ನಾಳೆಯಿಂದ ಬಿಎಂಟಿಸಿ ಎಸಿ ಬಸ್​ಗಳ ಸಂಚಾರ; ಯಾವ ಮಾರ್ಗಗಳಲ್ಲಿ ಓಡಾಟ, ಷರತ್ತುಗಳೇನು?; ಇಲ್ಲಿದೆ ಮಾಹಿತಿ

ಐದನೇ ಹಂತದ ಲಾಕ್​ಡೌನ್​ ನಾಳೆಯಿಂದ ಜಾರಿಗೆ ಬರುವ ಲಕ್ಷಣ ಇದೆ. ಈ ವೇಳೆ ಸಾಕಷ್ಟು ವಿಚಾರಗಳಿಗೆ ಸರ್ಕಾರ ವಿನಾಯಿತಿ ನೀಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಹವಾನಿಯಂತ್ರಿತ ಸಾರಿಗೆ ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ನಾಳೆ ಸಂಚಾರ ಆರಂಭಿಸಲಿವೆ.

news18-kannada
Updated:May 31, 2020, 11:21 AM IST
ನಾಳೆಯಿಂದ ಬಿಎಂಟಿಸಿ ಎಸಿ ಬಸ್​ಗಳ ಸಂಚಾರ; ಯಾವ ಮಾರ್ಗಗಳಲ್ಲಿ ಓಡಾಟ, ಷರತ್ತುಗಳೇನು?; ಇಲ್ಲಿದೆ ಮಾಹಿತಿ
ವೋಲ್ವೋ ಬಸ್
  • Share this:
ಬೆಂಗಳೂರು (ಮೇ 31):  ಕೊರೋನಾ ವೈರಸ್​ ನಿಯಂತ್ರಣಕ್ಕೆ ನಾಳೆಯಿಂದ ಐದನೇ ಹಂತದ ಲಾಕ್​​ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ. ಲಾಕ್​ಡೌನ್​ ಆರಂಭವಾದಗಿನಿಂದಲೂ ವೋಲ್ವೋ ಬಸ್ಸುಗಳು ರಸ್ತೆಗೆ ಇಳಿದಿರಲಿಲ್ಲ. ಈ ಮಧ್ಯೆ ವೋಲ್ವೋ ಬಸ್​ಗಳು ಶಾಶ್ವತವಾಗಿ ಇತಿಹಾಸದ ಪುಟ ಸೇರಲಿವೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ, ನಾಳೆಯಿಂದಲೇ ‌ಆದ್ರೆ ಎಸಿ ಬಸ್ ಗಳ ಸಂಚಾರ ಆರಂಭ ಆಗಲಿದೆ.

ಐದನೇ ಹಂತದ ಲಾಕ್​ಡೌನ್​ ನಾಳೆಯಿಂದ ಜಾರಿಗೆ ಬರುವ ಲಕ್ಷಣ ಇದೆ. ಈ ವೇಳೆ ಸಾಕಷ್ಟು ವಿಚಾರಗಳಿಗೆ ಸರ್ಕಾರ ವಿನಾಯಿತಿ ನೀಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಹವಾನಿಯಂತ್ರಿತ ಸಾರಿಗೆ ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ನಾಳೆ ಸಂಚಾರ ಆರಂಭಿಸಲಿವೆ.

ಸರ್ಕಾರದ ಆದೇಶದಂತೆ ಮೊದಲ ಹಂತವಾಗಿ, ಬಿಎಂಟಿಸಿಯ 75 ವಜ್ರ (AC Volvo) ವಾಹನಗಳು ಸಂಚರಿಸಲಿವೆ. ಇನ್ನು ಎಂಟು ಮಾರ್ಗಗಳಲ್ಲಿ ಸಂಚಾರ ಆರಂಭವಾಗಲಿದೆ. ಕೆಂಪೇಗೌಡ ಬಸ್​ ನಿಲ್ದಾಣದಿಂದ ಹೊಸಕೋಟೆ ಮಾರ್ಗವಾಗಿ ಬಸ್ ಸಂಚರಿಸಲಿದೆ. ಹೀಗೆ ಕೆಂಪೇಗೌಡ ಬಸ್​ ನಿಲ್ದಾಣದಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆಗೆ ಎಸಿ ಬಸ್​ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಬಿಎಂಟಿಸಿಗೆ ಬಿಸಿ ತುಪ್ಪವಾದ ವೋಲ್ವೋ ಬಸ್ 

ಇನ್ನು, ಹೆಬ್ಬಾಳ ದಿಂದ ಬನಶಂಕರಿ, ಸಿಲ್ಕ್ ಬೋರ್ಡ್,ಬನಶಂಕರಿ ಯಿಂದ ITPL, ಮತ್ತು ಎಲೆಕ್ಟ್ರಾನಿಕ್ ಸಿಟಿ ಯಿಂದ ITPL ಕಡೆ ಸಂಚಾರ ಆರಂಭವಾಗಲಿದೆ. ಎಲ್ಲಾ ಎಸಿ ಬಸ್ ಗಳಿಗೂ ಈಗಾಗಲೇ ಅಗತ್ಯ ಸರ್ವಿಸ್ ಮಾಡಲಾಗಿದ್ದು, ಸ್ಯಾನಿಟೈಸ್ ಸಹ ಮಾಡಲಾಗಿದೆ.

ಷರತ್ತುಗಳು ಅನ್ವಯ:

ಕೊರೋನಾ ವೈರಸ್​ ಹರಡದಂತೆ ತಡೆಯಲು ಎಲ್ಲ ಕಡೆಗಳಲ್ಲೂ ಸಾಮಾಜಿಕ ಅಂತ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಈಗಾಗಲೇ ಕೆಎಸ್​ಆರ್​ಟಿಸಿ ಬಸ್​ಗಳ ಓಡಾಟಕ್ಕೂ ಅವಕಾಶ ನೀಡಿದ್ದು, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇದೇ ನಿಯಮ ಎಸಿ ಬಸ್​ಗಳಿಗೂ ಅನ್ವಯ ಆಗಲಿದೆ.ಒಂದು ಬಸ್​​ನಲ್ಲಿ ಕೇವಲ ಮೂವತ್ತು ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ಇದೆ. ಪ್ರತಿಯೊಬ್ಬರೂ ಮಾಸ್ಕ್  ಧರಿಸಬೇಕಿದೆ‌.

ರಸ್ತೆ ಇಳಿದಿರಲಿಲ್ಲ ಎಸಿ ಬಸ್​:

ಬಿಎಂಟಿಸಿಯಲ್ಲಿ ಪ್ರಸ್ತುತ 550ಕ್ಕೂ ಹೆಚ್ಚು ವೋಲ್ವೋ ಹವಾನಿಯಂತ್ರಿತ ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಕೊರೋನಾ ಸಂದರ್ಭದಲ್ಲಿ ಎಸಿ ಬಸ್ಸುಗಳು ಓಡಾಟ ನಡೆಸಿದರೆ ಕೊರೋನಾ ಸೋಂಕು ಹರಡಬಹುದು ಎನ್ನುವ ಕಾರಣಕ್ಕೆ ಬಸ್ ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎಸಿ ಬಸ್​ಗಳ ಸಂಚಾರಕ್ಕೆ ಬೇಕಾದ ಸಿದ್ಧತೆಯನ್ನ ಬಿಎಂಟಿಸಿ ಮಾಡಿಕೊಂಡಿದೆ. ಈ ಮೂಲಕ ಎರಡು ತಿಂಗಳ ನಂತರ ಈ ಬಸ್​ಗಳು ರಸ್ತೆಗೆ ಇಳಿಯುತ್ತಿವೆ.
First published: May 31, 2020, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading