದಾರೆ. ಆತನ ತೀವ್ರ ವಿಚಾರಣೆ ನಡೆಸಿದ್ದು, ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಕ್ರಮ್ ಬಿಲೇರಿ ಎಂದು ಗುರುತಿಸಲಾಗಿದ್ದು, ಈತ ಪ್ರಸಾದ ಎಂದು ಬ್ರೌನ್ ಶುಗರ್​ ಅನ್ನು ಕೆಎಸ್ಆರ್​ಟಿಸಿ ಬಸ್​ನಲ್ಲಿಯೇ ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ವಿಕ್ರಮ್ ಬಿಲೇರಿ ಮಾರ್ಕೆಟ್ ಬಳಿಯ ಷಟ್ನೂಲ್ ಪೇಟೆ ಬಳಿ ಬ್ರೌನ್ ಶುಗರ್ ಮಾರಾಟಕ್ಕೆ ಯತ್ನ ಮಾಡುವಾಗ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ

ಪ್ರಸಾದ ರೂಪದಲ್ಲಿ ಸಾಗಾಟ:
ಇನ್ನು ಈತ ಈ ಬ್ರೌನ್ ಶುಗರ್​ಗಳನ್ನು ಪ್ರಸಾದದ ರೂಪದಲ್ಲಿ ಸರ್ಕಾರಿ ಸಿಬ್ಬಂದಿಗಳ ಕೈಯಿಂದಲೇ ಸಾಗಾಟ ಮಾಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಚಾಲಕರಿಗೆ ಪ್ರಸಾದ ಎಂದೇಳಿ ಈತ ಬೇರೆ ಸ್ಥಳಕ್ಕೆ ಕಳುಹಿಸುತ್ತಿದ್ದ. ಚಾಲಕ ಸಿಬ್ಬಂದಿಗೆ 100 ಹಣ ನೀಡಿ ನಮ್ಮವರಿಗೆ ತಲುಪಿಸಿ ಎನ್ನುತ್ತಿದ್ದ. ಈ ಬಗ್ಗೆ ಮಾಹಿತಿ ಅರಿಯದ ಚಾಲಕರು ಕೂಡ ಇದರ ಸಾಗಾಟ ಮಾಡುತ್ತಿದ್ದರು.

ಇದನ್ನು ಓದಿ: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾದ ಕಿಂಗ್​ ಪಿನ್​ ಯಾರು ಗೊತ್ತಾ?; ಕೊನೆಗೂ ಹೊರಬಿತ್ತು ಹೆಸರು

ಬಸ್ ನಿಲ್ದಾಣದವರೆಗೆ ಈತ ಬ್ರೌನ್ ಶುಗರ್ ಪ್ಯಾಕೇಟ್​ಗಳನ್ನು ಹೆಲ್ಮೆಟ್​ನಲ್ಲಿ ಮುಚ್ಚಿಟ್ಟುಕೊಂಡು ಬರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಇದೇ ರೀತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗ್ನ ಪತ್ರಿಕೆ ಒಳಗೆ  ಡ್ರಗ್ಸ್ ಇಟ್ಟು ಸಾಗಾಟ ಮಾಡುವ ಯತ್ನ ನಡೆಸಿದ್ದು, ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು.ಮೂವರು ಡ್ರಗ್ ಪೆಡ್ಲರ್ ಬಂಧನ:
ಡ್ರಗ್ಸ್ ಜಾಲದ ಬೆನ್ನತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು , ಇಂದು 50 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಡ್ರಗ್ಸ್ ವಿರುದ್ಧ ಕಾರ್ಯಚಾರಣೆ ಮುಂದುವರೆದಿದ್ದು, ಸಿಸಿಬಿ ಮಾದಕ ದ್ರವ್ಯಗಳ ನಿಯಂತ್ರಣ ಘಟಕ ಮೂವರು ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಇವರ ಬಳಿಯಿದ್ದ 90 ಕೆಜಿ ಮರಿಜುವಾನ ಹಾಗೂ 50 ಲಕ್ಷದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
Published by: Seema R
First published: September 17, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading