ಸಿದ್ದರಾಮಯ್ಯ ರ‍್ಯಾಲಿಗೆ ಅಡ್ಡಿಪಡಿಸಿದ ಹಿನ್ನಲೆ; ಮಾಜಿ‌ ಕಾರ್ಪೋರೇಟರ್ ವೆಂಕಟೇಶ್ ಪೊಲೀಸ್ ವಶಕ್ಕೆ

ಒಂದೆಡೆ ಮುನಿರತ್ನ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರೆ, ಮತ್ತೊಂದೆಡೆ ಇಡೀ ಕಾಂಗ್ರೆಸ್​ ಟೀಮ್ ಮುನಿರತ್ನ ಸೋಲಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್​​.ಆರ್​. ನಗರದಲ್ಲಿ ಸತತ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

news18-kannada
Updated:October 28, 2020, 1:28 PM IST
ಸಿದ್ದರಾಮಯ್ಯ ರ‍್ಯಾಲಿಗೆ ಅಡ್ಡಿಪಡಿಸಿದ ಹಿನ್ನಲೆ; ಮಾಜಿ‌ ಕಾರ್ಪೋರೇಟರ್ ವೆಂಕಟೇಶ್ ಪೊಲೀಸ್ ವಶಕ್ಕೆ
ಪ್ರಚಾರದ ವೇಳೆ ಸಿದ್ದರಾಮಯ್ಯ ರ‍್ಯಾಲಿಗೆ ಬಿಜೆಪಿಗರು ಅಡ್ಡಿಪಡಿಸಿರುವುದು.
  • Share this:
ಬೆಂಗಳೂರು (ಅಕ್ಟೋಬರ್​​ 28); ಪ್ರತಿಷ್ಠೆಯ ಕಣವಾಗಿರುವ ಆರ್​.ಆರ್​. ನಗರ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿ ಕುಸುಮಾ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅವರ ರ‍್ಯಾಲಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಜೆಪಿ ಮಾಜಿ ಕಾರ್ಪೋರೇಟರ್​ ವೆಂಕಟೇಶ್ ಮತ್ತು ಅವರ ಬೆಂಬಲಿಗರನ್ನು ಯಶವಂತಪುರ ಪೊಲೀಸರು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ವಿಚಾರಣೆ ಬಳಿಕ ವೆಂಕಟೇಶ್ ಅವರಿಂದ ಬಾಂಡ್ ಬರೆಸಿಕೊಳ್ಳಲಿರುವ ಪೊಲೀಸರು ನಂತರ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟುಕಳಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. 

ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ತೆರವಾಗಿದ್ದ ಆರ್ ಆರ್ ನಗರ ಕ್ಷೇತ್ರಕ್ಕೆ ಇದೀಗ ಚುನಾವಣೆ ನಿಗದಿಯಾಗಿದೆ. ನವೆಂಬರ್ 3ಕ್ಕೆ ಚುನಾವಣೆ ನಡೆಯಲಿದ್ದು, 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್​ನಿಂದ ಗೆದ್ದಿದ್ದ ಮುನಿರತ್ನ ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆಗಿಳಿಸಿದ್ದಾರೆ. ಕಾಂಗ್ರೆಸ್​ನಿಂದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ನಿಂತಿದ್ದಾರೆ. ಜೆಡಿಎಸ್​ನಿಂದ ಸ್ಥಳೀಯ ಕಾರ್ಯಕರ್ತ ವಿ. ಕೃಷ್ಣಮೂರ್ತಿ ಕಣಕ್ಕಿಳಿದಿದ್ದಾರೆ.


ಒಂದೆಡೆ ಮುನಿರತ್ನ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರೆ, ಮತ್ತೊಂದೆಡೆ ಇಡೀ ಕಾಂಗ್ರೆಸ್​ ಟೀಮ್ ಮುನಿರತ್ನ ಸೋಲಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್​​.ಆರ್​. ನಗರದಲ್ಲಿ ಸತತ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಕಳೆದ ಸೋಮವಾರ ಸಿದ್ದರಾಮಯ್ಯ ಆರ್​​ಆರ್​ ನಗರದಲ್ಲಿ ರ‍್ಯಾಲಿಯಲ್ಲಿ ತೊಡಗಿದ್ದ ವೇಳೆ ಮಾಜಿ ಬಿಜೆಪಿ ಕಾರ್ಪೋರೇಟರ್​ ವೆಂಕಟೇಶ್ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ಆಗಮಿಸಿ ರ‍್ಯಾಲಿಗೆ ಅಡ್ಡಿಪಡಿಸಿದ್ದರು. ಇದು ಸಾಮಾನ್ಯವಾಗಿ ಕಾಂಗ್ರೆಸ್​ ನಾಯಕರನ್ನು ಕೆರಳಿಸಿತ್ತು.

ಹೀಗಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, "ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪಕ್ಷಗಳಿಗೂ ಚುನಾವಣೆಯಲ್ಲಿ ನಿಲ್ಲೋ ಅವಕಾಶ ಇರುತ್ತೆ. ಹಾಗೆ ಚುನಾವಣೆ ನಿಂತ್ಮೇಲೆ ಎಲ್ರಿಗೂ ಮನೆ ಮನೆ ಪ್ರಚಾರ ಮಾಡೋ ಅವಕಾಶವೂ ಇದೆ. ಆದ್ರೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದಿಯೋ ಇಲ್ಲವೋ? ಅರ್ಥ ಆಗ್ತಿಲ್ಲ. ಮೊನ್ನೆ ಲಕ್ಷ್ಮೀ ದೇವಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ?; ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ

ನಿನ್ನೆ ಸಿದ್ದರಾಮಯ್ಯ ಚುನಾವಣೆ ಪ್ರಚಾರಕ್ಕೆ ಹೋದಾಗ ವೆಂಕಟೇಶ್ ಎಂಬ ಕಾರ್ಪೋರೇಟರ್ ಪ್ರಚಾರಕ್ಕೆ ಅಡ್ಡಿ ಪಡಿಸಿದ್ದಾರೆ, ಕಾರ್ ಗೆ ಅಡ್ಡ ಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಎಲ್ಲೇ ಕಾರ್ಯಕ್ರಮ ನಡೆಸಿದರೂ ಸಹ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಬಂದು ಅನಗತ್ಯವಾಗಿ ಮೋದಿ ಮೋದಿ ಅಂತ ಕೂಗುತ್ತಾರೆ. ಅವರು ಯಾಕೆ ನಮ್ಮ ಕಾರ್ಯಕ್ರಮಕ್ಕೆ ಬಂದು ಮೋದಿ ಮೋದಿ ಅಂತ ಕೂಗಬೇಕು. ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಇದಿಯಾ?.

ಒಬ್ರು ಮಾಜಿ ಮುಖ್ಯಮಂತ್ರಿ ಗಳು ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬರ್ತಾರೆ, ಅವ್ರಿಗೆ ಪ್ರೊಟೆಕ್ಷನ್ ಕೊಡಕಾಗಲಿಲ್ಲ ಅಂದ್ರೆ ಏನರ್ಥ? ಪ್ಯಾರಾ ಮಿಲಿಟರಿ ಕರಿಸಿರೋದ್ ಏನಕ್ಕೆ? ಇದನ್ನ ನೋಡ್ಕಂಡು ಕೂರೋದಕ್ಕಾ?" ಎಂದು ಬಿಜೆಪಿ ಮತ್ತು ಪೊಲೀಸ್​ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕೂಡಲೇ ಎಚ್ಚೆತ್ತಿರುವ ಪೊಲೀಸರು ಆರೋಪಿ ಮಾಜಿ ಕಾರ್ಪೋರೇಟರ್​​ ವೆಂಕಟೇಶ್​ ಅವರನ್ನು ಇಂದು ಬಂಧಿಸಿದ್ದಾರೆ.
Published by: MAshok Kumar
First published: October 28, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading