Bengaluru Violence - ಬೆಂಗಳೂರು ಗಲಭೆ: 9 ಎಫ್ಐಆರ್, 17 ಆರೋಪಿಗಳು – ನಾಲ್ವರ ಬಂಧನ

ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಹೆಸರಿಸಲಾಗಿರುವ 17 ಆರೋಪಿಗಳ ಪೈಕಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಅಬ್ಬಾಸ್ ಎ1, ಫಿರೋಜ್ ಎ2, ಮುಜಾಮಿಲ್ ಎ3, ಹಬೀಬ್ ಎ4, ಪೀರ್ ಪಾಷಾ ಎ5 ಸೇರಿದಂತೆ 17 ಆರೋಪಿಗಳನ್ನ ಹೆಸರಿಸಲಾಗಿದೆ.

news18-kannada
Updated:August 13, 2020, 11:36 AM IST
Bengaluru Violence - ಬೆಂಗಳೂರು ಗಲಭೆ: 9 ಎಫ್ಐಆರ್, 17 ಆರೋಪಿಗಳು – ನಾಲ್ವರ ಬಂಧನ
ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯ ದೃಶ್ಯ
  • Share this:
ಬೆಂಗಳೂರು(ಆ. 13): ಮೊನ್ನೆ ರಾತ್ರಿ ದೇವರ ಜೀವನಹಳ್ಳಿ ಸೇರಿದಂತೆ ಮೂರು ಪ್ರದೇಶಗಳಲ್ಲಿ ನಡೆದ ಗಲಭೆ ಘಟನೆಗಳ ಸಂಬಂಧ ಪೊಲೀಸರು ಈವರೆಗೆ 9 ಎಫ್​ಐಆರ್ ದಾಖಲಿಸಿರುವುದು ತಿಳಿದುಬಂದಿದೆ. ಡಿಜೆ ಹಳ್ಳಿಯಲ್ಲಿ 6 ಹಾಗೂ ಕಾಡುಗೊಂಡನಹಳ್ಳಿಯಲ್ಲಿ (ಕೆಜಿ ಹಳ್ಳಿ) 3 ಎಫ್​ಐಆರ್ ಹಾಕಲಾಗಿದೆ. ಕೆಜಿ ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ಗಳಲ್ಲಿ 17 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಇವರೆಲ್ಲರೂ ಎಸ್​ಡಿಪಿಐ ಸದಸ್ಯರೇ ಆಗಿದ್ದಾರೆ. ಕಾವಲ್ ಬೈರಸಂದ್ರದಲ್ಲೂ ಗಲಭೆಗಳಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ.

ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ನಲ್ಲಿ ಹೆಸರಿಸಲಾಗಿರುವ 17 ಆರೋಪಿಗಳ ಪೈಕಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಅಬ್ಬಾಸ್ ಎ1, ಫಿರೋಜ್ ಎ2, ಮುಜಾಮಿಲ್ ಎ3, ಹಬೀಬ್ ಎ4, ಪೀರ್ ಪಾಷಾ ಎ5 ಸೇರಿದಂತೆ 17 ಆರೋಪಿಗಳನ್ನ ಹೆಸರಿಸಲಾಗಿದೆ.

ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಫೈರೋಜ್ ಖಾನ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಪ್ಪು ಆರ್ಮಿ ಎಂಬ ಗ್ರೂಪ್ ರಚಿಸಿಕೊಂಡಿದ್ದ ಫೈರೋಜ್ ಖಾನ್, ಮುಂಚಿತವಾಗಿ ಅಂಗಡಿ ಬಂದ್ ಮಾಡುವುದು, ಗಲಭೆಯನ್ನ ಹೇಗೆ ಮಾಡಬೇಕು, ಯಾರ್ಯಾರು ಯಾವ್ಯಾವ ಜಾಗದಲ್ಲಿ ಇರಬೇಕು ಇತ್ಯಾದಿ ರೂಪುರೇಷೆ ಮಾಡಿದ್ದರೆನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು ಗಲಭೆ ಪ್ರಕರಣ: ಆರು ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು

ಈಗ ಬಂಧಿತವಾಗಿರುವ ನಾಲ್ವರು ಪ್ರಮುಖ ಆರೋಪಿಗಳು ಸೇರಿ 150 ಮಂದಿಯನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ.

ಇನ್ನು, ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ನವೀನ್​ನನ್ನು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ಧಾರೆ. ನಿನ್ನೆ ಈತನನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಯ ಅಗತ್ಯದ ಕಾರಣದಿಂದ ಈತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ: ಕೃಷ್ಣ ಜೈಲಿನಲ್ಲಿ ಹುಟ್ಟಿದ ದಿನವೇ ನಿಮಗೆ ಬಿಡುಗಡೆ ಬೇಕಾ?; ಜಾಮೀನು ಕೇಳಿದವನಿಗೆ ಸುಪ್ರೀಂಕೋರ್ಟ್​ ತಮಾಷೆಮೊನ್ನೆ ರಾತ್ರಿ 2-3 ಸಾವಿರದಷ್ಟು ಉದ್ರಿಕ್ತರು ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರ ಪ್ರದೇಶಗಳಿಗೆ ನುಗ್ಗಿ ಗಲಭೆ ನಡೆಸಿದರು. ನೂರಾರು ವಾಹನಗಳನ್ನ ಜಖಂಗೊಳಿಸಿದರು. ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನ ಸುಟ್ಟು ಹಾಕಿದರು. ನವೀನ್ ಮನೆಯನ್ನೂ ಹಾನಿ ಮಾಡಿದರು. ಪೊಲೀಸ್ ಠಾಣೆಗಳ ಮೇಲೂ ದಾಳಿ ಮಾಡಿದರು. ಆದರೆ, ಗಲಭೆ ನಿಯಂತ್ರಿಸಲು ಪೊಲೀಸರು ಮಾಡಿದ ಫೈರಿಂಗ್​ನಲ್ಲಿ ಮೂವರು ಗಲಭೆಕೋರರು ಸಾವನ್ನಪ್ಪಿದರು. ಈ ಘಟನೆಯಲ್ಲಿ 60 ಮಂದಿ ಪೊಲೀಸರಿಗೆ ಗಾಯಗಳಾಗಿದೆ.ಈ ದಾಳಿಯ ಹಿಂದೆ ಎಸ್​ಡಿಪಿಐ ಸಂಘಟನೆಯ ಕೈವಾಡ ಇದೆ ಎಂಬುದು ಪೊಲೀಸರ ಶಂಕೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಲು ಎಸ್​ಡಿಪಿಐ ಮುಖಂಡರು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದರು. ದೂರು ಸ್ವೀಕರಿಸಲು ಪೊಲೀಸರು ವಿಳಂಬ ಮಾಡಿದರು. ಇದರಿಂದ ಜನರು ಪ್ರತಿಭಟನೆ ಮಾಡಿದ್ದಾರೆ. ತಮಗೂ ಈ ಗಲಭೆಗೂ ಸಂಬಂಧ ಇಲ್ಲ ಎಂದು ಎಸ್​ಡಿಪಿಐ ಹೇಳಿಕೆ ನೀಡಿದೆ.
Published by: Vijayasarthy SN
First published: August 13, 2020, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading