Bengaluru Riots: ಬೆಂಗಳೂರು ಗಲಭೆ; ಪ್ರಮುಖ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಗವಾರ ಕಾರ್ಪೊರೇಟರ್ ಪತಿ ಖಲೀಂ ಪಾಷಾ ಮತ್ತು SDPI ಮುಖಂಡ ಮುಜಾಮೀಲ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ.

news18-kannada
Updated:August 27, 2020, 9:35 AM IST
Bengaluru Riots: ಬೆಂಗಳೂರು ಗಲಭೆ; ಪ್ರಮುಖ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​
ಡಿಜೆ ಹಳ್ಳಿ ಗಲಭೆಯ ಒಂದು ದೃಶ್ಯ
  • Share this:
ಬೆಂಗಳೂರು (ಆ. 27): ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಶದಲ್ಲಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಗವಾರ ಕಾರ್ಪೊರೇಟರ್ ಪತಿ ಖಲೀಂ ಪಾಷಾ ಮತ್ತು SDPI ಮುಖಂಡ ಮುಜಾಮೀಲ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ.

ಇಬ್ಬರು ಆರೋಪಿಗಳನ್ನು ಕೆಜಿ ಹಳ್ಳಿಯಲ್ಲಿ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರ ಮುಂದೆ ತಾನು ಗಲಭೆ ಸ್ಥಳಕ್ಕೆ ಬಂದಿರಲಿಲ್ಲ ಎಂದು ಖಲೀಂ ಪಾಷಾ ಹೇಳಿದ್ದರು. ನಾನು ತನ್ನ ಅತ್ತೆ ಮನೆಯಲ್ಲಿ ಇದ್ದೆ, ಗಲಾಟೆ ಆಗಿದೆ ಎಂಬ ವಿಚಾರ ತಿಳಿಯಿತು. ನಂತರ ನಾನು ಪೊಲೀಸ್ ಠಾಣೆ ಬಳಿ ಬಂದಿದ್ದೆ ಎಂದು ಖಲೀಂ ಪಾಷಾ ಹೇಳಿಕೆ ನೀಡಿದ್ದರು. ಆದರೆ, ಪೊಲೀಸ್ ತನಿಖೆಯಲ್ಲಿ ಖಲೀಂ ಪಾಷಾ ಪರೋಕ್ಷವಾಗಿ ಗಲಭೆಕೋರರಿಗೆ ಸಹಕಾರ ನೀಡಿ ಉದ್ರಿಕ್ತಗೊಳಿಸಿದ್ದ ವಿಷಯ ಪತ್ತೆಯಾಗಿದೆ.

ಇದನ್ನೂ ಓದಿ: ದೀರ್ಘ ಕೋಮಾಗೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ; ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

ಇನ್ನು, ಸಿಸಿಬಿ ಮುಂದೆ ತಾನು ಏನೂ ತಪ್ಪು ಮಾಡಿಯೇ ಇಲ್ಲ ಎಂದು ಮುಜಾಮೀಲ್ ಹೇಳಿಕೆ ನೀಡಿದ್ದ. ನಾವು ದೂರು ನೀಡಲು ಬಂದಿದ್ದೆವು. ಗಲಾಟೆ ಮಾಡಲು ಮುಂದಾದವರಿಗೆ ಶಾಂತಿಯುತವಾಗಿ ವರ್ತಿಸುವಂತೆ ಹೇಳಿದ್ದೆ. ದೂರಿನ ಪ್ರತಿ ಮಾತ್ರ ಹಿಡಿದು ಬಂದಿದ್ದೆವು. ಆದರೆ, ಗಲಾಟೆ ಅಯ್ತು ಎಂದು ಮುಜಾಮೀಲ್ ಹೇಳಿದ್ದ. ನಾನೂ ಸಹ ಗಲಾಟೆ ನಿಯಂತ್ರಿಸಲು ಯತ್ನಿಸಿದ್ದಾಗಿ ಪೊಲೀಸರ ಮುಂದೆ ಹೇಳಿದ್ದ. ಸದ್ಯ ಇಬ್ಬರು ಆರೋಪಿಗಳ ಮೊಬೈಲ್​ಗಳನ್ನು ವಶಕ್ಕೆ ಪಡೆದು ಟೆಕ್ನಿಕಲ್ ಲ್ಯಾಬ್​ಗೆ ಕಳುಹಿಸಲಾಗಿದೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಗೆ ಸಂಬಂಧಿಸಿದಂತೆ ಬಂಧಿತ ಸಮೀವುದ್ದೀನ್ ಮೊಬೈಲ್​ನಲ್ಲಿ ಹಲವು ಪೊಲೀಸ್ ಅಧಿಕಾರಿಗಳ ನಂಬರ್ ಪತ್ತೆಯಾಗಿವೆ. ಆತನ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರ ನಂಬರ್​ಗಳು ಸಿಕ್ಕಿದ್ದು, ನಗರದಲ್ಲಿ ಕೆಲಸ ಮಾಡುವ ಹಲವು ಪೊಲೀಸರ ಪೋನ್ ನಂಬರ್ ಇತ್ತು. ಇನ್​ಸ್ಪೆಕ್ಟರ್​, ಎಸಿಪಿ, ಡಿಸಿಪಿ ಮಟ್ಟದ ಅಧಿಕಾರಿಗಳ ಪರ್ಸನಲ್ ನಂಬರ್​ಗಳು ಸಮೀವುದ್ದೀನ್ ಮೊಬೈಲ್​ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಇದಲ್ಲದೆ ಸಮೀವುದ್ದೀನ್ ಎನ್​ಜಿಓ ಕೆಲಸದ ನೆಪದಲ್ಲಿ ಹಲವು ಬಾರಿ ಬೆಂಗಳೂರು ಕಮೀಷನರ್ ಕಚೇರಿಗೂ ಭೇಟಿ ನೀಡಿದ್ದ. ನಿಷೇಧಿತ ಸಂಘಟನೆ ಅಲ್ ಹಿಂದ್ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸಮೀವುದ್ದೀನ್​ನನ್ನು ಬಂಧಿಸಲಾಗಿದೆ.
Published by: Sushma Chakre
First published: August 27, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading