Black Panther: ಕಬಿನಿ ಹಿನ್ನೀರಿನಲ್ಲಿ ಮತ್ತೆ ಪ್ರತ್ಯಕ್ಷನಾದ ಭಗೀರ; ಸಫಾರಿಯಲ್ಲಿ ಕರಿಚಿರತೆ ದರ್ಶನ

Kabini Safari: ಕಬಿನಿಯ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕರಿ ಚಿರತೆ ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಗಾಯ ಮಾಡಿಕೊಂಡು ಕಾಣೆಯಾಗಿತ್ತು.‌ಇದೀಗ ಮತ್ತೆ ಪ್ರವಾಸಿಗರಿಗೆ ದರ್ಶನ ಕೊಡುತ್ತಿರುವ ಕರಿ ಚಿರತೆ ವನ್ಯಪ್ರಿಯರಲ್ಲಿ ಸಂತಸ ಮೂಡಿಸಿದೆ.

news18-kannada
Updated:October 30, 2020, 2:01 PM IST
Black Panther: ಕಬಿನಿ ಹಿನ್ನೀರಿನಲ್ಲಿ ಮತ್ತೆ ಪ್ರತ್ಯಕ್ಷನಾದ ಭಗೀರ; ಸಫಾರಿಯಲ್ಲಿ ಕರಿಚಿರತೆ ದರ್ಶನ
ಕಬಿನಿಯ ಕರಿಚಿರತೆ
  • Share this:
ಮೈಸೂರು (ಅ. 30): ದಟ್ಟ ಕಾಡಿನಲ್ಲಿ ಸಫಾರಿ ಮಾಡೋದೇ ಒಂಥರಾ ಸಂತೋಷ. ಅದರಲ್ಲೂ ಕಬಿನಿಯಲ್ಲಿ ಸಿಗುವ ಅಪರೂಪದ ಕರಿ ಚಿರತೆ ಹಾಗೆಲ್ಲ ಸುಮ್ಮನೆ ಕಾಣುವುದಿಲ್ಲ. ಕಬಿನಿಯ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕರಿ ಚಿರತೆ ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಗಾಯ ಮಾಡಿಕೊಂಡು ಕಾಣೆಯಾಗಿತ್ತು.‌ಇದೀಗ ಮತ್ತೆ ಪ್ರವಾಸಿಗರಿಗೆ ದರ್ಶನ ಕೊಡುತ್ತಿರುವ ಕರಿ ಚಿರತೆ ವನ್ಯಪ್ರಿಯರಲ್ಲಿ ಸಂತಸ ಮೂಡಿಸಿದೆ. ಅಪರೂಪದ ಈ ಕರಿಚಿರತೆ ಸಫಾರಿ ಹೋಗುವವರ ಕೇಂದ್ರಬಿಂದುವಾಗಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಾಗರಹೊಳೆ ಅರಣ್ಯ. ಕಾಡಲ್ಲಿ ಸಫಾರಿ ವೇಳೆ ದರ್ಶನ ನೀಡುತ್ತಿರುವ ಚಿಗರೆಗಳ ಹಿಂಡು. ಹಾಗೇ ಹುಲಿ, ಚಿರತೆ, ಆನೆ, ಕಡವೆಗಳು. ಅಬ್ಬಾ ಇದರ ಜೊತೆ ಸಫಾರಿಯಲ್ಲಿ ಅಪರೂಪದ ಕರಿ ಚಿರತೆ ಸಿಕ್ಕಿದರೆ ಹೇಗೆ? ಹೌದು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ನಾಗರಹೊಳೆಯ ದಮ್ಮನ ಕಟ್ಟೆಯಲ್ಲಿ ಸಫಾರಿ ಮಾಡಿದವರಿಗೆ ಒಂಥರ ಥ್ರಿಲ್ ಆಗ್ತಿತ್ತು. ಯಾಕಂದ್ರೆ ಅಪರೂಪದಲ್ಲಿ ಸಿಗುವ ಕರಿ ಚಿರತೆ ಪ್ರವಾಸಿಗರಿಗೆ ಮುದ ನೀಡುತ್ತಿತ್ತು. ಇತ್ತೀಚೆಗಂತೂ ಪ್ರವಾಸಿಗರು ಈ ಕರಿ ಚಿರತೆ ನೋಡೋಕೆ ಅಂತಾನೆ ನಾಗರಹೊಳೆಯ ಕಬಿನಿ ಕಡೆ‌ ಮುಖ ಮಾಡ್ತಿದ್ರು. ಇಲ್ಲಿ ಬರುವ ಪ್ರವಾಸಿಗರಿಗೆ ಕರಿ ಚಿರತೆ ಪ್ರವಾಸಿಗರ ಕ್ಯಾಮರಾಕ್ಕೆ ಫೋಸ್ ಕೊಡುತ್ತಿತ್ತು‌.

Black Panther Spotted Again in Kabini Forest safari Kabini Jungle Safari.
ಕಬಿನಿಯ ಕರಿಚಿರತೆ


ಇದರಿಂದ ಪ್ರವಾಸಿಗರು ಆ ಕರಿ ಚಿರತೆಗೆ ಕರಿಯ , ಭಗೀರ ಅಂತೆಲ್ಲ ನಾಮಕರಣ ಮಾಡಿದ್ದರು. ಆದರೆ, ಕಳೆದ ಎರಡು ತಿಂಗಳ ಹಿಂದೆ ಅದು ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ತೀವ್ರ ಗಾಯಗೊಂಡಿತ್ತು. ಅದಾದ ಮೇಲೆ ಪ್ರವಾಸಿಗರಿಗೆ ಎರಡು ತಿಂಗಳಿಂದ ಕಾಣಿಸಿಕೊಂಡಿರಲಿಲ್ಲ. ಇದರಿಂದ ಮಳೆ ಇದ್ದ ಕಾರಣ ಗಾಯ ವಾಸಿಯಾಗದೆ ಚಿರತೆ ಬದುಕಿಲ್ಲ ಎಂದೇ ಸಾಕಷ್ಟು ಜನರು ತಿಳಿದಿದ್ದರು.

ಇದನ್ನೂ ಓದಿ: ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ನೀವು ಚೂರಿ ರಾಮಯ್ಯ; ಸಿದ್ದರಾಮಯ್ಯ ಬಗ್ಗೆ ಶ್ರೀರಾಮುಲು ಲೇವಡಿ

ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಭಗೀರ ಸಿಕ್ಕಿದ್ದಾನೆ. ಕಣ್ಣಿನ ಭಾಗದಲ್ಲಿ ರಕ್ತ ಸುರಿಯುವ ಫೋಟೋವನ್ನ ಕಡೆಯದಾಗಿ ಪ್ರವಾಸಿಗರು ಸೆರೆ ಹಿಡಿದಿದ್ದರು. ಆದ್ರೆ ಇದೀಗಾ ಗಾಯ ಎಲ್ಲಾ ವಾಸಿಮಾಡಿಕೊಂಡು ಮತ್ತೆ ಪ್ರವಾಸಿಗರಿಗೆ ಕಾಣಿಸುತ್ತಿದೆ. ಇದರಿಂದ ವನ್ಯಜೀವಿ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಬಿನಿ ಹಿನ್ನೀರಿನಲ್ಲಿ ಈ ಭಗೀರನ ದರ್ಶನ ಅರಣ್ಯದಲ್ಲಿ ಸಫಾರಿಗೆ ಮೆರಗು ನೀಡುತ್ತಿದೆ.

Black Panther Spotted Again in Kabini Forest safari Kabini Jungle Safari.
ಕಬಿನಿಯ ಕರಿಚಿರತೆ
ಕರಿ ಚಿರತೆ ಸಹಜವಾಗಿ ಕಾಡಿನಲ್ಲಿ ಓಡಾಡುವಾಗ ಮನುಷ್ಯರಿಗೆ ಕಾಣಿಸೋದಿಲ್ಲ, ಆದರೆ ಕಬಿನಿ ಹಿನ್ನಿರಿನಲ್ಲಿರುವ ಈ ಕರಿ ಚಿರತೆ ಸಫಾರಿ ಹೋದ ಎಲ್ಲರಿಗೂ ಗಂಟೆಗಟ್ಟಲೆ ದರ್ಶನ ನೀಡುತ್ತಿದೆ. ಅಲ್ಲದೆ ಕ್ಯಾಮರಾಗೆ ಪೋಸ್ ಕೊಡುತ್ತಾ ನಿಲ್ಲುವ ಈ ಭಗೀರ ಸಫಾರಿ ಮಾಡುವವರಿಗೆ ಹಾಟ್ ಫೇವರೇಟ್ ಪ್ರಾಣಿಯಾಗಿದೆ. ಹುಟ್ಟುವಾಗ ಕಪ್ಪು ಬಣ್ಣ ಹೊಂದಿಲ್ಲವಾದರೂ ಸಾಮಾನ್ಯ ಚಿರತೆಯ ಜಾತಿಗೆ ಸೇರುವ ಈ ಕಪ್ಪು ಚಿರತೆ. ಚರ್ಮರೋಗದ ಹಿನ್ನೆಲೆಯಲ್ಲಿ ಇಡೀ ದೇಹದ ಮೈಬಣ್ಣ ಬದಲಿಸಿಕೊಳ್ಳುತ್ತದೆ. ಇದು ಪ್ರಾಣಿಯ ಆರೋಗ್ಯಕ್ಕೆ ಹಾನಿಯಾಗದಿದ್ದರೂ ಪ್ರಾಣಿಯ ದೇಹದಲ್ಲಿ ಬದಲಾವಣೆ ತರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಒಟ್ಟಾರೆ, ಪ್ರವಾಸಿಗರ ಹಾಟ್ ಫೇವರೆಟ್ ಎನಿಸಿಕೊಂಡಿರುವ ಭಗೀರ ಇದೀಗ ಮತ್ತೆ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ವನ್ಯಜೀವಿ ಪ್ರಿಯರಿಗಂತೂ ಸಂತಸ ತಂದಿದೆ. ಕಬಿನಿ ಹಿನ್ನೀರಿನಲ್ಲಿ ಸಫಾರಿ ಮಾಡುವವರು ಕರಿಚಿರತೆಯನ್ನು ನೋಡಬಹುದಾಗಿದೆ.
Published by: Sushma Chakre
First published: October 30, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading