ದೆಹಲಿಯಿಂದ ಕೋಲಾರಕ್ಕೆ ರೈಲಿನಲ್ಲಿ ಆಗಮಿಸಿದ ಗೋವುಗಳು; ಹಸುಗಳಿಗಾಗಿ 6 ವಿಶೇಷ ಕೋಚ್​ ವ್ಯವಸ್ಥೆ

ಕೊರೋನಾ ಅನ್ ಲಾಕ್​ ಸಮಯದಲ್ಲಿಯೂ ವಿಶೇಷ ರೈಲಿನಲ್ಲಿ, ಹೆಚ್ಚಿನ ಕೋಚ್ ಗಳನ್ನು ಹಸುಗಳನ್ನ ರವಾನಿಸಲು ಸಹಕರಿಸಿದ,  ರೈಲ್ವೆ ಇಲಾಖೆ ಹಾಗೂ ಸಂಸದರಿಗೆ ಗೋಪಾಲಕರು ಧನ್ಯವಾದಗಳನ್ನು  ತಿಳಿಸಿದ್ದಾರೆ

news18-kannada
Updated:September 22, 2020, 7:36 AM IST
ದೆಹಲಿಯಿಂದ ಕೋಲಾರಕ್ಕೆ ರೈಲಿನಲ್ಲಿ ಆಗಮಿಸಿದ ಗೋವುಗಳು; ಹಸುಗಳಿಗಾಗಿ 6 ವಿಶೇಷ ಕೋಚ್​ ವ್ಯವಸ್ಥೆ
ಆರೈಕೆ ಕೇಂದ್ರಕ್ಕೆ ಬಂದು ಸೇರಿದ ಹಸುಗಳು
  • Share this:
ಕೋಲಾರ (ಸೆ.21): ಜನಸಾಮಾನ್ಯರ ಮನವಿಗೆ ತಕ್ಷಣ ಸ್ಪಂದಿಸುವ ಮೂಲಕ ರೈಲ್ವೆ ಇಲಾಖೆ ಸಾಕಷ್ಟು ಹೆಸರು ಮಾಡಿದೆ. ಈ ಬಾರಿ ಕೂಡ ಗೋಪಾಲಕರ ಮನವಿ ಪುರಸ್ಕರಿಸಿದ ರೈಲ್ವೆ ಇಲಾಖೆ ದೆಹಲಿಯಿಂದ ಹಸು ಸಾಗಾಣೆಗಾಗಿ ಆರು ವಿಶೇಷ ಕೋಚ್​ ವ್ಯವಸ್ಥೆ ಮಾಡಿದ್ದು, ಮೆಚ್ಚುಗೆ ಪಡೆದಿದೆ.  ದುಬಾರಿ ಬೆಲೆಯ ಹೈಬ್ರಿಡ್ ತಳಿಯ ಹಸುಗಳು ಕೋಲಾರ ನಗರದ ನಿವಾಸಿಗಳಾದ ವೆಂಕಟೇಶ್,  ಶಬರೀಶ್, ಸುನಿಲ್ ಅವರದ್ದು.ಹಸುವಿನ ವಹಿವಾಟು ನಡೆಸುವ ಇವರು 116  ಹಸುಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಖರೀದಿ ಮಾಡಿದ್ದರು. ಕ್ಯಾಂಟರ್, ಟ್ರಕ್‍ಗಳಲ್ಲಿ ಹಸುಗಳನ್ನ ರವಾನಿಸಿದರೆ, ಜಾನುವಾರುಗಳ ಜೀವಕ್ಕೆ ಹಾನಿಯಾಗುವ ಭೀತಿಯಿಂದ, ರೈಲು ವ್ಯವಸ್ಥೆ ಕಲ್ಪಿಸುವಂತೆ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರ ಸಹಾಯ ಕೋರಿದ್ದರು, ಹೀಗಾಗಿ ದೆಹಲಿಗೆ ಅನ್ಯ ಕಾರ್ಯದ ನಿಮಿತ್ತ ತೆರಳಿದ್ದ ಸಂಸದರು,  ಖುದ್ದು ರೈಲ್ವೆ ಸಚಿವರ ಜೊತೆಗೆ ಮಾತನಾಡಿ, ನಂತರ ದೆಹಲಿಯ ರೈಲ್ವೆ ಭವನಕ್ಕೂ ಭೇಟಿ ನೀಡಿ ಹಸುಗಳನ್ನು  ಚಿನ್ನದ ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಗೋವುಗಳನ್ನ ಸಾಗಿಸುವ ದೃಷ್ಟಿಯನ್ನ ಅರಿತ ರೈಲ್ವೆ ಇಲಾಖೆಯ ಅಧಿಕಾರಿಗಳು, ಇದಕ್ಕೆ ಅಸ್ತು ಎಂದಿದ್ದಾರೆ. ದೆಹಲಿಯಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ಮಾರ್ಗವಾಗಿ ಆಗಮಿಸುವ ರೈಲಿಗೆ, ಹೆಚ್ಚುವರಿ 6 ರೈಲ್ವೆ ಕೋಚ್‍ಗಳನ್ನ ಸೇರಿಸಿ ಸುಮಾರು 116 ಹಸುಗಳನ್ನ ಕೋಲಾರಕ್ಕೆ ತಲುಪಿಸಲು ಸಹಾಯ ಮಾಡಿದ್ದಾರೆ. ನಿರೀಕ್ಷೆಯಂತೆ  ಹಸುಗಳು  ಜಿಲ್ಲೆಗೆ ಬಂದು ತಲುಪಿದ್ದು, ಗೋಪಾಲಕರೇ ಪ್ರಯಾಣದ ಸಂಪೂರ್ಣ ವೆಚ್ಚವನ್ನ ಭರಿಸಿದ್ದಾರೆ.

cattles comes to kolar by Indian railway
ಆರೈಕೆ ಕೇಂದ್ರಕ್ಕೆ ಬಂದು ಸೇರಿದ ಹಸುಗಳು


ಕೊರೋನಾ ಅನ್ ಲಾಕ್​ ಸಮಯದಲ್ಲಿಯೂ ವಿಶೇಷ ರೈಲಿನಲ್ಲಿ, ಹೆಚ್ಚಿನ ಕೋಚ್ ಗಳನ್ನು ಹಸುಗಳನ್ನ ರವಾನಿಸಲು ಸಹಕರಿಸಿದ,  ರೈಲ್ವೆ ಇಲಾಖೆ ಹಾಗೂ ಸಂಸದರಿಗೆ ಗೋಪಾಲಕರು ಧನ್ಯವಾದಗಳನ್ನು  ತಿಳಿಸಿದ್ದಾರೆ.  ಸದ್ಯ ಹಸುಗಳನ್ನು  ನಗರ ಹೊರವಲಯದ ಬುಸುನಹಳ್ಳಿ ಗ್ರಾಮದ ವೆಂಕಟೇಶ್ವರ ಪಾರಂನಲ್ಲಿ ಆರೈಕೆ ಮಾಡಲಾಗುತ್ತಿದೆ. ಸ್ಥಳಕ್ಕೆ ಸಂಸದ ಎಸ್ ಮುನಿಸ್ವಾಮಿ ಭೇಟಿ ನೀಡಿ ಹಸುಗಳನ್ನ ವೀಕ್ಷಿಸಿ, ಯೋಗಕ್ಷೇಮವನ್ನ ವಿಚಾರಿಸಿದರು,

ದೆಹಲಿಯಿಂದ‌ ಖರೀದಿಸಿದ ಹಸುಗಳು  50 ಸಾವಿರದಿಂದ 3 ಲಕ್ಷದ ವರೆಗು ಬೆಲೆಬಾಳುವ ವಿವಿಧ ತಳಿಯ ಹಸುಗಳನ್ನ ಖರೀದಿ ಮಾಡಿ ಮಾಡಲಾಗಿತ್ತು. ಇದರಲ್ಲಿ 48 ಕ್ಕೂ ಹೆಚ್ಚು ಲೀಟರ್ ಹಾಲು ಕರೆಯುವ ಹಸುಗಳಿವೆ.

ಇದೇ ವೇಳೆ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ ಗೋವುಗಳನ್ನ  ರಕ್ಷಿಸಲು ನಾವು ಸದಾ  ಬದ್ದರಾಗಿದ್ದು, ಅದಕ್ಕಾಗಿಯೆ ಕೈಲಾದ ಸಹಾಯವನ್ನ ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನು ಬಯಲುಸೀಮೆ ಕೋಲಾರದಂತಹ ಜಿಲ್ಲೆಯಲ್ಲಿ ಹೈನೋದ್ಯಮ ರೈತರ ಆದಾಯಕ್ಕೆ ಮೂಲಕಾರಣವಾಗಿದೆ ಎಂದು ತಿಳಿಸಿದರು,

‌ ಮುಂದಿನ ವರ್ಷದಿಂದ ಹಾಲು ಕರೆಯುವ ರಾಜ್ಯಮಟ್ಟದಲ್ಲಿ ಸ್ಪರ್ಧೆಯನ್ನ ಕೋಲಾರ ಜಿಲ್ಲೆಯಲ್ಲಿ ನಡೆಸುವ ಕುರಿತು ಭರವಸೆ ನೀಡಿದರು, ಇತ್ತೀಚೆಗೆ ಕೋಲಾರ ಜಿಲ್ಲೆಯವರು ವಿವದೆಡೆ ಹಾಲು ಕರೆವ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದ್ದು, ಮುಂದಿನ ವರ್ಷದಿಂದ ಇಲ್ಲಿಯೇ ಹಾಲು ಕರೆವ ಸ್ಪರ್ಧೆ ನಡೆಸೋಣ, ನಾನು‌ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊರುವೆ ಎಂದು ಗೋಪಾಲಕರಿಗೆ ಭರವಸೆ ನೀಡಿದರು
Published by: Seema R
First published: September 22, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading